Mysuru Weather: ಮೈಸೂರಿನಲ್ಲಿ ದಾಖಲೆಯ 37.6°C ತಾಪಮಾನ, ಸಾಮಾನ್ಯಕ್ಕಿಂತ 3.4°C ಹೆಚ್ಚಳ

ಕರ್ನಾಟಕ ರಾಜ್ಯದಲ್ಲಿ ಬಿರು ಬೇಸಿಗೆ ಮುಂದುವರೆದಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೇಸಿಗೆ ತಾಪಮಾನ ದಾಖಲೆಯ ಮಟ್ಟಕ್ಕೇರಿದೆ.
Mysuru Weather
ಮೈಸೂರಿನ ತಾಪಮಾನ ಹೆಚ್ಚಳ
Updated on

ಮೈಸೂರು: ಕರ್ನಾಟಕ ರಾಜ್ಯದಲ್ಲಿ ಬಿರು ಬೇಸಿಗೆ ಮುಂದುವರೆದಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೇಸಿಗೆ ತಾಪಮಾನ ದಾಖಲೆಯ ಮಟ್ಟಕ್ಕೇರಿದೆ.

ಹೌದು.. ಮೈಸೂರಿನಲ್ಲಿ ನಿನ್ನೆ 37.6°C ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 3.4°C ಹೆಚ್ಚಳ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೈಸೂರಿನಲ್ಲಿ ಕಳೆದೊಂದು ತಿಂಗಳಿನಿಂದಲೂ ತಾಪಮಾನ ಕ್ರಮೇಣ ಏರಿಕೆಯಾಗುತ್ತಿದ್ದು, ಏಪ್ರಿಲ್ 16 ಅಂದರೆ ನಿನ್ನೆ ಮೈಸೂರಿನಲ್ಲಿ 38 ಡಿಗ್ರಿ ಗಡಿ ತಲುಪಿದೆ.

ಇನ್ನು ನಿನ್ನೆ ರಾಜ್ಯದಲ್ಲಿ ಗರಿಷ್ಟ ತಾಪಮಾನ ಕಲಬುರಗಿಯಲ್ಲಿ ದಾಖಲಾಗಿದ್ದು, ಇಲ್ಲಿ 41.4°C ತಾಪಮಾನ ದಾಖಲಾಗಿದೆ. 2ನೇ ಸ್ಥಾನದಲ್ಲಿ ಗದಗ ಇದ್ದು ಇಲ್ಲಿ 40.2°C ತಾಪಮಾನ ದಾಖಲಾಗಿದೆ.

Mysuru Weather
Bengaluru Rains: 'ಹುಸಿಯಾಯ್ತು ಏಪ್ರಿಲ್ ಮಳೆ', ಮೇ ನಲ್ಲಿ 'ನೋಡೋಣ' ಎಂದ ಹವಾಮಾನ ಇಲಾಖೆ

ಉಳಿದಂತೆ ಬಾಗಲಕೋಟೆಯಲ್ಲಿ 39.8°C ತಾಪಮಾನ, ಬೆಳಗಾವಿಯಲ್ಲಿ 38.6°C, ಬೆಂಗಳೂರಿನಲ್ಲಿ 36.7°C, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 36.7°C, ಬೀದರ್ ನಲ್ಲಿ 38.6°C, ಚಿತ್ರದುರ್ಗದಲ್ಲಿ 38.5°C, ಗೋಕರ್ಣದಲ್ಲಿ 37.3°C, ಹೊನ್ನಾವರದಲ್ಲಿ 34°C, ಕಾರವಾರ 37.3°C, ಮಂಗಳೂರಿನಲ್ಲಿ 35.1°C ಮತ್ತು ವಿಜಯಪುರದಲ್ಲಿ 40.4°C ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com