cash and liquor recovery
ಚುನಾವಣಾ ಚೆಕ್ ಪೋಸ್ಟ್

ಮದ್ಯ ವಶದಲ್ಲಿ ಅಗ್ರಸ್ಥಾನ, ಕ್ಯಾಶ್ ರಿಕವರಿಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ! ಸಿಕ್ಕಿದ್ದು ಎಷ್ಟು ಲಕ್ಷ ಲೀಟರ್ ಲಿಕ್ಕರ್ ಗೊತ್ತಾ?

ಲೋಕಸಭಾ ಚುನಾವಣೆ ನಿಮಿತ್ತ ಚುನಾವಣಾಧಿಕಾರಿಗಳು ವಶಕ್ಕೆ ಪಡೆಯುತ್ತಿರುವ ಹಣ ಲೆಕ್ಕ ಏರಿತ್ತಿರುವಂತೆಯೇ ಇದೀಗ ಅತೀ ಹೆಚ್ಚು ನಗದು ಮತ್ತು ನಗದು ವಶಪಡಿಸಿಕೊಂಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕ್ರಮವಾಗಿ ಐದು ಮತ್ತು ಅಗ್ರ ಸ್ಥಾನ ಪಡೆದಿದೆ.
Published on

ಬೆಂಗಳೂರು: ಲೋಕಸಭಾ ಚುನಾವಣೆ ನಿಮಿತ್ತ ಚುನಾವಣಾಧಿಕಾರಿಗಳು ವಶಕ್ಕೆ ಪಡೆಯುತ್ತಿರುವ ಹಣ ಲೆಕ್ಕ ಏರಿತ್ತಿರುವಂತೆಯೇ ಇದೀಗ ಅತೀ ಹೆಚ್ಚು ನಗದು ಮತ್ತು ನಗದು ವಶಪಡಿಸಿಕೊಂಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕ್ರಮವಾಗಿ ಐದು ಮತ್ತು ಅಗ್ರ ಸ್ಥಾನ ಪಡೆದಿದೆ.

ಹೌದು.. ಲೋಕಸಭಾ ಚುನಾವಣಾ ರಣಕಣ ರಂಗೇರಿದ್ದು, ಮೊದಲ ಹಂತದ ಮತದಾನಕ್ಕೆ ಕೇವಲ ಇನ್ನು 10 ದಿನಗಳು ಮಾತ್ರ ಬಾಕಿ ಇದೆ. ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ಮತದಾರರನ್ನು ತಮ್ಮತ್ತ ಸೆಳೆಯಲು ಹಣದ ಹೊಳೆಯನ್ನೇ ಹರಿಸುತ್ತಿದ್ದು, ಏತನ್ಮಧ್ಯೆ ದೇಶಾದ್ಯಂತ ಚುನಾವಣಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಯಥೇಚ್ಛ ಹಣವನ್ನು ವಶಕ್ಕೆ ಪಡೆಯುತ್ತಿದ್ದಾರೆ.

ಅತಿ ಹೆಚ್ಚು ನಗದು ವಸೂಲಿ ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದ್ದು, ಈ ಪಟ್ಟಿಯಲ್ಲಿ ಇದೀಗ ಕರ್ನಾಟಕ ಐದನೇ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ.

cash and liquor recovery
ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು: ನಗದು, ಮದ್ಯ, ಉಚಿತ ಉಡುಗೊರೆ ಸೇರಿ 60 ಕೋಟಿ ರೂ. ಮೌಲ್ಯದ ವಸ್ತು ವಶಕ್ಕೆ!

ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಮಾರ್ಚ್ 1 ರಿಂದ ಏಪ್ರಿಲ್ 13 ರ ನಡುವೆ ರಾಜ್ಯದಲ್ಲಿ ಸುಮಾರು 281 ಕೋಟಿ 43 ಲಕ್ಷದ 28,440 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಆದಾಗ್ಯೂ, ಮುಖ್ಯ ಚುನಾವಣಾಧಿಕಾರಿ (ಸಿಇಒ), ಕರ್ನಾಟಕಾ ಕಚೇರಿಯ ಅಧಿಕಾರಿಗಳಿಂದ ತಾಂತ್ರಿಕ ದೋಷವಾಗಿದ್ದು ಮಾರ್ಚ್ 16 ರಿಂದ ಅಂದರೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 14 ರವರೆಗೆ ಕರ್ನಾಟಕದಲ್ಲಿ ವಶಪಡಿಸಿಕೊಂಡ ಮೊತ್ತವು 355.78 ಕೋಟಿ ರೂ. ಆಗಿದೆ ಎಂದು ಮಾಹಿತಿ ನೀಡಿದೆ.

ಅಧಿಕಾರಿಗಳು ಅತೀ ಹೆಚ್ಚು ನಗದು ವಶಪಡಿಸಿಕೊಂಡ ರಾಜ್ಯಗಳ ಪಟ್ಟಿಯಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದ್ದು, ಗುಜರಾತ್ 2, ತಮಿಳುನಾಡು 3 ಮತ್ತು ಪಂಜಾಬ್ 4ನೇ ಸ್ಥಾನದಲ್ಲಿದೆ. ಕರ್ನಾಟಕ ಐದನೇ ಸ್ಥಾನದಲ್ಲಿದೆ. ಇನ್ನು 2023ರ ವಿಧಾನಸಭೆ ಚುನಾವಣೆ ವೇಳೆ ಒಟ್ಟು 384 ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು.

Karnataka stands fifth in recovery of cash
ಹಣ-ಮದ್ಯ ವಶಕ್ಕೆ

ಮದ್ಯ ವಶ: ಕರ್ನಾಟಕ ನಂಬರ್ 1

ನಗದು ಒಂದೆಡೆಯಾದರೆ ಮತದಾರರಿಗೆ ಹಂಚಲು ತರಲಾಗುತ್ತಿರುವ ಮದ್ಯವನ್ನೂ ಕೂಡ ಅಧಿಕಾರಿಗಳು ಯಥೇಚ್ಛ ಪ್ರಮಾಣದಲ್ಲಿ ವಶಕ್ಕೆ ಪಡೆಯುತ್ತಿದ್ದಾರೆ. ಹೀಗೆ ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದ ಮದ್ಯ ವಶಕ್ಕೆ ಪಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈ ವರೆಗೂ ಒಟ್ಟು 1,24,33,80,670 ರೂ ಮೌಲ್ಯದ 1,30,52,708.14 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ ರಾಜ್ಯ ಚುನಾವಣಾ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ರಾಜ್ಯದಲ್ಲಿ ಈ ವರೆಗೆ 158.94 ಕೋಟಿ ರೂ ಮೌಲ್ಯದ 142.32 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.

ತಾಂತ್ರಿಕ ದೋಷದಿಂದ ಅಂಕಿ-ಅಂಶಗಳಲ್ಲಿ ವ್ಯತ್ಯಾಸ

ಇನ್ನು ವಶಕ್ಕೆ ಪಡೆದ ಮದ್ಯ ಮತ್ತು ನಗದಿನ ಕುರಿತ ದೋಷವನ್ನು ಒಪ್ಪಿಕೊಂಡ ಚುನಾವಣಾ ಅಧಿಕಾರಿಗಳು, 'ನಾವು ಅದನ್ನು ಗಮನಿಸಿದ್ದೇವೆ. ಚುನಾವಣಾ ಸೀಜರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಇಎಸ್‌ಎಂಎಸ್) ಪೋರ್ಟಲ್‌ನಲ್ಲಿ ಮಾಹಿತಿಯನ್ನು ಅಪ್‌ಲೋಡ್ ಮಾಡುವಾಗ ತಾಂತ್ರಿಕ ದೋಷ ಕಂಡುಬಂದಿದೆ. ಬದಲಾವಣೆಗಳನ್ನು ಮಾಡಲು ಇಸಿಐಗೆ ಮನವಿ ಮಾಡಿದ್ದೇವೆ. ಸಾರಿಗೆ ಅನುಮತಿಯ ಕೊರತೆ, ಲೈಸೆನ್ಸ್‌ನ ಮುಕ್ತಾಯ, ಲೆಡ್ಜರ್ ದಾಖಲೆಗಳನ್ನು ನವೀಕರಿಸದಿರುವುದು ಅಥವಾ ಲೋಡ್ ಮಾಡಿದ ಪ್ರಮಾಣ ಮತ್ತು ದಾಖಲೆಗಳಲ್ಲಿ ತೋರಿಸಿರುವ ವ್ಯತ್ಯಾಸ ಸೇರಿದಂತೆ ವಿವಿಧ ಕಾರಣಗಳಿಂದ ಮದ್ಯ ವಶಪಡಿಸಿಕೊಳ್ಳುವಿಕೆ ಹೆಚ್ಚಾಗಿದೆ. ಇಂದು ಅಂಕಿಅಂಶ ಗೊಂದಲಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

cash and liquor recovery
ಚುನಾವಣಾ ಗುರುತು ಚೀಟಿಯಿಂದ ಹೆಸರು ಅಳಿಸಿದ ಆರೋಪ: ಆಕ್ಷೇಪಣೆಗೆ ನಿಗದಿತ ಸ್ಥಳಗಳಲ್ಲಿ ವಾರದವರೆಗೆ ಅಧಿಕಾರಿಗಳು ಲಭ್ಯ

“ಈ ಚುನಾವಣೆಯಲ್ಲಿ ಮದ್ಯ, ಡ್ರಗ್ಸ್ ಮತ್ತು ಚಿನ್ನ ವಶಪಡಿಸಿಕೊಳ್ಳುವುದು ಹೆಚ್ಚಿರುವುದು ಗಮನಕ್ಕೆ ಬಂದಿದೆ. ತಂಡಗಳು ಮೂರು ಪಾಳಿಗಳಲ್ಲಿ, ತಲಾ ಎಂಟು ಗಂಟೆಗಳಂತೆ ಕೆಲಸ ಮಾಡುತ್ತಿದ್ದಾರೆ. ಹಂತ-2ರ ಚುನಾವಣೆಯ ಪ್ರಚಾರ ಇನ್ನೂ ತೀವ್ರಗೊಳ್ಳದಿರುವುದರಿಂದ ಮತ್ತು ಹಂತ-3ರ ಚುನಾವಣೆಗೆ ಇನ್ನೂ ಪ್ರಾರಂಭವಾಗದ ಕಾರಣ ನಾವು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲು ಕೆಲಸ ಮಾಡುತ್ತಿದ್ದೇವೆ. ಇತರ ರಾಜ್ಯಗಳಿಂದ ವಿಶೇಷ ತಂಡಗಳು ಮತ್ತು ಅರೆಸೇನಾ ತಂಡಗಳನ್ನು ಸಹ ಕರೆತರಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com