El Nino ಸೇರಿ ಹಲವು ಕಾರಣ: 5 ತಿಂಗಳಿಂದ ಒಂದು ಹನಿ ಮಳೆಯಿಲ್ಲ; ಬಿಸಿಲಿನಿಂದ ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ!

ಈ ಬೇಸಿಗೆಯಲ್ಲಿ ಬಿಸಿಲು ವಿಪರೀತವಾಗಿದ್ದು, ಕಾಲರಾದಂತಹ ಕಾಯಿಲೆ ಹರಡುತ್ತಿದೆ. ಬಿಸಿಲು ತಾಳಲಾಗುತ್ತಿಲ್ಲ ಎಂದೇ ಎಲ್ಲರೂ ಹೇಳುತ್ತಿದ್ದು, ಕಳೆದ ಐದು ತಿಂಗಳಿನಿಂದ ಕರ್ನಾಟಕ ರಾಜ್ಯದಲ್ಲಿ ಮಳೆಯೇ ಸುರಿದಿಲ್ಲ ಎಂದು ಹವಾಮಾನ ತಜ್ಞರು ಹೇಳುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಈ ಬೇಸಿಗೆಯಲ್ಲಿ ಬಿಸಿಲು ವಿಪರೀತವಾಗಿದ್ದು, ಕಾಲರಾದಂತಹ ಕಾಯಿಲೆ ಹರಡುತ್ತಿದೆ. ಬಿಸಿಲು ತಾಳಲಾಗುತ್ತಿಲ್ಲ ಎಂದೇ ಎಲ್ಲರೂ ಹೇಳುತ್ತಿದ್ದು, ಕಳೆದ ಐದು ತಿಂಗಳಿನಿಂದ ಕರ್ನಾಟಕ ರಾಜ್ಯದಲ್ಲಿ ಮಳೆಯೇ ಸುರಿದಿಲ್ಲ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

ಕೇವಲ ನಗರ ಪ್ರದೇಶಗಳಷ್ಟೇ ಅಲ್ಲ, ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿಯೂ ಸಹ, ವಿಶೇಷವಾಗಿ ಆಗುಂಬೆಯ ಮಳೆಕಾಡುಗಳು ದೀರ್ಘಕಾಲದ ಒಣಹವೆಯನ್ನು ಈ ವರ್ಷ ಕಂಡಿವೆ ಎಂದು ತಜ್ಞರು ಹೇಳುತ್ತಾರೆ. ಸ್ಥಳೀಯರು, ಹವಾಮಾನ ತಜ್ಞರು ಮತ್ತು ಇತರ ಕ್ಷೇತ್ರಗಳ ತಜ್ಞರು ಹೇಳುವಂತೆ ಕಳೆದ ಎರಡು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದು, ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ವಿಪರೀತವಾಗಿದೆ.

ಅಧ್ಯಯನದಲ್ಲಿ ನಿರತ: ಮಾರ್ಚ್ 2022 ರಿಂದ, ಈ ಪ್ರದೇಶದಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಿರುವುದು ಆತಂಕಕಾರಿ ವಿಷಯವಾಗಿದೆ. ಇದರಿಂದಾಗಿ ಸಂಶೋಧಕರು ಈ ಪ್ರದೇಶದಲ್ಲಿ ಕಿಂಗ್ ಕೋಬ್ರಾಸ್, ಉಭಯಚರಗಳು ಮತ್ತು ಇತರ ಜಾತಿಗಳ ಗೂಡುಕಟ್ಟುವ ಮತ್ತು ಸಂತಾನೋತ್ಪತ್ತಿ ಮಾದರಿಗಳ ಜೀವಿಗಳ ಬಗ್ಗೆ ಅಧ್ಯಯನವನ್ನು ಕೈಗೊಂಡಿದ್ದಾರೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬೇಸಿಗೆಯ ಉಷ್ಣತೆಯು 34-35 ಡಿಗ್ರಿ ಸೆಲ್ಸಿಯಸ್‌ನ ಏರಿಕೆಯು ಝೂನೋಟಿಕ್ ಕಾಯಿಲೆಗಳ ಏರಿಕೆಯಾಗಿದ್ದು, ನೀರಿನ ಲಭ್ಯತೆ ಕಡಿಮೆಯಾಗಿದೆ. ನದೀಮುಖಜ ಭೂಮಿಗಳಲ್ಲಿ ಲವಣಾಂಶದ ಹೆಚ್ಚಳ ಕಂಡುಬರುತ್ತಿದೆ.

ಸಾಮಾನ್ಯವಾಗಿ ಮಾರ್ಚ್ ವೇಳೆಗೆ ಕನಿಷ್ಠ ಮಳೆಯಾಗುತ್ತದೆ. ಆದರೆ ಈ ಬಾರಿ ಕರ್ನಾಟಕ ರಾಜ್ಯದ ಯಾವ ಜಿಲ್ಲೆಗಳೂ ಮಾರ್ಚ್ ತಿಂಗಳಲ್ಲಿ ಮಳೆಯನ್ನೇ ಕಂಡಿಲ್ಲ. ಕಳೆದ ವರ್ಷ ಜುಲೈ-ಆಗಸ್ಟ್ ನಲ್ಲಿ ಶುಭ್ರ ಆಕಾಶವಿತ್ತು. ಹಠಾತ್ ಮತ್ತು ಅಕಾಲಿಕ ಮಳೆಯು ಪ್ರಾಣಿಶಾಸ್ತ್ರದ ಶಾಖೆಯು ಸರೀಸೃಪಗಳು ಮತ್ತು ಉಭಯಚರಗಳ(Herpetology) ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಗುಂಬೆಯ ಪ್ರಸಿದ್ಧ ಉರಗ ತಜ್ಞ ಗೌರಿ ಶಂಕರ್ ಹೇಳಿದರು.

ಭಾರತೀಯ ಹವಾಮಾನ ಇಲಾಖೆ (IMD) ಅಂಕಿಅಂಶಗಳ ಪ್ರಕಾರ, ಒಟ್ಟಾರೆಯಾಗಿ ರಾಜ್ಯವು ಮಾರ್ಚ್ 1 ರಿಂದ ಇಲ್ಲಿಯವರೆಗೆ ಶೇಕಡಾ 94 ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ವಾಡಿಕೆಯ 17ಮಿಮೀಗಿಂತ ರಾಜ್ಯದಲ್ಲಿ 1ಮಿಮೀ ಮಳೆಯಾಗಿದೆ. ಆಗುಂಬೆಯಲ್ಲಿ ಶೇ 18 ಹಾಗೂ ಶಿವಮೊಗ್ಗದಲ್ಲಿ ಶೇ 87 ರಷ್ಟು ಮಳೆ ಕೊರತೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ-ಬೆಂಗಳೂರು ವಿಜ್ಞಾನಿ ಎ ಪ್ರಸಾದ್, ಇದು ಮಳೆ ಕೊರತೆ ಮತ್ತು ಬಿಸಿಲಿನ ತಾಪಮಾನ ಹೆಚ್ಚಾಗಲು ಎಲ್ ನಿನೊ ಪರಿಣಾಮ ಮಾತ್ರವಲ್ಲ, ಹಿಮ್ಮುಖ ಗಾಳಿಯ ಪ್ರಸರಣವು ಮೋಡಗಳ ರಚನೆಗೆ ಅವಕಾಶ ನೀಡುತ್ತಿಲ್ಲ. ಕರಾವಳಿ ಕರ್ನಾಟಕದಲ್ಲಿ ಶೇ.86, ಉತ್ತರ ಒಳನಾಡಿನಲ್ಲಿ ಶೇ.91 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.97ರಷ್ಟು ಮಳೆ ಕೊರತೆಯಾಗಿದೆ.

ಸಾಂದರ್ಭಿಕ ಚಿತ್ರ
ಫೆಬ್ರುವರಿಯಲ್ಲೇ ಬೆಂಗಳೂರಿನಲ್ಲಿ ಬಿರು ಬೇಸಿಗೆ: ಎಲ್-ನಿನೋ ದುರ್ಬಲ; ಉತ್ತಮ ಮಳೆಯಾಗಬಹುದು ಎಂದ ಹವಾಮಾನ ಇಲಾಖೆ

ಐಐಎಸ್‌ಸಿಯ ಪರಿಸರ ವಿಜ್ಞಾನ ಕೇಂದ್ರದ ಪ್ರೊ.ಟಿ.ವಿ.ರಾಮಚಂದ್ರ, ಎಲ್ಲೆಲ್ಲಿ ನಗರೀಕರಣದ ಹೆಚ್ಚಳ ಮತ್ತು ಹಸಿರು ಹೊದಿಕೆ ಕಡಿಮೆಯಾಗುತ್ತಿದೆಯೋ ಅಲ್ಲೆಲ್ಲಾ ಮಳೆಯ ಪ್ರಮಾಣವು ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಶರಾವತಿ ಮತ್ತು ಲಿಂಗನಮಕ್ಕಿಯಲ್ಲಿ 3000-4000 ಮಿಮೀ ಮಳೆಯ ಪ್ರಮಾಣ ಮುಂದುವರಿದರೆ, 1965 ರಿಂದ ತೀರ್ಥಹಳ್ಳಿ, ನಂದಿಹೊಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ವಿಘಟನೆ ಮತ್ತು ಹೆಚ್ಚಿದ ನಗರೀಕರಣದಿಂದಾಗಿ 1700-1900 ಮಿಮೀ ಮಳೆಯಾಗಿದೆ ಎಂದು ಅಧ್ಯಯನಗಳು ತೋರಿಸಿವೆ.

2020 ರಲ್ಲಿ ಪ್ರಕಟವಾದ ನಮ್ಮ ವರದಿಯಲ್ಲಿ, ಪ್ರಾದೇಶಿಕ ಪರಿಸರ ಸೂಕ್ಷ್ಮತೆಯ ಮೌಲ್ಯಮಾಪನಕ್ಕಾಗಿ ಅರಣ್ಯ ಡೈನಾಮಿಕ್ಸ್ ಒಳನೋಟಗಳು’, ಮಳೆಯ ಮಾದರಿಯಲ್ಲಿನ ಬದಲಾವಣೆಯನ್ನು ಸೂಚಿಸಲಾಗಿದೆ ಎಂದು ಹೇಳಿದರು. ಶಿವಮೊಗ್ಗ ಜಿಲ್ಲೆ, ಮಧ್ಯ ಪಶ್ಚಿಮ ಘಟ್ಟಗಳ ಅರಣ್ಯ ವಿಘಟನೆಯ ಪ್ರಾದೇಶಿಕ ಮಾದರಿಗಳನ್ನು ವಿಶ್ಲೇಷಿಸಿದೆ ಮತ್ತು ಜೈವಿಕ-ಭೂ-ಹವಾಮಾನ-ಸಾಮಾಜಿಕ ವೇರಿಯಬಲ್‌ಗಳ ಆಧಾರದ ಮೇಲೆ ಗ್ರಾಮೀಣ ಮಟ್ಟದಲ್ಲಿ ಪರಿಸರೀಯವಾಗಿ ದುರ್ಬಲವಾದ ಅಥವಾ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ (ESR) ಆದ್ಯತೆ ನೀಡಿತು.

ಹವಾಮಾನ ಇಲಾಖೆಯ ಎಚ್ಚರಿಕೆ: ಬೆಂಗಳೂರಿನಲ್ಲಿ ತಾಪಮಾನವು 370 ಸೆಲ್ಸಿಯಸ್ ನ್ನು ದಾಟಿದ ಕಾರಣ ಭಾರತೀಯ ಹವಾಮಾನ ಇಲಾಖೆ ಸಾರ್ವಜನಿಕರಿಗೆ ಕೆಲವು ಸಲಹೆಗಳ ಗುಂಪನ್ನು ನೀಡಿದೆ.

  • ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಜನರು ಸಾಧ್ಯವಾದಷ್ಟು ಹೊರಗಡೆ ಹೋಗದಂತೆ ಮನೆಯೊಳಗೆ ಇರಿ.

  • ಜನರು ಆದಷ್ಟು ದ್ರವ ಪದಾರ್ಥಗಳನ್ನು ಸೇವಿಸಬೇಕು, ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು

  • ಆಲ್ಕೋಹಾಲ್, ಚಹಾ, ಕಾಫಿ, ಕಾರ್ಬೊನೇಟೆಡ್ ಪಾನೀಯಗಳ ಹೆಚ್ಚು ಸೇವನೆ ದೂಬೇಡ.

  • ಒಆರ್ ಎಸ್ ಪಾನೀಯ, ಲಸ್ಸಿ, ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಬಳಸಿ

  • ಹಗುರವಾದ, ತಿಳಿ ಬಣ್ಣದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ

  • ಹೊರಗೆ ಹೋಗುವಾಗ ಕೊಡೆಗಳನ್ನು ಒಯ್ಯಿರಿ, ಕನ್ನಡಕಗಳನ್ನು ಧರಿಸಿ, ತಲೆ, ಕುತ್ತಿಗೆ, ಮುಖ, ಕೈಕಾಲುಗಳಿಗೆ ಒದ್ದೆಯಾದ ಬಟ್ಟೆಯನ್ನು ಬಳಸಿ, ಸ್ನಾನಕ್ಕೆ ಬಿಸಿನೀರು ಬಳಸಬೇಡಿ.

  • ನಿಲುಗಡೆ ಮಾಡಿದ ವಾಹನಗಳ ಅಡಿಯಲ್ಲಿ ಮಕ್ಕಳು ಅಥವಾ ಪ್ರಾಣಿಗಳು ಇದ್ದಾರೆಯೇ ಎಂದು ತಿಳಿದುಕೊಳ್ಳಿ.

  • ನೀವು ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿ ಬಳಸಿ, ನಿಮ್ಮ ತಲೆ, ಕುತ್ತಿಗೆ, ಮುಖ, ಕೈಕಾಲುಗಳಿಗೆ ಒದ್ದೆಯಾದ ಬಟ್ಟೆಯನ್ನು ಬಳಸಿ.

  • ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಕುಡಿಯಲು ಸಾಕಷ್ಟು ನೀರು ನೀಡಿ.

  • ಹೊರಗಿನ ತಾಪಮಾನ ಹೆಚ್ಚಿರುವಾಗ ಕ್ರೀಡಾಪಟುಗಳು ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. ಮಧ್ಯಾಹ್ನ ಮತ್ತು 3 ಗಂಟೆಯ ನಡುವೆ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಿ

  • ಪ್ರಯಾಣ ಮಾಡುವಾಗ, ನೀರನ್ನು ಒಯ್ಯಿರಿ

  • ಬಿಸಿಲ ತಾಪದಿಂದ ಜಾಗರೂಕವಿರಿ.

ಬಿಸಿಲ ತಾಪದಿಂದ ಜಾಗರೂಕವಿರಿ.

ಬಾಗಲಕೋಟೆ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿಯಲ್ಲಿ ಹೆಚ್ಚಿನ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದರಿಂದ IMD ಬಿಸಿಗಾಳಿ ಎಚ್ಚರಿಕೆ ನೀಡಿದೆ.

ಲಘು ಮಳೆಯಾಗುವ ಸಾಧ್ಯತೆ: ಬೀದರ್, ಚಿಕ್ಕಮಗಳೂರು, ಕಲಬುರಗಿ, ವಿಜಯಪುರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗ, ಹಾಸನ, ಚಿತ್ರದುರ್ಗ ಮತ್ತು ತುಮಕೂರಿನ ಪ್ರತ್ಯೇಕ ಪ್ರದೇಶಗಳಲ್ಲಿ ಏಪ್ರಿಲ್ 10 ಮತ್ತು 14 ರ ನಡುವೆ ಲಘು ಮಳೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com