ಫೆಬ್ರುವರಿಯಲ್ಲೇ ಬೆಂಗಳೂರಿನಲ್ಲಿ ಬಿರು ಬೇಸಿಗೆ: ಎಲ್-ನಿನೋ ದುರ್ಬಲ; ಉತ್ತಮ ಮಳೆಯಾಗಬಹುದು ಎಂದ ಹವಾಮಾನ ಇಲಾಖೆ

ಈ ವರ್ಷದ ಎರಡನೇ ತಿಂಗಳಿನಲ್ಲಿಯೇ ಬೆಂಗಳೂರು ನಗರದಲ್ಲಿ ಬಿರು ಬೇಸಿಗೆಯ ಅನುಭವವಾಗುತ್ತಿದೆ. ಸಾಮಾನ್ಯವಾಗಿ ಫೆಬ್ರುವರಿಯಲ್ಲಿ ಮುಂಜಾನೆ ವೇಳೆ ಅಧಿಕಾರಿಗಳು ಮತ್ತು ಶಾಲೆಗೆ ಹೋಗುವ ಮಕ್ಕಳು ಜಾಕೆಟ್‌ಗಳು ಮತ್ತು ಸ್ವೆಟರ್‌ಗಳನ್ನು ಧರಿಸಿ ತೆರಳುವುದು ಕಂಡುಬರುತ್ತಿತ್ತು. ಆದರೆ, ಈ ಬಾರಿ ಬಿಸಿಲು ಹೆಚ್ಚಿರುವುದು ಇದಕ್ಕೆಲ್ಲ ತಡೆ ನೀಡಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಈ ವರ್ಷದ ಎರಡನೇ ತಿಂಗಳಿನಲ್ಲಿಯೇ ಬೆಂಗಳೂರು ನಗರದಲ್ಲಿ ಬಿರು ಬೇಸಿಗೆಯ ಅನುಭವವಾಗುತ್ತಿದೆ. ಸಾಮಾನ್ಯವಾಗಿ ಫೆಬ್ರುವರಿಯಲ್ಲಿ ಮುಂಜಾನೆ ವೇಳೆ ಅಧಿಕಾರಿಗಳು ಮತ್ತು ಶಾಲೆಗೆ ಹೋಗುವ ಮಕ್ಕಳು ಜಾಕೆಟ್‌ಗಳು ಮತ್ತು ಸ್ವೆಟರ್‌ಗಳನ್ನು ಧರಿಸಿ ತೆರಳುವುದು ಕಂಡುಬರುತ್ತಿತ್ತು. ಆದರೆ, ಈ ಬಾರಿ ಬಿಸಿಲು ಹೆಚ್ಚಿರುವುದು ಇದಕ್ಕೆಲ್ಲ ತಡೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಉದ್ಯಾನ ನಗರಿಯಲ್ಲಿ ಗರಿಷ್ಠ ತಾಪಮಾನವು ಈಗಾಗಲೇ 33 ಡಿಗ್ರಿ ಸೆಲ್ಸಿಯಸ್ ದಾಟಿದೆ. 'ಈ ಫೆಬ್ರುವರಿ ತಿಂಗಳಲ್ಲಿ ನಗರದಲ್ಲಿ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕ ತಾಪಮಾನ ವರದಿಯಾಗಿದೆ. ಫೆಬ್ರುವರಿ 9 ರಂದು ನಗರದಲ್ಲಿ 34.2 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. 2005ರಲ್ಲಿ ನಗರದಲ್ಲಿ 35.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೂ ಇದೇ ರೀತಿಯ ಪರಿಸ್ಥಿತಿಗಳು ದಾಖಲಾಗಿವೆ. 2016ರ ಫೆಬ್ರುವರಿ 23 ಮತ್ತು 2019ರ ಫೆಬ್ರುವರಿ 26ರಲ್ಲಿಯೂ 35.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ವರದಿಯಾಗಿತ್ತು. 2012 ರ ಫೆಬ್ರುವರಿ 29ರಂದು 34.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದಾಗ್ಯೂ, ಪೆಸಿಫಿಕ್ ಪ್ರದೇಶದಲ್ಲಿ ಎಲ್ ನಿನೊ ಪರಿಸ್ಥಿತಿಗಳು ದುರ್ಬಲಗೊಳ್ಳುತ್ತಿದ್ದು, ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

ಫೆಬ್ರುವರಿಯಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸರಾಸರಿ 7 ಮಿಮೀ ಮಳೆ ಮತ್ತು ಕೆಲವು ಸ್ಥಳಗಳಲ್ಲಿ ತಿಂಗಳ ಅಂತ್ಯದ ವೇಳೆಗೆ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಪ್ರಾತಿನಿಧಿಕ ಚಿತ್ರ
ಮೈ ಕೊರೆಯುವ ಚಳಿ ಕಡಿಮೆ, ಸೆಖೆಯ ಅನುಭವ: ಈ ವರ್ಷ ಅವಧಿಗೆ ಮುನ್ನವೇ ಬೇಸಿಗೆ ಆಗಮನ!

'ಎಲ್ ನಿನೋ ಪರಿಸ್ಥಿತಿಗಳು ದುರ್ಬಲಗೊಳ್ಳುತ್ತಿವೆ ಮತ್ತು ಜೂನ್ ಅಥವಾ ಜುಲೈ ವೇಳೆಗೆ ಪರಿಣಾಮವು ತಟಸ್ಥವಾಗಲಿದೆ. ಇದರಿಂದ ಇಲ್ಲಿ ಸಾಮಾನ್ಯ ಮುಂಗಾರು ಮಳೆಯಾಗಬಹುದು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಮಧ್ಯೆ, 2016ರ ಫೆಬ್ರುವರಿ 24 ರಂದು ಕಲಬುರಗಿಯಲ್ಲಿ 43.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ರಾಜ್ಯದಲ್ಲಿ ಫೆಬ್ರುವರಿಯಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನವಾಗಿದೆ ಮತ್ತು ಅದೇ ವರ್ಷ ಫೆಬ್ರುವರಿ 7ರಂದು ಮತ್ತೆ ನಗರದಲ್ಲಿ 37.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 2019 ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಫೆಬ್ರುವರಿ 25 ರಂದು 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಅದೇ ವರ್ಷದ ಫೆಬ್ರುವರಿ 14 ರಂದು ಕಾರವಾರದಲ್ಲಿ 38.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com