ವಿಜಯಪುರ: ಚಿನ್ನದ ಒಡವೆ, ನಗದನ್ನು ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರೆದ ಮಹಿಳೆ!

ಬಸ್ ನಲ್ಲಿ ಚಿನ್ನದ ಒಡವೆ ಹಾಗೂ ನಗದು ಇದ್ದ ಬ್ಯಾಗ್ ನ್ನು ಮಿಸ್ ಆಗಿ ತೆಗೆದುಕೊಂಡು ಹೋಗಿದ್ದ ಮಹಿಳಾ ಪ್ರಯಾಣಿಕರಾದ ಶಾರದಾ ಎಂಬುವರು ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರದಿದ್ದಾರೆ.
ಪೊಲೀಸರೊಂದಿಗೆ ಇರುವ ಶಿಲ್ಪಾ, ಶಾರದಾ ಅವರ ಚಿತ್ರ
ಪೊಲೀಸರೊಂದಿಗೆ ಇರುವ ಶಿಲ್ಪಾ, ಶಾರದಾ ಅವರ ಚಿತ್ರ
Updated on

ವಿಜಯಪುರ: ಬಸ್ ನಲ್ಲಿ ಚಿನ್ನದ ಒಡವೆ ಹಾಗೂ ನಗದು ಇದ್ದ ಬ್ಯಾಗ್ ನ್ನು ಮಿಸ್ ಆಗಿ ತೆಗೆದುಕೊಂಡು ಹೋಗಿದ್ದ ಮಹಿಳಾ ಪ್ರಯಾಣಿಕರಾದ ಶಾರದಾ ಎಂಬುವರು ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರದಿದ್ದಾರೆ. ಇದರಿಂದಾಗಿ ಮತ್ತೋರ್ವ ಮಹಿಳಾ ಪ್ರಯಾಣಿಕರಾದ ಶಿಲ್ಪಾ ಬಾಗೇವಾಡಿ ಅವರು 35 ಗ್ರಾಂ ಚಿನ್ನ ಹಾಗೂ ರೂ. 3,000 ನಗದನ್ನು ವಾಪಸ್ ಪಡೆದುಕೊಂಡಿದ್ದಾರೆ.

ಶುಕ್ರವಾರ ಅಫಜಲಪುರ-ಬಾಗಲಕೋಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಬಸ್‌ನೊಳಗಿನ ಲಗೇಜ್ ಕ್ಯಾರಿಯರ್‌ನಲ್ಲಿ ತಮ್ಮ ತಮ್ಮ ಬ್ಯಾಗ್‌ಗಳನ್ನು ಇಟ್ಟುಕೊಂಡಿದ್ದ ಇಬ್ಬರು ಮಹಿಳೆಯರ ಕ್ಯಾರಿ ಬ್ಯಾಗ್ ಬದಲಾಗಿದೆ. ಬಾಗಲಕೋಟೆಗೆ ತೆರಳುತ್ತಿದ್ದ ಶಿಲ್ಪಾ ಬಾಗೇವಾಡಿ ಅವರು ಮೊದಲು ತಮ್ಮ ಚಿನ್ನಾಭರಣದ ಬ್ಯಾಗ್ ನ್ನು ಬಸ್ ನಲ್ಲಿ ಇಟ್ಟಿದ್ದರು. ಆದಾಗ್ಯೂ, ಮತ್ತೋರ್ವ ಪ್ರಯಾಣಿಕರಾದ ಶಾರದಾ ಅವರು ಕುದರಿಸಲವಾಡಿ ಗ್ರಾಮದಲ್ಲಿ ಬಸ್‌ ಹತ್ತುವಾಗ ಶಿಲ್ಪಾ ಅವರ ಬ್ಯಾಗ್ ನೊಂದಿಗೆ ಅದಲು ಬದಲಾಗಿದೆ. ಅವರು ನಿಡಗುಂದಿ ಪಟ್ಟಣಕ್ಕೆ ತೆರಳುತ್ತಿದ್ದರು.

ನಂತರ ಶಿಲ್ಪಾಗೆ ತನ್ನ ಕ್ಯಾರಿ ಬ್ಯಾಗ್ ನಾಪತ್ತೆಯಾಗಿರುವುದು ಗೊತ್ತಾಗಿದ್ದು, ನಿಡಗುಂದಿ ಬಸ್ ನಿಲ್ದಾಣದಲ್ಲಿ ಸಹಾಯಕ್ಕಾಗಿ ಅಳಲು ತೋಡಿಕೊಂಡಿದ್ದಾರೆ. ಆಕೆಯ ಕೂಗನ್ನು ನೋಡಿದ ಸ್ಥಳೀಯ ನಿವಾಸಿ ಮೆಹಬೂಬ್ ವಾಲಿಕರ್ ಆಕೆಯ ಬೆಂಬಲಕ್ಕೆ ಬಂದಿದ್ದು, ತುರ್ತು ಪೊಲೀಸ್ ಸೇವೆ 112 ಗೆ ಕರೆ ಮಾಡಿದ್ದಾರೆ. ನಂತರ ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದರೆ ಮತ್ತೊಂದೆಡೆ ಶಿಲ್ಪಾಳ ಬ್ಯಾಗ್ ತೆಗೆದುಕೊಂಡಿದ್ದ ಶಾರದ ಅವರು, ಬ್ಯಾಗ್ ನಲ್ಲಿ ಚಿನ್ನಾಭರಣ, ನಗದು ಇರುವುದನ್ನು ಗಮನಿಸಿದ್ದಾರೆ.

ಪೊಲೀಸರೊಂದಿಗೆ ಇರುವ ಶಿಲ್ಪಾ, ಶಾರದಾ ಅವರ ಚಿತ್ರ
ಚನ್ನಪಟ್ಟಣ: ಚಿಕಿತ್ಸೆಗೆ ಬಂದು ಚಿನ್ನದ ಸರ ಕಳೆದುಕೊಂಡಿದ್ದ ವೃದ್ಧೆ;  ಪೊಲೀಸರಿಗೆ ಸರ ನೀಡಿ ಪ್ರಾಮಾಣಿಕತೆ ಮರೆದ ಯುವಕ!

ಅದೃಷ್ಟವಶಾತ್, ಶಿಲ್ಪಾ ತನ್ನ ಮೊಬೈಲ್ ಸಂಖ್ಯೆ ಹೊಂದಿರುವ ಆಧಾರ್ ಕಾರ್ಡ್ ಅನ್ನು ಅದೇ ಬ್ಯಾಗ್ ನಲ್ಲಿ ಇಟ್ಟಿದ್ದರು. ನಂತರ ಶಾರಾದ ಅವರು ಶಿಲ್ಪಾಗೆ ಕರೆ ಮಾಡಿ, ಬ್ಯಾಗ್ ಅದಲು ಬದಲಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇತ್ತ ಶಿಲ್ಪಾ, ಪೊಲೀಸರ ನೆರವಿನೊಂದಿಗೆ ಶಾರದ ಸ್ಥಳಕ್ಕಾಗಮಿಸಿ ಬ್ಯಾಗ್ ಸಂಗ್ರಹಿಸಿದ್ದಾಳೆ. ಬ್ಯಾಗ್‌ನಲ್ಲಿ ಚಿನ್ನ ಮತ್ತು ಹಣ ಸುರಕ್ಷಿತವಾಗಿರುವುದನ್ನು ನೋಡಿದ ಶಿಲ್ಪಾ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಲ್ಲದೆ, ಶಾರದಾಳ ಪ್ರಾಮಾಣಿಕತೆಗೆ ಮತ್ತು ಪೊಲೀಸರಿಗೆ ಕರೆ ಮಾಡಿದ್ದ ವಾಲೀಕರ್‌ಗೆ ಕೃತಜ್ಞತೆ ಸಲ್ಲಿಸಿದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com