ಬೆಂಗಳೂರು: ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ; ಮನೆ ಬಾಗಿಲುಗಳಿಗೆ ಸ್ಟಿಕ್ಕರ್ ಅಂಟಿಸಲು BBMP ಮುಂದು!

ಅಧಿಕಾರಿಗಳು ಮತದಾರರ ಮನೆಗಳ ಬಾಗಿಲು ಮತ್ತು ಗೋಡೆಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ಮತದಾನದ ದಿನದಂದು ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮತದಾನದ ಪ್ರಮಾಣ ಕಡಿಮೆ ಇರುವ ಕ್ಷೇತ್ರಗಳು ಮತ್ತು ಬೂತ್‌ಗಳ ಪಟ್ಟಿಯನ್ನು ಚುನಾವಣಾಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇದೀಗ ಇಂತಹ ಬೂತ್‌ಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡು ಮತದಾನ ಮಾಡುವಂತೆ ಮತದಾರರನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಮತದಾನದಿಂದ ದೂರ ಉಳಿಯಲು ಕಾರಣಗಳನ್ನು ತಿಳಿದುಕೊಳ್ಳಲು ಮತ್ತು ತಮ್ಮ ಹಕ್ಕು ಚಲಾಯಿಸಲು ಅವರಿಗೆ ಯಾವುದೇ ಸಹಾಯ ಅಥವಾ ಸೌಲಭ್ಯಗಳ ಅಗತ್ಯವಿದೆಯೇ ಎಂದು ತಿಳಿದುಕೊಳ್ಳುತ್ತಿದ್ದಾರೆ. ಇದಲ್ಲದೆ, ಅಧಿಕಾರಿಗಳು ಮತದಾರರ ಮನೆಗಳ ಬಾಗಿಲು ಮತ್ತು ಗೋಡೆಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ಮತದಾನದ ದಿನದಂದು ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸುತ್ತಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತದಾನ ಶೇಕಡಾವಾರು ಕಡಿಮೆ ಇರುವ ಬೂತ್‌ಗಳಲ್ಲಿ ಮತದಾರರ ಮನೆಗಳ ಬಾಗಿಲು ಮತ್ತು ಗೋಡೆಗಳ ಮೇಲೆ ಅಂಟಿಸಲು 12.9 ಲಕ್ಷ ಸ್ಟಿಕ್ಕರ್‌ಗಳನ್ನು ಮುದ್ರಿಸಿದೆ.

ಚುನಾವಣಾ ಆಯೋಗವು ರಾಷ್ಟ್ರೀಯ ಮತದಾನದ ಸರಾಸರಿ ಶೇಕಡಾ 67.40 ಎಂದು ಗುರುತಿಸಿದೆ.

5 ಸಾವಿರ ಬೂತ್ ಗಳ ಗುರುತು: ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಮತದಾನವಾಗಿರುವ 1,786 ಮತಗಟ್ಟೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಬೆಂಗಳೂರಿನ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ TNIE ಗೆ ತಿಳಿಸಿದ್ದಾರೆ. ಸ್ಟಿಕ್ಕರ್ ಅಂಟಿಸುವುದು ಒಂದು ಜನರಿಗೆ ಜ್ಞಾಪನೆ ಮಾಡುವ ವಿಷಯವಾಗಿದೆ.

ಸಾಂದರ್ಭಿಕ ಚಿತ್ರ
'VFH' ಮತದಾರರ ಮೇಲೆ ಬಿಜೆಪಿ ಪ್ರಭಾವ ಆರೋಪ: ಗೌಪ್ಯತೆ ಉಲ್ಲಂಘನೆಯಾಗಿಲ್ಲ ಎಂದ ಚುನಾವಣಾ ಆಯೋಗ

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪ್ರಕಾರ, ಬೆಂಗಳೂರು ಸೆಂಟ್ರಲ್, ಉತ್ತರ ಮತ್ತು ದಕ್ಷಿಣ ಸಂಸದೀಯ ಕ್ಷೇತ್ರಗಳಲ್ಲಿ ಮತದಾನದ ಶೇಕಡಾವಾರು ರಾಜ್ಯದಲ್ಲಿ ಅತ್ಯಂತ ಕಡಿಮೆ ಮತ್ತು ಕ್ರಮವಾಗಿ ಶೇಕಡಾ 54.26, ಶೇಕಡಾ 54.35 ಮತ್ತು ಶೇಕಡಾ 53.7 ರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಗಳ ಕ್ಷೇತ್ರಗಳಲ್ಲಿ ಸರಾಸರಿಗಿಂತ ಕಡಿಮೆ ಮತದಾನವಾಗಿದೆ.

ವಿಜಯಪುರ, ಬೀದರ್, ರಾಯಚೂರು ಜಿಲ್ಲೆಗಳ ಕ್ಷೇತ್ರಗಳಲ್ಲಿ ಕಡಿಮೆಯಾಗಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ, ಹಾವೇರಿ ಮತ್ತು ಚಿಕ್ಕೋಡಿಯಲ್ಲಿ ಮತದಾನದ ಶೇಕಡಾವಾರು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಚಿಕ್ಕೋಡಿ-ಸದಗಲದಲ್ಲಿ ಶೇಕಡಾ 80.80, ಶಿಕಾರಿಪುರದಲ್ಲಿ ಶೇಕಡಾ 80.64, ತೀರ್ಥಹಳ್ಳಿಯಲ್ಲಿ ಶೇಕಡಾ 80.59 ಮತ್ತು ಶಿವಮೊಗ್ಗ ಗ್ರಾಮಾಂತರದಲ್ಲಿ ಶೇಕಡಾ 80.38ರಷ್ಟು ಮತದಾನವಾಗಿದೆ.

ಸಿಇಒ ಮನೋಜ್ ಕುಮಾರ್ ಮೀನಾ, ರಾಜ್ಯದಲ್ಲಿ ಶೇಕಡಾ 30ರಿಂದ 35ರಷ್ಟು ಮತದಾನವಾಗಿರುವ 5,000 ಬೂತ್‌ಗಳನ್ನು ಗುರುತಿಸಿದ್ದೇವೆ. ಈ ಪ್ರದೇಶಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com