ಬಿವೈ ರಾಘವೇಂದ್ರ-ಬಿಎಸ್ ಯಡಿಯೂರಪ್ಪ
ಬಿವೈ ರಾಘವೇಂದ್ರ-ಬಿಎಸ್ ಯಡಿಯೂರಪ್ಪTNIE

BSY ಪುತ್ರ ರಾಘವೇಂದ್ರ ಮತ್ತು ಪತ್ನಿ ಬಳಿ ಇದೆ 73.71 ಕೋಟಿ ರೂ. ಮೌಲ್ಯದ ಆಸ್ತಿ!

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಾವು ಮತ್ತು ತಮ್ಮ ಪತ್ನಿ 73.71 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಎಂದು ಘೋಷಿಸಿದ್ದಾರೆ.

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಾವು ಮತ್ತು ತಮ್ಮ ಪತ್ನಿ 73.71 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಎಂದು ಘೋಷಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ರಾಘವೇಂದ್ರ ಇಂದು ನಾಮಪತ್ರ ಸಲ್ಲಿಸಿದ್ದು, ತಮ್ಮ ಹೆಸರಿನಲ್ಲಿ 31.09 ಕೋಟಿ ರೂ ಮೌಲ್ಯದ ಚರಾಸ್ಥಿ ಹಾಗೂ ಪತ್ನಿ ತೇಜಸ್ವಿನಿ ಹೆಸರಿನಲ್ಲಿ 2.95 ಕೋಟಿ ರೂ. ಚರಾಸ್ಥಿ ಇರುವುದಾಗಿ ಘೋಷಿಸಿದ್ದಾರೆ.

ಮೂರು ಬಾರಿ ಸಂಸದರಾಗಿರುವ ರಾಘವೇಂದ್ರ ಕೃಷಿ ಮತ್ತು ಕೃಷಿಯೇತರ ಭೂಮಿ, ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿದಂತೆ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ. ರಾಘವೇಂದ್ರ ಹೆಸರಿನಲ್ಲಿ 24.76 ಕೋಟಿ ರೂ. ಮತ್ತು ಅವರ ಪತ್ನಿ ಹೆಸರಿನಲ್ಲಿ 14.90 ಕೋಟಿ ರೂ. ಸ್ಥಿರಾಸ್ಥಿ ಹೊಂದಿದ್ದಾರೆ.

ಬಿವೈ ರಾಘವೇಂದ್ರ-ಬಿಎಸ್ ಯಡಿಯೂರಪ್ಪ
ಪ್ರಹ್ಲಾದ್ ಜೋಶಿಗೆ ಸೆಡ್ಡು: ನಾಮಪತ್ರ ಸಲ್ಲಿಸಿದ ಸ್ವಾಮೀಜಿ. ಮಂಡ್ಯದಲ್ಲಿ 'ಕೈ' ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ, ಮತದಾನ ಮಾಡದವರ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ? - ಈ ದಿನದ ಸುದ್ದಿ ಮುಖ್ಯಾಂಶಗಳು 18-04-24

ಬ್ಯಾಚುಲರ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ (ಬಿಬಿಎಂ) ಪದವೀಧರರಾಗಿರುವ 50 ವರ್ಷದ ರಾಘವೇಂದ್ರ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ರಾಘವೇಂದ್ರ ಅವರು ಒಂದು ಲಕ್ಷ ರೂಪಾಯಿ ಮೌಲ್ಯದ ಅಂಬಾಸಿಡರ್ ಕಾರು, 41.32 ಲಕ್ಷ ರೂಪಾಯಿ ಮೌಲ್ಯದ ಟೊಯೊಟಾ ಫಾರ್ಚೂನರ್ ಕಾರು ಮತ್ತು 2.45 ಲಕ್ಷ ರೂಪಾಯಿ ಮೌಲ್ಯದ ಟ್ರ್ಯಾಕ್ಟರ್ ಹೊಂದಿದ್ದಾರೆ.

ರಾಘವೇಂದ್ರ ಅವರು ತಮ್ಮ ಬಳಿಯಿರುವ ಚಿನ್ನ, ವಜ್ರ, ಬೆಳ್ಳಿ ಮತ್ತು ಅಮೂಲ್ಯ ರತ್ನಗಳು 98.83 ಲಕ್ಷ ರೂ.ಗಳ ಮೌಲ್ಯದ್ದಾಗಿದೆ ಎಂದು ಘೋಷಿಸಿದರೆ, ಅವರ ಪತ್ನಿ ಹೆಸರಿನಲ್ಲಿರುವ ಚಿನ್ನಾಭರಣಗಳ ಮೌಲ್ಯ 1.13 ಕೋಟಿ ರೂಪಾಯಿ ಆಗಿದೆ.

Advertisement

X
Kannada Prabha
www.kannadaprabha.com