ವಿಜಯಪುರ: ಕೃಷ್ಣಾನದಿಯಲ್ಲಿ ದೇವರ ಪಲ್ಲಕ್ಕಿ ತೊಳೆಯಲು ತೆರಳಿದ್ದ ಇಬ್ಬರು ಸಹೋದರರು ನೀರುಪಾಲು

ಕೊಲ್ಹಾರ ಪಟ್ಟಣದಲ್ಲಿ ದೇವರ ಪಲ್ಲಕ್ಕಿ ತೊಳೆಯಲು ಹಾಗೂ ಪುಣ್ಯಸ್ನಾನ ಮಾಡಲು ಕೃಷ್ಣಾನದಿಗೆ ಇಳಿದಿದ್ದ ಬಾಲಕರಿಬ್ಬರು ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಜಯಪುರ: ಕೊಲ್ಹಾರ ಪಟ್ಟಣದಲ್ಲಿ ದೇವರ ಪಲ್ಲಕ್ಕಿ ತೊಳೆಯಲು ಹಾಗೂ ಪುಣ್ಯಸ್ನಾನ ಮಾಡಲು ಕೃಷ್ಣಾನದಿಗೆ ಇಳಿದಿದ್ದ ಬಾಲಕರಿಬ್ಬರು ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಮೃತ ಬಾಲಕರು ಸಹೋದರರಾಗಿದ್ದು ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ನಿವಾಸಿ 13 ವರ್ಷದ ಯಶಸ್ವಿ ರಾಜು ಮಾದರ ಮತ್ತು 10 ವರ್ಷದ ಶ್ರೀಧರ ಶಿವಪ್ಪ ಮಾದರ ಅಲಿಯಾಸ್ ದೊಡ್ಡಮನಿ ಎಂದು ಗುರುತಿಸಲಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಗ್ರಹ ಚಿತ್ರ
ರಾಮನಗರ: ಬೆಳಗ್ಗೆ ಸಾವು, ಮಧ್ಯಾಹ್ನ ಮರುಜೀವ, ಮತ್ತೆ ಸಾವು; ಮತ್ತೆ ಜೀವ ಬರಬಹುದೆಂದು ಶವದ ಮುಂದೆ ಕಾದು ಕುಳಿತ ಕುಟುಂಬಸ್ಥರು!

ಯುಗಾದಿ ಪ್ರಯುಕ್ತ ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಆಗಮಿಸಿ ಪಲ್ಲಕ್ಕಿ ತೊಳೆದು ಸ್ನಾನ ಮಾಡುವುದು ವಾಡಿಕೆ ಈ ಗ್ರಾಮದಲ್ಲಿದೆ. ಅದರಂತೆ ದೇವರ ಪಲ್ಲಕ್ಕಿಯೊಂದಿಗೆ ನೀರಿಗೆ ಇಳಿದಿದ್ದ ಸಹೋದರರು ನೀರುಪಾಲಾಗಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com