Silk Board Junction: ಜೂನ್ ವೇಳೆಗೆ 'ಡಬಲ್ ಡೆಕ್ಕರ್ ಮೇಲ್ಸೇತುವೆ' ಸಿದ್ಧ; ಸಿಲ್ಕ್ ಬೋರ್ಡ್ ಟ್ರಾಫಿಕ್ ಸಮಸ್ಯೆಗೆ ಗುಡ್ ಬೈ!

ಸಿಗ್ನಲ್ ಮುಕ್ತ ಎಲಿವೇಟೆಡ್ ರಸ್ತೆಯು ಲೋಕಾರ್ಪಣೆಯಾದರೆ ಬಿಎಂಟಿ ಲೇಔಟ್ ನಿಂದ ಕೆಆರ್ ಪುರಂ, ರಾಗಿಗುಡ್ಡದಿಂದ ಕೆಆರ್ ಪುರಂ ಮತ್ತು ರಾಗಿಗುಡ್ಡ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುವ ವಾಹನ ಸವಾರರಿಗೆ ಪ್ರಯೋಜನಕಾರಿಯಾಗಲಿದೆ.
ಡಬಲ್ ಡೆಕ್ಕರ್ ಮೇಲ್ಸುತುವೆ
ಡಬಲ್ ಡೆಕ್ಕರ್ ಮೇಲ್ಸುತುವೆ

ಬೆಂಗಳೂರು: ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ ನಿರ್ಮಾಣವಾಗುತ್ತಿರುವ 3.3 ಕಿ. ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸುತುವೆಯನ್ನು ಜೂನ್ ನಲ್ಲಿ ಬಿಎಂಆರ್ ಸಿಎಲ್ ಸಾರ್ವಜನಿಕರಿಗೆ ಮುಕ್ತಗೊಳಿಸಲಿದೆ. ಇದರಿಂದಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿನ ಟ್ರಾಫಿಕ್ ಸಮಸ್ಯೆಗೆ ದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ. ಸಿಗ್ನಲ್ ಮುಕ್ತ ಎಲಿವೇಟೆಡ್ ರಸ್ತೆಯು ಲೋಕಾರ್ಪಣೆಯಾದರೆ ಬಿಎಂಟಿ ಲೇಔಟ್ ನಿಂದ ಕೆಆರ್ ಪುರಂ, ರಾಗಿಗುಡ್ಡದಿಂದ ಕೆಆರ್ ಪುರಂ ಮತ್ತು ರಾಗಿಗುಡ್ಡ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುವ ವಾಹನ ಸವಾರರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಮೇ ತಿಂಗಳ ಅಂತ್ಯದಲ್ಲಿ ಈ ರಸ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಡಬಲ್ ಡೆಕ್ಕರ್ ಮೇಲ್ಸುತುವೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ ನಲ್ಲಿ ವಾಹನಗಳ ದಟ್ಟಣೆ ತಪ್ಪಿದಂತಾಗುತ್ತದೆ. ಇಲ್ಲಿ ಪ್ರತಿ ಗಂಟೆಗೆ 15,000 ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ ಎಂದು ಹೇಳಲಾಗುತ್ತದೆ. ಮಾರ್ಚ್ 17 ರಂದು 2,520 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಸ್ಲ್ಯಾಬ್ ನ್ನು 42 ಗಂಟೆಗಳ ಕಾಲ ತಡೆರಹಿತವಾಗಿ ಹಾಕಲಾಗಿತ್ತು. ಸ್ಲ್ಯಾಬ್‌ಗೆ ಈಗ 28 ದಿನಗಳ ಕ್ಯೂರಿಂಗ್ ಅಗತ್ಯವಿದ್ದು, ಏಪ್ರಿಲ್ 15 ರ ಹೊತ್ತಿಗೆ ಸಿದ್ಧವಾಗಲಿದೆ. ನಂತರ ಇನ್ನೊಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಡಬಲ್ ಡೆಕ್ಕರ್ ಮೇಲ್ಸುತುವೆ
ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಗುರುವಾರ ಸತತ 50 ಗಂಟೆಗಳ ಕಾಲ ಕಾಂಕ್ರೀಟ್ ಸ್ಲ್ಯಾಬ್ ಕಾಮಗಾರಿ!

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಐದು ಲೂಪ್‌ಗಳು ಮತ್ತು ರ‍್ಯಾಂಪ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಅವು ರಾಗಿಗುಡ್ಡದಿಂದ ಹೊಸೂರು ರಸ್ತೆ, ರಾಗಿಗುಡ್ಡದಿಂದ ಕೆಆರ್ ಪುರಂ, ಎಚ್‌ಎಸ್‌ಆರ್ ಲೇಔಟ್‌ನಿಂದ ರಾಗಿಗುಡ್ಡ, ಬಿಟಿಎಂ ಲೇಔಟ್‌ನ ನೆಲಮಟ್ಟದಿಂದ ಫ್ಲೈಓವರ್ ರಸ್ತೆಯ ಮೊದಲ ಹಂತ ಮತ್ತು ಮೊದಲ ಹಂತದ ಫ್ಲೈಓವರ್ ರಸ್ತೆಯ ಮೊದಲ ಹಂತದಿಂದ ಬಿಟಿಎಂ ಲೇಔಟ್ ನ ನೆಲಮಟ್ಟದ ಕಡೆಗೆ ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದರು.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಹೊರ ವರ್ತುಲ ರಸ್ತೆ (2ಎ ಹಂತ) ಮತ್ತು ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ (ರೀಚ್) BMRCL 2ಎ ಮಾರ್ಗದ ಇಂಟರ್ ಚೆಂಜ್ ಆಗಲಿದೆ. ಡಿಸೆಂಬರ್‌ನಲ್ಲಿ ರಿಟರ್ನ್ ದಿಕ್ಕಿನ ರಸ್ತೆ ಕಾರ್ಯಾರಂಭ ಮಾಡಲಿದೆ. ಈ ಜಂಕ್ಷನ್ ದಕ್ಷಿಣ ಭಾರತದ ಅತ್ಯಂತ ಕೆಟ್ಟ ಚಾಕ್ ಪಾಯಿಂಟ್ ಎಂದು ಪರಿಗಣಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com