ಅಕ್ರಮ ಸಂಬಂಧ: ಬೆಂಗಳೂರಿನ ಸಾರಕ್ಕಿ ಬಳಿಯಿರುವ ಪಾರ್ಕ್​ನಲ್ಲಿ ಜೋಡಿ ಕೊಲೆ

ರಾಜಧಾನಿ ಬೆಂಗಳೂರಿನ ಸಾರಕ್ಕಿ ಬಳಿಯಿರುವ ಪಾರ್ಕ್​ನಲ್ಲಿ ಗುರುವಾರ ಹಾಡು ಹಗಲೆ ಜೋಡಿ ಕೊಲೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರಕ್ಕಿ ಬಳಿಯಿರುವ ಪಾರ್ಕ್​ನಲ್ಲಿ ಗುರುವಾರ ಹಾಡು ಹಗಲೆ ಜೋಡಿ ಕೊಲೆ ನಡೆದಿದೆ. ಇಂದು ಸಂಜೆ ಅಕ್ರಮ ಸಂಬಂಧ ಮುಂದುವರಿಸಲು ನಿರಾಕರಿಸಿದ ಯುವತಿಯನ್ನ ವಿವಾಹಿತ ವ್ಯಕ್ತಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಇಂದು ಸಂಜೆ ಸಾರಕ್ಕಿ ಮಾರ್ಕೆಟ್ ಬಳಿ ಇರುವ ಪಾರ್ಕ್ ನಲ್ಲಿ ಗೊರಗುಂಟೆ ಪಾಳ್ಯ ನಿವಾಸಿ ಸುರೇಶ್‌ (46) ಮತ್ತು ಶಾಂಕಾಂಬರಿ ನಗರ ನಿವಾಸಿ ಅನುಷಾ (25) ಎಂಬುವವ ನಡುವೆ ಜಗಳ ಆರಂಭವಾಗಿ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಪೊಲೀಸರ ಪ್ರಕಾರ, ಸುರೇಶ್ ಮತ್ತು ಅನುಷಾ ಇಬ್ಬರು ಹಲವು ವರ್ಷಗಳಿಂದ ಪರಿಚಿತರು. ಸುರೇಶ್‌ಗೆ ಮದುವೆಯಾಗಿತ್ತು. ಆದರೂ ಸುರೇಶ್ ಹಾಗೂ ಅನುಷಾ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಅನುಷಾಗೆ ಸಂಬಂದ ಮುಂದುವರೆಸುವುದು ಇಷ್ಟ ಇರ್ಲಿಲ್ಲಾ. ಹೀಗಾಗಿ, ಭೇಟಿ ಮಾಡಿ ನಂತರ ಸಂಪರ್ಕ್ ಕಡಿತ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದರು. ಈ ವೇಳೆ ಅನುಷಾ ತನ್ನ ಕೈ ತಪ್ಪಿ ಹೋಗ್ತಾಳೆ ಎಂದು ಕೋಪಗೊಂಡಿದ್ದ ಸುರೇಶ್ ಕೋಪದಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್​ನಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಪುತ್ರಿಯ ಭೀಕರ ಕೊಲೆ, ಆರೋಪಿ ಫಯಾಜ್ ಬಂಧನ

ಮಗಳಿಗೆ ಸುರೇಶ್ ಚಾಕು ಹಾಕುತಿದ್ದಾಗ ಅನುಷಾ ತಾಯಿ ಗೀತಾ ತಡೆಯಲು ಯತ್ನಿಸಿದ್ದಾರೆ. ಗೀತಾ ತಾಯಿ ಅಡ್ಡ ಬಂದರೂ ನಿಲ್ಲಿಸದೆ ಚಾಕು ಇರಿಯುವುದನ್ನ ಮುಂದುವರಿಸಿದ್ದ ಸುರೇಶ್ ತಲೆಮೇಲೆ ಅಲ್ಲಿಯೇ ಇದ್ದ ಸಿಮೆಂಟ್ ಇಟ್ಟಿಗೆಯನ್ನು ಎತ್ತಿ ಹಾಕಿದ್ದಾರೆ. ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿ ಅನುಷಾ ಮತ್ತು ಸುರೇಶ್ ಇಬ್ಬರು ಮೃತಪಟ್ಟಿದ್ದಾರೆ.

ಅನುಷಾ ತಾಯಿ ಗೀತಾ ಅವರನ್ನು ವಶಕ್ಕೆ ಪಡೆದ ಜೆಪಿ‌ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com