ಬೆಂಗಳೂರು: 'ಕುಡಿಯಬೇಡಿ' ಎಂದಿದ್ದಕ್ಕೆ ವ್ಯಕ್ತಿಯನ್ನು ಇರಿದು ಕೊಂದ ಯುವಕರು!

ಕುಡಿತದಿಂದ ದೂರವಿರಿ ಎಂದು ಯುವಕರಿಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಆಕ್ರೋಶ ಗೊಂಡ ಇಬ್ಬರು ಯುವಕರನು 45 ವರ್ಷದ ವ್ಯಕ್ತಿಯೊಬ್ಬರನ್ನು ಇರಿದು ಕೊಂದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕುಡಿತದಿಂದ ದೂರವಿರಿ ಎಂದು ಯುವಕರಿಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಆಕ್ರೋಶ ಗೊಂಡ ಇಬ್ಬರು ಯುವಕರನು 45 ವರ್ಷದ ವ್ಯಕ್ತಿಯೊಬ್ಬರನ್ನು ಇರಿದು ಕೊಂದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಚಂದ್ರಾಪುರ ನಿವಾಸಿ ವೆಂಕಟೇಶ್ ಕೊಲೆಯಾದ ವ್ಯಕ್ತಿ. ವೆಂಕಟೇಶ್ ಮಂಗಳವಾರ ರಾತ್ರಿ 10.30ರ ಸುಮಾರಿಗೆ ರಾಮಚಂದ್ರಾಪುರ ಆಟದ ಮೈದಾನದ ಕಡೆಗೆ ವಾಕಿಂಗ್ ಹೋಗಿದ್ದರು. ಈ ವೇಳೆ ಬಸ್ ನಿಲ್ದಾಣದ ಬಳಿ ಇಬ್ಬರು ಯುವಕರು ಮದ್ಯ ಸೇವಿಸುತ್ತಿರುವುದನ್ನು ನೋಡಿದ್ದಾರೆ.

ಅವರ ಬಳಿ ಹೋದ ವೆಂಕಟೇಶ್ ಇನ್ನು ನೀವು ಚಿಕ್ಕ ವಯಸ್ಸಿನವರು, ಕುಡಿತದಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ವೆಂಕಟೇಶ್ ಅವರ ಮಾತಿನಿಂದ ಕುಪಿತಗೊಂಡ ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ವೆಂಕಟೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿದ್ದ ವೆಂಕಟೇಶ್ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪವನ್ ಕುಮಾರ್ (24), ಮತ್ತು ನಂದ ಅಲಿಯಾಸ್ ನಂದ ಗೋಪಾಲ್ (21) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ನೇಜಾರು ನಾಲ್ವರು ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಆರೋಪಿ ಹಾಜರುಪಡಿಸುವ ವೇಳೆ ಅಧಿಕಾರಿ ಪಾನಮತ್ತ; ಕ್ರಮಕ್ಕೆ ಸೂಚನೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com