ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಒತ್ತು: ಆಟೋ ಚಾಲಕರಿಂದ 'ಟೂರಿಸ್ಟ್ ಆಟೋ' ಪರಿಕಲ್ಪನೆ ಜಾರಿ

ಬೆಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, ನಗರದ ಆಟೋ ಚಾಲಕರು ಒಟ್ಟಾಗಿ ಸ್ಥಳೀಯ ಪ್ರವಾಸ ಸೇವೆಗಳನ್ನು ಜನತೆಗೆ ಅಗ್ಗದ ದರದಲ್ಲಿ ಒದಗಿಸಲು ‘ಟೂರಿಸ್ಟ್ ಆಟೋ’ ವನ್ನು ಜಾರಿಗೆ ತರುತ್ತಿದ್ದಾರೆ.
ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಒತ್ತು: ಆಟೋ ಚಾಲಕರಿಂದ 'ಟೂರಿಸ್ಟ್ ಆಟೋ' ಪರಿಕಲ್ಪನೆ ಜಾರಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, ನಗರದ ಆಟೋ ಚಾಲಕರು ಒಟ್ಟಾಗಿ ಸ್ಥಳೀಯ ಪ್ರವಾಸ ಸೇವೆಗಳನ್ನು ಜನತೆಗೆ ಅಗ್ಗದ ದರದಲ್ಲಿ ಒದಗಿಸಲು ‘ಟೂರಿಸ್ಟ್ ಆಟೋ’ ವನ್ನು ಜಾರಿಗೆ ತರುತ್ತಿದ್ದಾರೆ.

ಕಬ್ಬನ್ ಪಾರ್ಕ್ ಆಟೋ ನಿಲ್ದಾಣದ ಆಟೋ ಚಾಲಕ ಉಮಾ ಶಂಕರ್ ಈ ಬಗ್ಗೆ ವಿವರಣೆ ನೀಡಿ, ಬೆಂಗಳೂರಿಗೆ ಹೊರಗಿನಿಂದ ಬರುವ ಪ್ರವಾಸಿಗರು ಇಲ್ಲಿನ ಸ್ಥಳಗಳ ಬಗ್ಗೆ ಅನ್ವೇಷಿಸಲು ಸಾಕಷ್ಟು ಕಷ್ಟಪಡುತ್ತಾರೆ. ತಪ್ಪು ಮಾಹಿತಿಯಿಂದ ಮೋಸ ಹೋಗುತ್ತಾರೆ, ತಮ್ಮಲ್ಲಿರುವ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡ ಉದಾಹರಣೆಗಳೂ ಇವೆ. ಇಂಥವರಿಗೆ ಸ್ಥಳೀಯ ಮಾರ್ಗದರ್ಶಕರಾಗಿ ನಮ್ಮ ಪ್ರವಾಸ ಸೇವೆಗಳನ್ನು ನೀಡುವ ಮೂಲಕ, ಕಸ್ಟಮೈಸ್ ಮಾಡಿದ ಮಾರ್ಗ ನಕ್ಷೆಯೊಂದಿಗೆ ನಗರಕ್ಕೆ ಬಂದ ಪ್ರವಾಸಿ ಸ್ಥಳಗಳನ್ನು ತೋರಿಸಬಹುದು. ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಕರೆಯಲ್ಪಡುವ ಬೆಂಗಳೂರು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಗಿಜಿಗಿಡುವ ಮಾರುಕಟ್ಟೆ ವ್ಯಾಪಾರ ಪ್ರದೇಶಗಳು ಮತ್ತು ರಾತ್ರಿಯಾದರೆ ಇನ್ನೊಂದು ರೀತಿಯ ಜೀವನವನ್ನು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ತೋರಿಸಬಹುದು ಎನ್ನುತ್ತಾರೆ.

ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಒತ್ತು: ಆಟೋ ಚಾಲಕರಿಂದ 'ಟೂರಿಸ್ಟ್ ಆಟೋ' ಪರಿಕಲ್ಪನೆ ಜಾರಿ
ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಚಾಲಕರು, ಮಾಲೀಕರ ಬೃಹತ್ ಪ್ರತಿಭಟನೆ

ಕಡಿಮೆ ದರದಲ್ಲಿ ಪ್ರವಾಸಿ ಗೈಡ್ ಸೇವೆಯು ವಿಧಾನಸೌಧ, ರಾಜಭವನ, ಬೆಂಗಳೂರು ಅರಮನೆಯಿಂದ ಪ್ರಾರಂಭವಾಗಿ ಕಬ್ಬನ್ ಪಾರ್ಕ್‌ನಲ್ಲಿ ಕನಿಷ್ಠ ದರ 100 ರೂಪಾಯಿಯಲ್ಲಿ ಕೊನೆಗೊಳ್ಳುತ್ತದೆ. ಆಟೋ ಚಾಲಕರು ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಮತ್ತು ಇತರ ಸ್ಥಳಗಳಿಗೆ ವಿವಿಧ ದರಗಳೊಂದಿಗೆ ಟ್ರಿಪ್‌ಗಳನ್ನು ನೀಡುತ್ತಿದ್ದಾರೆ.

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (TNIE) ಪ್ರತಿನಿಧಿಯೊಂದಿಗೆ ಮಾತನಾಡಿದ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್, ಈ ಪರಿಕಲ್ಪನೆಯನ್ನು ಹಿಂದೆಯೇ ನೀಡಿದ್ದರೂ ಕೂಡ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. 'ಟೂರಿಸ್ಟ್ ಆಟೋ' ಪ್ರಸ್ತಾವನೆಯನ್ನು ಆಟೋ ಚಾಲಕರು ಮುಂದುವರೆಸಿ ಈಗ ಹಲವರಿಂದ ಬೆಂಬಲ ಸಿಗುತ್ತಿದೆ. ನಗರದ ವೈವಿಧ್ಯಮಯ ಆಕರ್ಷಣೆಗಳನ್ನು ಪತ್ತೆಹಚ್ಚಲು, ಬೆಂಗಳೂರಿಗೆ ಹೊಸಬರಾಗಿ ಬಂದವರಿಗೆ ಇದು ಅನುಕೂಲವಾಗುತ್ತದೆ ಎಂದರು.

"ನಮ್ಮ ಸಂಸ್ಕೃತಿ ಮತ್ತು ಪ್ರವಾಸಿ ಸ್ಥಳಗಳನ್ನು ಚಿತ್ರಿಸುವ ಚಿತ್ರಗಳೊಂದಿಗೆ ವಿಷಯಾಧಾರಿತ ಪ್ರವಾಸಿ ಆಟೋಗಳನ್ನು ಹೊಂದಲು ಯೋಜಿಸುತ್ತಿದ್ದೇವೆ. ಇದು ಪ್ರವಾಸಿಗರಿಗೆ ಪ್ರವಾಸಿ ಆಟೋಗಳನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ. ಆಟೋಗಳಲ್ಲಿ ನೀರಿನ ಬಾಟಲಿಗಳು, ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಪ್ರವಾಸಿಗಳ ಪ್ರತಿಕ್ರಿಯೆ ಪತ್ರದೊಂದಿಗೆ ಕಸ್ಟಮೈಸ್ ಮಾಡಿದ ಮಾರ್ಗ ನಕ್ಷೆಯನ್ನು ಅಳವಡಿಸಲಾಗಿದೆ. ಆರಂಭದಲ್ಲಿ ಇಂತಹ 50 ಆಟೋಗಳನ್ನು ನಗರದಲ್ಲಿ ಆರಂಭಿಸಲು ಯೋಜಿಸಿದ್ದೇವೆ ಎಂದು ಮಂಜುನಾಥ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com