ಪಟ್ಟಂದೂರು ಅಗ್ರಹಾರ ಕೆರೆ ವಲಯದಲ್ಲಿ ಒತ್ತುವರಿ ನಿಲ್ಲಿಸಿ: KTDCA

ಪಟ್ಟಂದೂರು ಅಗ್ರಹಾರ ಕೆರೆ ಪ್ರದೇಶದಲ್ಲಿ ಒತ್ತುವರಿಗಳನ್ನು ಕೂಡಲೇ ನಿಲ್ಲಿಸಿ, ಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕರ್ನಾಟಕ ಟ್ಯಾಂಕ್ ಅಭಿವೃದ್ಧಿ ಮತ್ತು ಸಂರಕ್ಷಣಾ ಪ್ರಾಧಿಕಾರ (ಕೆಟಿಡಿಸಿಎ) ಸೂಚನೆ ನೀಡಿದೆ.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಪಟ್ಟಂದೂರು ಅಗ್ರಹಾರ ಕೆರೆ ಪ್ರದೇಶದಲ್ಲಿ ಒತ್ತುವರಿಗಳನ್ನು ಕೂಡಲೇ ನಿಲ್ಲಿಸಿ, ಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕರ್ನಾಟಕ ಟ್ಯಾಂಕ್ ಅಭಿವೃದ್ಧಿ ಮತ್ತು ಸಂರಕ್ಷಣಾ ಪ್ರಾಧಿಕಾರ (ಕೆಟಿಡಿಸಿಎ) ಸೂಚನೆ ನೀಡಿದೆ.

ಕೆರೆ ಬಳಿ ಅನಧಿಕೃತ ಬಡಾವಣೆ ಹಾಗೂ ರಸ್ತೆ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಇದರ ವಿರುದ್ಧ ಸ್ಥಳೀಯ ನಿವಾಸಿಗಳು ಹಾಗೂ ಕಾರ್ಯಕರ್ತರು ದನಿ ಎತ್ತಿದ್ದರು.

ಈ ಹಿನ್ನೆಲೆಯಲ್ಲಿ ಕೆರೆ ಪ್ರದೇಶ ಪರಿಶೀಲನೆ ನಡೆಸುವಂತೆ ಹಾಗೂ ಅನಧಿಕೃತ ಬಡಾವಣೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ರ್ನಾಟಕ ಟ್ಯಾಂಕ್ ಅಭಿವೃದ್ಧಿ ಮತ್ತು ಸಂರಕ್ಷಣಾ ಪ್ರಾಧಿಕಾರ (ಕೆಟಿಡಿಸಿಎ) ಸೂಚನೆ ನೀಡಿದೆ.

ಕೆಟಿಸಿಡಿಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೃತ್ಯುಂಜಯ್ ಸ್ವಾಮಿ ಅವರು, ಕೆರೆ ಪ್ರದೇಶ ಪರಿಶೀಲನೆ ನಡೆಸುವಂತೆ ಮಾರ್ಚ್ 21ರಂದು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಬಿಬಿಎಂಪಿ
ಯಲಹಂಕ: 85 ಕೋಟಿ ರೂ. ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿ ತೆರವು!

ನಿಯಮಗಳ ಪ್ರಕಾರ ಬಫರ್ ಜೋನ್ ಪ್ರದೇಶಗಳಲ್ಲಿ (ಕೆರೆ ಗಡಿಯಿಂದ 30 ಮೀಟರ್ ಒಳಗೆ) ಯಾವುದೇ ಅನಧಿಕೃತ ಬಡಾವಣೆ, ರಸ್ತೆ ನಿರ್ಮಾಣ ಮತ್ತು ಅಕ್ರಮ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಪ್ರಸ್ತುತದ ಪ್ರಕರಣದಲ್ಲಿ ಕೆರೆ ಪ್ರದೇಶವನ್ನು ಪರಿಶೀಲಿಸಿ, ಕೈಗೊಂಡ ಕ್ರಮಗಳ ವರದಿಯನ್ನು ಹಂಚಿಕೊಳ್ಳುವಂತೆ ಆದೇಶದಲ್ಲಿ ತಿಳಿಸಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿನ ಸಿಟಿಜನ್ ಅಜೆಂಡಾದ ಸಂಚಾಲಕ ಸಂದೀಪ್ ಅನಿರುಧನ್ ಮಾತನಾಡಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮತ್ತು ಹೈಕೋರ್ಟ್‌ನ ನಿರ್ದೇಶನದ ಹೊರತಾಗಿಯೂ ಬಫರ್ ಝೋನ್‌ನಲ್ಲಿ ರಸ್ತೆ ನಿರ್ಮಾಣ, ಅನಧಿಕೃತ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಸರ್ವೆ ನಂಬರ್ 19/2ರಲ್ಲಿ ಅಕ್ರಮ ಬಡಾವಣೆ ನಿರ್ಮಿಸಿ, ಕೊಳಚೆ ನೀರಿಗೆ ಸಂಪರ್ಕ ಕಲ್ಪಿಸಲು ಕಾಮಗಾರಿ ನಡೆಸಲಾಗುತ್ತಿದೆ. ಈ ಕೊಳಚೆ ನೀಡನ್ನು ಕೆರೆಗೆ ಸೇರಿಸುವ ಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಕೆರೆ ಒತ್ತುವರಿ ತಪ್ಪಿಸಲು ಬಿಡಿಎ 2015ರ ಮಾಸ್ಟರ್ ಪ್ಲಾನ್‌ನಲ್ಲಿ ಕೆರೆಯನ್ನೂ ಸೇರಿಸಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ, ಅದು ಆಗಿಲ್ಲ. ಇದೀಗ ಕೆಟಿಸಿಡಿಎ ಅಧಿಕಾರಿಗಳು ಒತ್ತುವರಿ ತಡೆಯಲು ಆರ್‌ಎಂಪಿಗೆ ತಿದ್ದುಪಡಿ ತಂದು ಕೆರೆ ಸೇರಿಸಲು ಬಿಡಿಎಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com