ಬೆಂಗಳೂರು: KSR ರೈಲು ನಿಲ್ದಾಣದಲ್ಲಿ ಬಿಬಿಎಂಪಿ ಗುತ್ತಿಗೆದಾರರಿಂದ ತ್ಯಾಜ್ಯ ವಿಲೇವಾರಿ; ಓಡಾಟಕ್ಕೆ ತೊಂದರೆ!

ಪ್ರವೇಶ ದ್ವಾರದಲ್ಲಿ ಬಿಬಿಎಂಪಿ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಗೊಂದಲವನ್ನು ಹೆಚ್ಚಿಸಿದೆ. ಪ್ರವೇಶದ್ವಾರವು ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನಿಶ್ಚಿತತೆಯನ್ನು ಉಂಟುಮಾಡುತ್ತಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರವೇಶ ದ್ವಾರ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರವೇಶ ದ್ವಾರ

ಬೆಂಗಳೂರು: ನಗರದ ಗುಬ್ಬಿ ತೋಟದಪ್ಪ ರಸ್ತೆ (ರೈಲು ನಿಲ್ದಾಣ) ಪ್ರವೇಶಿಸುತ್ತಿದ್ದಂತೆಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ದೊಡ್ಡ ನಾಮಫಲಕವು ಪ್ರಯಾಣಿಕರನ್ನು ಸ್ವಾಗತಿಸುತ್ತದೆ. ಆದಾಗ್ಯೂ, ಕಲಾತ್ಮಕವಾದ ವಿನ್ಯಾಸ ಮತ್ತು ವಿಶಾಲವಾದ ಪಾರ್ಕಿಂಗ್ ಸೌಲಭ್ಯಗಳ ಹೊರತಾಗಿಯೂ, ಗಮನಾರ್ಹವಾದ 3,500 ಚದರ ಮೀಟರ್ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಮತ್ತು1.65 ಕೋಟಿ ರೂಪಾಯಿ ವೆಚ್ಚದ ಪ್ರವೇಶ ದ್ವಾರದಲ್ಲಿ ಬಿಬಿಎಂಪಿ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಗೊಂದಲವನ್ನು ಹೆಚ್ಚಿಸಿದೆ. ಪ್ರವೇಶದ್ವಾರವು ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನಿಶ್ಚಿತತೆಯನ್ನು ಉಂಟುಮಾಡುತ್ತಿದೆ.

ನಿಲ್ದಾಣಕ್ಕೆ 'ಮೂರನೇ ಪ್ರವೇಶ' ದ್ವಾರ ಇದಾಗಿದ್ದು, ಜೂನ್ 2019 ರಲ್ಲಿ ಆಗಿನ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಸಿ ಅಂಗಡಿ ಇದಕ್ಕೆ ಚಾಲನೆ ನೀಡಿದ್ದರು. ಇದರಿಂದ ಕೆಲವೇ ಅಡಿಗಳಷ್ಟು ದೂರದಲ್ಲಿರುವ ರೈಲ್ವೆ ನಿಲ್ದಾಣದ ಮುಖ್ಯ ದ್ವಾರದ ದಟ್ಟಣೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿತ್ತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರವೇಶ ದ್ವಾರ
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಶೀಘ್ರ ಫೇಶಿಯಲ್ ರೆಕಗ್ನಿಷಿನ್ ವ್ಯವಸ್ಥೆ!

ಖೋಡೆ ಸರ್ಕಲ್‌ನಿಂದ ಶಾಂತಲಾ ಸಿಲ್ಕ್ಸ್‌ವರೆಗೆ 480 ಮೀಟರ್‌ವರೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ಪೂರ್ಣಗೊಂಡಿದ್ದು, ಶಾಂತಲಾ ಜಂಕ್ಷನ್‌ ಮುಂಭಾಗದ ಸ್ವಲ್ಪ ಭಾಗ ಇನ್ನೂ ಆಗಿಲ್ಲ. ಇಲ್ಲಿನ ಕಾಮಗಾರಿಗೆ ಸಂಬಂಧಿಸಿದ ತ್ಯಾಜ್ಯಗಳನ್ನು ರೈಲ್ವೆ ನಿಲ್ದಾಣದ ಒಳಗೆ ಹಾಕಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು. ಗುತ್ತಿಗೆದಾರ ಶ್ರೇಯಸ್ ನಾರಾಯಣ ರೈಲ್ವೇ ಆವರಣದ ಬಳಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, "ನಾನು ಮಾಡಿರುವುದು ಅಪರಾಧವಲ್ಲ. ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು! ಇದು ನಮ್ಮ (ಬಿಬಿಎಂಪಿ) ಮತ್ತು ರೈಲ್ವೆಯ ನಡುವಣ ಒಪ್ಪಂದ ಎಂದರು. ಇದು ರೈಲು ಪ್ರಯಾಣಿಕರಿಗೆ ಮೀಸಲಾದ ಸಾರ್ವಜನಿಕ ಸ್ಥಳ ಎಂದು ಹೇಳಿದಾಗ ಶಾಂತಗೊಂಡ ಅವರು ಸೋಮವಾರ ತ್ಯಾಜ್ಯವನ್ನು ತೆಗೆದುಹಾಕಲಾಗುವುದು ಎಂದು ಹೇಳಿದರು.

ಭಾನುವಾರವಷ್ಟೇ ತಾತ್ಕಾಲಿಕವಾಗಿ ತ್ಯಾಜ್ಯಗಳನ್ನು ಸುರಿಯಲಾಗಿದ್ದು, ಶೀಘ್ರವೇ ಅದನ್ನು ತೆಗೆಯಲಾಗುವುದು ಎಂದು ತಿಳಿಸಿದರು. ಆದರೆ, ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದು ದೂರಿನ ಹೊರತಾಗಿಯೂ ಶುಕ್ರವಾರ ಆವರಣಕ್ಕೆ ಭೇಟಿ ನೀಡಿದ್ದ ವರದಿಗಾರರು ತ್ಯಾಜ್ಯ ಸುರಿಯುವುದನ್ನು ಕಂಡುಹಿಡಿದರು. ಮೂರನೇ ಪ್ರವೇಶ ದ್ವಾರದ ಹತ್ತಿರದ ಪ್ರದೇಶಗಳ ಮಕ್ಕಳು ಆಟದ ಪ್ರದೇಶವಾಗಿ ಬಳಸುತ್ತಿದ್ದರು. ಪ್ರವೇಶ ದ್ವಾರವು ಪ್ಲಾಟ್‌ಫಾರ್ಮ್ ಒಂದಕ್ಕೆ ನೇರ ಪ್ರವೇಶವನ್ನು ನೀಡುತ್ತದೆ ಮತ್ತು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್ ಸ್ಥಳವನ್ನು ಹೊಂದಿದೆ.

ಇಲ್ಲಿರುವ ಒಂದು ಟಿಕೆಟ್ ಕೌಂಟರ್ 600 ಟಿಕೆಟ್‌ಗಳನ್ನು ವಿತರಿಸುತ್ತದೆ ಮತ್ತು ವಿಭಾಗಕ್ಕೆ ಸರಾಸರಿ 75,000 ರೂ ಆದಾಯವನ್ನು ಪಡೆಯುತ್ತದೆ. ಕೆಎಸ್‌ಆರ್ ರೈಲು ನಿಲ್ದಾಣದ ಮುಖ್ಯ ದ್ವಾರವು ವಾಹನ ದಟ್ಟಣೆಯ ಜೊತೆಗೆ ಪ್ರತಿದಿನ ಸರಾಸರಿ 1.75 ಲಕ್ಷ ಪಾದಚಾರಿಗಳು ಬಳಸುವಂತಹ ಪ್ರದೇಶವಾಗಿದೆ ಎಂದು ಇಧಿಕಾರಿಗಳು ತಿಳಿಸಿದರು. ಹೊಸ ಪ್ರವೇಶ ದ್ವಾರವನ್ನು ಉತ್ತಮವಾಗಿ ಅಭಿವೃದ್ಧಿಪಡಿಸುವಲ್ಲಿ ರೈಲ್ವೆ ಏಕೆ ವಿಫಲವಾಗಿದೆ ಎಂದು ಕೇಳಿದಾಗ, ಎರಡು ಬಾರಿ ಟೆಂಡರ್‌ ಕರೆಯಲಾಗಿದೆ. ಮೊದಲ ಬಾರಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎರಡನೇ ಬಾರಿ ಟೆಂಡರ್ ಪಡೆದವರು ಪಾರ್ಕಿಂಗ್ ನಿರ್ವಹಿಸಲಿಲ್ಲ. ಬಿಬಿಎಂಪಿ ಸಂಬಂಧಿತ ಕೆಲಸಗಳು ನಮಗೆ ಮುಂದುವರಿಯಲು ಅಡ್ಡಿಯಾಯಿತು. ಮಾದರಿ ನೀತಿ ಸಂಹಿತೆ ತೆರವಾದ ಬಳಿಕ ಮತ್ತೊಂದು ಸುತ್ತಿನ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com