ಪೊರಕೆಯಿಂದ ಹೊಡೆದು ಮಹಿಳೆಯಿಂದ ಜಾತಿ ನಿಂದನೆ; ನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಮಹಿಳೆಯೊಬ್ಬರು ಪೊರಕೆಯಿಂದ ಹೊಡೆದು ಜಾತಿನಿಂದನೆ ಮಾಡಿದರು ಎಂಬ ಕಾರಣಕ್ಕೆ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಲೂರು ತಾಲೂಕಿನ ಹುರುಳಗೆರೆ ಗ್ರಾಮದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲಾರ: ಮಹಿಳೆಯೊಬ್ಬರು ಪೊರಕೆಯಿಂದ ಹೊಡೆದು ಜಾತಿನಿಂದನೆ ಮಾಡಿದರು ಎಂಬ ಕಾರಣಕ್ಕೆ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಲೂರು ತಾಲೂಕಿನ ಹುರುಳಗೆರೆ ಗ್ರಾಮದಲ್ಲಿ ನಡೆದಿದೆ.

ಶ್ರೀನಿವಾಸ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶ್ರೀನಿವಾಸ್ ಹಾಗೂ ಅಶೋಕ್ ಇಬ್ಬರೂ ಸ್ನೇಹಿತರಾಗಿದ್ದು, ದಿನಗೂಲಿ ಕಾರ್ಮಿಕರಾಗಿದ್ದಾರೆ.

ಆಶೋಕ್ ತಮ್ಮ ಪತ್ನಿ ಮಂಜುಳಾ ಅವರ ಶೀಲ ಶಂಕಿಸಿದ್ದು, ಜಗಳ ಮಾಡಿದ್ದರು. ಇದರಿಂದ ಕುಪಿತಗೊಂಡಿದ್ದ ಮಂಜುಳಾ ಅವರು ಶ್ರೀನಿವಾಸ್ ಅವರ ಮನೆಗೆ ತೆರಳಿ ನಿಂದನೆ ಮಾಡಿದ್ದಾರೆ. ನನ್ನ ಮನೆಯಲ್ಲಿ ಸಮಸ್ಯೆ ಸೃಷ್ಟಿಸುತ್ತಿರುವುದು ನೀನೇ ಎಂದು ದೂಷಿಸಿದ್ದಾರೆ. ಅಲ್ಲದೆ, ಪೊರಕೆ ಹಿಡಿದು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಇದರಿಂದ ಮನನೊಂದ ಶ್ರೀನಿವಾಸ್ ಅವರು, ಅವಮಾನ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com