ಅಪಘಾತ ಕಡಿಮೆ ಮಾಡಲು KSRTC ಕ್ರಮ: ಬಸ್ ಚಾಲನೆಗೂ ಮುನ್ನ ಚಾಲಕರಿಗೆ ಬ್ರೆತ್ಅಲೈಸರ್ ಪರೀಕ್ಷೆ ಕಡ್ಡಾಯ

ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಎಲ್ಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಕಡ್ಡಾಯವಾಗಿ ಡಿಪೋಗಳಲ್ಲಿ ಬ್ರೆತ್ಅಲೈಸರ್ ಪರೀಕ್ಷೆಗೆ (ಉಸಿರು-ವಿಶ್ಲೇಷಕ ಪರೀಕ್ಷೆ) ಒಳಗಾಗಬೇಕಾಗುತ್ತದೆ ಮತ್ತು ಅದರಲ್ಲಿ ಯಶಸ್ವಿಯಾದ ನಂತರವೇ ಚಾಲನೆ ಮಾಡಲು ಅವಕಾಶ ನೀಡಲಾಗುತ್ತದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಎಲ್ಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಕಡ್ಡಾಯವಾಗಿ ಡಿಪೋಗಳಲ್ಲಿ ಬ್ರೆತ್ಅಲೈಸರ್ ಪರೀಕ್ಷೆಗೆ (ಉಸಿರು-ವಿಶ್ಲೇಷಕ ಪರೀಕ್ಷೆ) ಒಳಗಾಗಬೇಕಾಗುತ್ತದೆ ಮತ್ತು ಅದರಲ್ಲಿ ಯಶಸ್ವಿಯಾದ ನಂತರವೇ ಚಾಲನೆ ಮಾಡಲು ಅವಕಾಶ ನೀಡಲಾಗುತ್ತದೆ. ಮದ್ಯಪಾನ ಮಾಡಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಅಪಘಾತಗಳನ್ನು ಕಡಿಮೆ ಮಾಡಲು ಪರಿಹಾರಗಳನ್ನು ಕಂಡುಕೊಳ್ಳಲು ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯ ನಂತರ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೆಎಸ್‌ಆರ್‌ಟಿಸಿ ಚಾಲಕರು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವುದು ಹಾಗೂ ಸಂಚಾರ ನಿಯಮ ಉಲ್ಲಂಘಿಸುವುದು ಬಸ್‌ಗಳ ಅಪಘಾತಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ. ನಿಗಮವು 2016ರಲ್ಲಿಯೇ ತನ್ನ ಚಾಲಕರು ಕುಡಿದು ವಾಹನ ಚಲಾಯಿಸುವುದನ್ನು ತಪ್ಪಿಸಲು ಡಿಜಿಟಲ್ ಬ್ರೆತ್ಅಲೈಸರ್ ಗಳನ್ನು ಪ್ರಾರಂಭಿಸಿತು. ವಾಹನಗಳನ್ನು ಚಾಲಕರಿಗೆ ಅವರಿಗೆ ಹಸ್ತಾಂತರಿಸುವ ಮೊದಲು ಅವರು ಬಸ್ ಡಿಪೋಗಳಲ್ಲಿ ಬ್ರೆತ್ಅಲೈಸರ್ ಪರೀಕ್ಷೆಗೆ ಒಳಗಾಗಬೇಕಾಗಿತ್ತು. ಆದರೆ, ಕಡ್ಡಾಯವಾಗಿ ಈ ಪರೀಕ್ಷೆಯನ್ನು ನಡೆಸಿಲ್ಲ ಎಂದು ನಿಗಮದ ಮೂಲಗಳು ತಿಳಿಸಿವೆ.

ಮಾರ್ಚ್ 26 ರಂದು, ಕೆಎಸ್ಆರ್‌ಟಿಸಿ ಬಸ್ಸುಗಳು ಅಪಘಾತಕ್ಕೀಡಾಗುತ್ತಿರುವ ಬಗ್ಗೆ ಚರ್ಚಿಸಲು ಬಸ್ ನಿಗಮದ ಉನ್ನತ ಅಧಿಕಾರಿಗಳು ಅದರ ಎಂಡಿ ಜೊತೆ ಸಭೆ ನಡೆಸಿದರು. ಅಪಘಾತ ಪ್ರಕರಣಗಳ ವಿಶ್ಲೇಷಣೆಯ ಸಂದರ್ಭದಲ್ಲಿ, ಚಾಲಕರನ್ನು ಕಡ್ಡಾಯವಾಗಿ ಉಸಿರು-ವಿಶ್ಲೇಷಕ ಪರೀಕ್ಷೆಗಳಿಗೆ ಒಳಪಡಿಸುವ ಪರವಾಗಿ ಉನ್ನತ ಅಧಿಕಾರಿಗಳು ಹೇಳಿದರು. ಹೀಗಾಗಿ, ಕೆಎಸ್‌ಆರ್‌ಟಿಸಿಯ ಭದ್ರತೆ ಮತ್ತು ಜಾಗೃತ ಇಲಾಖೆಯ ನಿರ್ದೇಶಕರು ಅದೇ ದಿನ ಎಲ್ಲಾ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಚಾಲಕರು, ನಿರ್ವಾಹಕರು ಮತ್ತು ಇತರ ಸಿಬ್ಬಂದಿಯ ಉಸಿರು ಪರೀಕ್ಷೆಯನ್ನು ಪ್ರತಿದಿನ ನಡೆಸುವಂತೆ ಮತ್ತು ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಬಸ್‌ಗಳನ್ನು ಚಾಲಕರಿಗೆ ಹಸ್ತಾಂತರಿಸುವ ಮೊದಲು ಡಿಪೋಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಬೇಕು. ಕಾರ್ಯಾಚರಣೆಯ ಸಮಯದಲ್ಲಿ ನಿಯಂತ್ರಣ ಪಾಯಿಂಟ್ ಗಳಲ್ಲಿ, ಚಾಲಕರು ರಾತ್ರಿಯಿಡೀ ತಂಗುವ ವಸತಿಗೃಹಗಳಲ್ಲಿ ಮತ್ತು ಚಾಲಕರು ರಾತ್ರಿ ಕರ್ತವ್ಯದಲ್ಲಿರುವ ನಿರ್ದಿಷ್ಟ ಸ್ಥಳಗಳಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com