ಕೋಕೊಗೆ ಬಂಪರ್‌ ಬೆಲೆ: ಕೆಜಿಗೆ 300 ರೂ. ದಾಟಿದ ದರ; ಬೆಳೆಗಾರರು ಸಂತಸ

ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ಕೋಕೋ ಬೆಲೆ ಕೆಜಿಗೆ 300 ರೂ. ದಾಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ಕೋಕೋ ಬೆಲೆ ಕೆಜಿಗೆ 300 ರೂ. ದಾಟಿದೆ.

ಕ್ಯಾಂಪ್ಕೊ ಅಧ್ಯಕ್ಷ ಎ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿದ ಕೆ.ಜಿ.ಗೆ ಕೇವಲ 85 ರೂ. ಇದ್ದ ಕೋಕೋ ಬೀಜದ ಬೆಲೆ ಈಗ 300 ರೂ.ಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿನ್ಹ್ ಸಹಕಾರಿ ಸೊಸೈಟಿ (ಕ್ಯಾಂಪ್ಕೊ) ಕೋಕೋ ಬೀಜಗಳನ್ನು ಸಂಗ್ರಹಿಸುತ್ತಿದ್ದು, ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಸಸಿಗಳನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಶಿವಮೊಗ್ಗ: ಅಡಕೆ ಹಾಳೆಯ ಉತ್ಪನ್ನಗಳನ್ನು ರಫ್ತು ಮಾಡುವ ದಂಪತಿ ಬಗ್ಗೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ. ಆಫ್ರಿಕನ್ ದೇಶಗಳು ಕೂಡ ಸರಬರಾಜು ಮಾಡುತ್ತಿಲ್ಲ. ಆಂಧ್ರಪ್ರದೇಶದಲ್ಲಿ ಚಂಡಮಾರುತದ ಪರಿಣಾಮ ಪೂರೈಕೆ ಸಾಧ್ಯವಾಗಿಲ್ಲ, ಕರಾವಳಿ ಕರ್ನಾಟಕದಲ್ಲಿಯೂ ಕೋಕೋ ತೋಟಗಳು ಕಡಿಮೆಯಾಗಿದೆ. ಈ ಹಿಂದೆ ಬೀಜಗಳ ಬೆಲೆ ಕೆಜಿಗೆ ರೂ 55 ರಿಂದ ರೂ 85 ರ ನಡುವೆ ಇತ್ತು, ಒಣ ಬೀಜಗಳ ಬೆಲೆ ಕೆಜಿಗೆ ರೂ 210 ರಿಂದ ರೂ 240 ರ ನಡುವೆ ಇತ್ತು. ಇದೀಗ 875 ರೂಗೆ ಏರಿಕೆಯಾಗಿದೆ. ಅಡಕೆ ಬೆಲೆ ಏರಿಕೆ, ಮಂಗಗಳ ದಾಳಿಯಿಂದಾಗಿ ಸಾಕಷ್ಟು ರೈತರು ಕೋಕೋ ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಇದರ ಉತ್ಪಾದನೆಯು ಕೇವಲ 1000 ಮೆಟ್ರಿಕ್ ಟನ್‌ಗಳಿಗೆ ಇಳಿದಿದೆ ಎಂದು ಹೇಳಿದ್ದಾರೆ.

ಮೊದಲ ಹಂಗಾಮು ಈಗಾಗಲೇ ಪ್ರಾರಂಭವಾಗಿದ್ದು, ಜುಲೈವರೆಗೆ ಬೆಳೆ ಇರುತ್ತದೆ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳು ಖರೀದಿಗಾಗಿ ದಕ್ಷಿಣ ಕನ್ನಡದತ್ತ ಮುಖ ಮಾಡಿವೆ. ಪ್ರಮುಖ ಕೋಕೋ ಉತ್ಪಾದಕರಾದ ಐವರಿ ಕೋಸ್ಟ್ ಮತ್ತು ಘಾನಾ ಕೂಡ ಕೊರತೆಯನ್ನು ಎದುರಿಸುತ್ತಿದೆ. ಕೋಕೋ ಬೀಜಗಳನ್ನು ಕೋಕೋ ಬೆಣ್ಣೆ, ಪುಡಿ, ಚಾಕೊಲೇಟ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಚಾಕೊಲೇಟ್ ಬಳಕೆ ಹೆಚ್ಚು ಇರುವ ಯುರೋಪಿಯನ್ ದೇಶಗಳಿಗೂ ನಾವು ಕೋಕೋ ಬೀಜಗಳನ್ನು ರಫ್ತು ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com