ಅಬ್ದುಲ್ ಮತೀನ್ ತಾಹಾ
ಅಬ್ದುಲ್ ಮತೀನ್ ತಾಹಾ

ಬೆಂಗಳೂರು ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಅಬ್ದುಲ್ ಮತೀನ್ ತಾಹಾಗಾಗಿ NIA ತೀವ್ರ ಶೋಧ!

ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಮತೀನ್ ತಾಹಾಗಾಗಿ ಎನ್ಐಎ ತನ್ನ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
Published on

ಬೆಂಗಳೂರು: ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಮತೀನ್ ತಾಹಾಗಾಗಿ ಎನ್ಐಎ ತನ್ನ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾ. 1ರಂದು ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಮಾ. 29ರಂದು ಆರೋಪಿಗಳ ಫೋಟೋ ಸಹಿತ ಮತ್ತೊಂದು ಜಾಹೀರಾತು ನೀಡಿದ್ದು, ಈ ಆರೋಪಿಗಳನ್ನು ಹಿಡಿದುಕೊಟ್ಟವರಿಗೆ ತಲಾ ರೂ 10 ಲಕ್ಷ ಬಹುಮಾನವನ್ನು ಘೋಷಿಸಿದೆ.

ಆರೋಪಿಗಳಾದ ಅಬ್ದುಲ್ ಮತೀನ್ ಹಾಗೂ ಆತನ ಸಹಚರ ಮುಸಾಫಿರ್ ಹುಸೇನ್ ಶಾಜಿಬ್ ಅವರ ಫೋಟೋಗಳ ಜೊತೆಗೆ, ಅವರ ದೇಹಾಕೃತಿ, ವಯಸ್ಸು, ಅವರ ಫ್ಯಾಶನ್ ಹವ್ಯಾಸ, ಅವರುಗಳು ಸಾಮಾನ್ಯವಾಗಿ ಉಳಿದುಕೊಳ್ಳಲು ಆಯ್ಕೆ ಮಾಡಿಕೊಳ್ಳುವ ಜಾಗಗಳನ್ನು ಪಟ್ಟಿ ಮಾಡಿ ಎನ್ಐಎ ಪ್ರಕಟಣೆ ನೀಡಿದೆ.

ಎನ್‌ಐಎ ಅಬ್ದುಲ್ ಮತೀನ್ ತಾಹಾಗೆ ಬಹುಮಾನ ಘೋಷಿಸಿರುವುದು ಇದು ಎರಡನೇ ಬಾರಿಯಾಗಿದೆ. ಮೇ 2020 ರಲ್ಲಿ ರಾಜ್ಯದಲ್ಲಿ ಐಸಿಸ್‌ ಚಟುವಟಿಕೆ ಪ್ರಕರಣದಲ್ಲಿಯೂ (RC-4/2020/NIA/DLI) ಎನ್ಐಎ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

ಅಬ್ದುಲ್ ಮತೀನ್ ತಾಹಾ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಚಿಕ್ಕಮಗಳೂರಿನಲ್ಲೂ ಉಗ್ರರ ಜಾಲ ಪತ್ತೆ!

ಅಬ್ದುಲ್ ಮತೀನ್ ಪದವೀಧರರಾಗಿದ್ದು, ಮೂಲತಃ ಚಿತ್ರದುರ್ಗದವನಾಗಿದ್ದಾನೆ. ಆದರೆ, ತಾಯಿಯೊಂದಿಗಿರಲು ತೀರ್ಥಹಳ್ಳಿಗೆ ತೆರಳಿದ್ದ. ನಂತರ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿದ್ದ ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಮೂಲಗಳು ತಿಳಿಸಿವೆ.

ತೀರ್ಧಹಳ್ಳಿಯಲ್ಲಿದ್ದ ಈತ ಸುಮಾರು 12 ಮಂದಿ ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆಗೆ ಸೇರ್ಪಡೆಗೊಳಿಸಿದ್ದು, ರಾಜ್ಯದಲ್ಲಿ ನಡೆದ ಎಲ್ಲಾ ಭಯೋತ್ಪಾದಕ ಚಟುವಟಿಕೆಗಳ ಹಿಂದೆ ಮತೀನ್ ತಾಹಾ ಇದ್ದಾನೆ ಎಂದು ಹೇಳಲಾಗುತ್ತಿದೆ.

ತಮಿಳುನಾಡಿನಲ್ಲಿ ನಡೆದ ಹಿಂದೂ ಮುಖಂಡನ ಹತ್ಯೆಯಲ್ಲಿಯೂ ಈತ ಭಾಗಿಯಾಗಿದ್ದು. ಮಂಗಳೂರು ಗೀಚುಬರಹ ಪ್ರಕರಣದಲ್ಲೂ ಈತನ ಹೆಸರು ಕೇಳಿ ಬಂದಿತ್ತು. ಆಗಸ್ಟ್ 15, 2022 ರಂದು ಶಿವಮೊಗ್ಗದಲ್ಲಿ ಸಾವರ್ಕರ್ ಅವರ ಪೋಸ್ಟರ್ ಅನಾವರಣ ಸಂದರ್ಭದಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಪ್ರೇಮ್ ಸಿಂಗ್ ಅವರಿಗೆ ಇರಿತ; 2022 ರ ಸೆಪ್ಟೆಂಬರ್‌ನಲ್ಲಿ ತುಂಗಭದ್ರಾ ನದಿಯ ಬಳಿ ರಾಷ್ಟ್ರಧ್ವಜ ಸುಟ್ಟ ಪ್ರಕರಣ ಮತ್ತು ಮಂಗಳೂರು ಆಟೋರಿಕ್ಷಾ ಪ್ರೆಶರ್ ಕುಕ್ಕರ್ ಸ್ಫೋಟ ಪ್ರಕರಣದಲ್ಲೂ ಈತನ ಹೆಸರು ಕೇಳಿ ಬಂದಿತ್ತು.

ಶಿವಮೊಗ್ಗ ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಶಾರೀಕ್ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿತ್ತು. ಆದರೆ, ಶರೀಖ್ ನನ್ನು ಪರಿಚಯಿಸಿದ್ದೇ ಅಬ್ದುಲ್ ಮತೀನ್ ತಾಹಾ ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ.

ಅಬ್ದುಲ್ ಮತೀನ್ ತಾಹಾ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಬಂಧನ

ರಾಜ್ಯದಲ್ಲಿ ನಡೆದ ಭಯೋತ್ಪಾದಕರ ಚಟುವಟಿಕೆ ಬಳಿಕ ಆರೋಪಿಗಳಾದ ಸೈಯದ್ ಯಾಸಿನ್, ಮಾಜ್ ಮುನೀರ್ ಅಹ್ಮದ್ ಮತ್ತು ಮೊಹಮ್ಮದ್ ಶಾರಿಕ್ ದೃಶ್ಯವನ್ನು ಅಪ್‌ಲೋಡ್ ಮತೀನ್ ಗೆ ಕಳುಹಿಸುತ್ತಿದ್ದರು. ಪ್ರತಿ ಕಾರ್ಯಕ್ಕೂ ಮತೀನ್ ಆರೋಪಿಗಳಿಗೆ 10,000 ಮತ್ತು 15,000 ರೂ.ಗಳವರೆಗೆ ಹಣವನ್ನು ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಎನ್ಐಎ ಮತೀನ್ ಗಾಗಿ ತೀವ್ರ ಹುಡುಕಾಟ ಆರಂಭಿಸಿದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಮತೀನ್ ಓಡಾಟದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ.

ಎರಡೂ ರಾಜ್ಯಗಳಲ್ಲಿಯೂ ಮತೀನ್ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿರುವ ಸಿಸಿಟಿವಿ ದೃಶ್ಯಗಳು ಕಂಡು ಬಂದಿದ್ದು, ಈ ದೃಶ್ಯಾವಳಿಗಳು ಮತೀನ್ ದೇಶ ಬಿಟ್ಟು ಹೋಗಿಲ್ಲ ಎಂಬುದನ್ನು ತೋರಿಸುತ್ತಿದೆ.

ಕನ್ನಡದ ಶ್ರೇಷ್ಠ ಕವಿ ಕುವೆಂಪು, 1956ರಲ್ಲಿ ಕರ್ನಾಟಕದ ಮೂರನೇ ಸಿಎಂ ಆಗಿದ್ದ ಕಡಿದಾಳ್ ಮಂಜಪ್ಪ, ಬಿಜೆಪಿ ನಾಯಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ನಾಯಕರಿಂದ ಹೆಸರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಇದೀಗ ಗುಪ್ತಚರ ದಳದ ಕಣ್ಗಾವಲಿಗೊಳಗಾಗಿದೆ. 2019ರಿಂದ ರಾಜ್ಯದಲ್ಲಿ ಕಂಡು ಬಂದ ಭಯೋತ್ಪಾದಕ ಪ್ರಕರಣಗಳಲ್ಲಿ ಈವರೆಗೂ ಕೇಳಿ ಬಂದಿರುವ 7-8 ಭಯೋತ್ಪಾದಕರು ತೀರ್ಥಹಳ್ಳಿಯವರೇ ಆಗಿದ್ದಾರೆಂಬುದ ಗಮನಾರ್ಹ ವಿಚಾರವಾಗಿದೆ. ಆರೋಪಿಗಳೆಲ್ಲರೂ ತಮ್ಮ ಕುಟುಂಬಗಳನ್ನು ತೊರೆದು ತಾಲ್ಲೂಕಿನಿಂದ ಪಲಾಯನ ಮಾಡಿ ಉಗ್ರ ಸಂಘಟನೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com