ಕಲುಷಿತ ನೀರು; ಸ್ವಾಸ್ಥ್ಯಕ್ಕೆ ಎರವಾಗುತ್ತಿರುವ ಬ್ಯಾಕ್ಟೀರಿಯಾ, ನಗರದಲ್ಲಿ ಹೆಚ್ಚುತ್ತಿದೆ ಕಾಲರಾ!

ನೀರಿನ ಬಿಕ್ಕಟ್ಟು ಹಾಗೂ ಬಿಸಿಲ ದಗೆ ನಡವೆಯೇ ಕಲುಷಿತ ನೀರು ಕೂಡ ಜನರನ್ನು ಕಾಡತೊಡಗಿದೆ. ಕಲುಷಿತ ನೀರಿನಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ಶೇ.40ರಷ್ಟು ಹೆಚ್ಚಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನೀರಿನ ಬಿಕ್ಕಟ್ಟು ಹಾಗೂ ಬಿಸಿಲ ದಗೆ ನಡವೆಯೇ ಕಲುಷಿತ ನೀರು ಕೂಡ ಜನರನ್ನು ಕಾಡತೊಡಗಿದೆ. ಕಲುಷಿತ ನೀರಿನಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ಶೇ.40ರಷ್ಟು ಹೆಚ್ಚಾಗಿದೆ.

ತಿಂಗಳಿಗೆ ಒಂದು ಅಥವಾ ಎರಡು ಕಾಲರಾ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಅಂದರೆ ಮಾರ್ಚ್‌ನಲ್ಲಿ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಆರರಿಂದ ಏಳು ಪ್ರಕರಣಗಳು ದಾಖಲಾಗಿವೆ.

ರಸ್ತೆಬದಿಯ ಆಹಾರ ಸೇವನೆ ಮಾಡಿದ ಜನರಲ್ಲಿ ಅತೀ ಹೆಚ್ಚು ಕಾಲರಾ ಪತ್ತೆಯಾಗಿವೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ನಗರದಲ್ಲಿ ತೀವ್ರ ನೀರಿನ ಕೊರತೆ ಎದುರಾಗಿದ್ದು, ಕಲುಷಿತ ನೀರಿನಿಂದ ತಿನಿಸುಗಳನ್ನು ತಯಾರಿಸುವ ಸಾಧ್ಯತೆಗಳಿದ್ದು. ಇದರಿಂದ ಕಾಲರಾ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಮತ್ತು ತೀವ್ರ ನಿಗಾ ಘಟಕದ (ಐಸಿಯು) ಮುಖ್ಯಸ್ಥ ಡಾ.ರಮೇಶ್ ಜಿ.ಎಚ್ ಮಾತನಾಡಿ, ‘ಪಾನಿಪುರಿ’ಯಂತಹ ಬೀದಿ ಆಹಾರ, ಜ್ಯೂಸ್ ಮತ್ತಿತರ ವಸ್ತುಗಳ ಸೇವನೆಯೇ ಇಂತಹ ಕಾಯಿಲೆಗಳಿಗೆ ಕಾರಣ. ಕುಡಿಯುವ ನೀರಿನ ಮಾಲಿನ್ಯವು ಮತ್ತೊಂದು ಗಮನಾರ್ಹ ಅಂಶವಾಗಿದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಬೇಸಿಗೆ ಕಾಲದಲ್ಲಿ ಕಾಡುವ ಉಷ್ಣದ ಗುಳ್ಳೆಗಳು (ಕುಶಲವೇ ಕ್ಷೇಮವೇ)

ಕುಡಿಯುವ ನೀರಿನ ಮಾಲಿನ್ಯವು ಮತ್ತೊಂದು ಗಮನಾರ್ಹ ಅಂಶವಾಗಿದೆ. ದೇಹದಲ್ಲಿನ ಎಲೆಕ್ಟ್ರೋಲೈಟ್ ಅಸಮತೋಲನದಿಂದ ಉಂಟಾಗುವ ಆಯಾಸ, ವಾಂತಿ ಮತ್ತು ಅತಿಸಾರ, ಕಾಲರಾ ರೋಗಲಕ್ಷಣಗಳಾಗಿವೆ. ದೇಹದಲ್ಲಿನ ನಿರ್ಜಲನವು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರಬಹುದು. ಅಂತಿಮವಾಗಿ ರೋಗಿಯ ಸಾವಿಗೆ ಕಾರಣವಾಗು ಸಾಧ್ಯತೆಗಳಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಆಸ್ಟರ್ ಸಿಎಂಐ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ - ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್‌ನ ಪ್ರಮುಖ ಸಲಹೆಗಾರ ಡಾ ಚೇತನ್ ಗಿಣಿಗೇರಿ ಮಾತನಾಡಿ, ಕಳೆದ ಕೆಲವು ದಿನಗಳಲ್ಲಿ ಆಸ್ಪತ್ರೆಯಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.

ಇದರಂತೆ ಕಾಲರಾ ತಡೆಗಟ್ಟುವ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದ ಅವರು, ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಖಾತ್ರಿಪಡಿಸಬೇಕು, ನೈರ್ಮಲ್ಯವನ್ನು ಹೆಚ್ಚಿಸಬೇಕು ಹಾಗೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಲಸಿಕೆಯನ್ನು ನೀಡಬೇಕು. ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸಬೇಕೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com