ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಮೋದಿ ವರ್ಚಸ್ಸು, ಬಿಜೆಪಿ-ಜೆಡಿಎಸ್ ಮೈತ್ರಿ ನನ್ನ ಭಾರೀ ಗೆಲುವಿಗೆ ಸಹಕಾರಿ: ಶೋಭಾ ಕರಂದ್ಲಾಜೆ (ಸಂದರ್ಶನ)

ಬೆಂಗಳೂರು: ಬಿಜೆಪಿ-ಜೆಡಿಎಸ್‌ ಕೈಜೋಡಿಸಿರುವುದರಿಂದ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಭಾರೀ ಮತಗಳ ಅಂತರದಿಂದ ಈ ಬಾರಿ ಗೆಲುವು ಸಾಧಿಸುತ್ತೇನೆಂದು ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಮೂರನೇ ಬಾರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಬಾರಿ ಹೊಸ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಲೋಕಸಭಾ ಚುನಾವಣೆ ಹಾಗೂ ಸಿದ್ಧತೆಗಳ ಕುರಿತು ಮಾತನಾಡಿದರು.

Q

ಚುನಾವಣೆ ಹತ್ತಿರ ಬರುತ್ತಿವೆ, ನಿಮ್ಮ ನಿರೀಕ್ಷೆಗಳೇನು?

A

ಯಶವಂತಪುರ ಶಾಸಕಳಾಗಿ ಹಾಗೂ ಇತರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದ್ದರಿಂದ ಬೆಂಗಳೂರು ಉತ್ತರ ನನಗೆ ಹಳೆಯ ಕ್ಷೇತ್ರವಾಗಿದೆ. ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಉತ್ಸಾಹ ಬಿಜೆಪಿ ಕಾರ್ಯಕರ್ತರಲ್ಲಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಎನ್‌ಡಿಎ ಜೊತೆಗೆ ಕೈಜೋಡಿಸಿರುವುದರಿಂದ ಮೈತ್ರಿಯು ಬಿಜೆಪಿಗೆ ಶಕ್ತಿ ನೀಡಿದೆ. ದೇವೇಗೌಡ ಅವರ ಅಳಿಯ ಡಾ.ಸಿ.ಎನ್.ಮಂಜುನಾಥ್, ಬೆಂಗಳೂರು ಗ್ರಾಮಾಂತರ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಳಿದಿದ್ದಾರೆ. ಇದು ಮತ್ತಷ್ಟು ಉತ್ತೇಜನ ನೀಡಿದೆ. ಬಿಜೆಪಿ-ಜೆಡಿಎಸ್ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ದೊಡ್ಡ ಗೆಲುವು ಸಾಧಿಸುವ ವಿಶ್ವಾಸವಿದೆ.

Q

ಉಡುಪಿ-ಚಿಕ್ಕಮಗಳೂರು ಮತ್ತು ಬೆಂಗಳೂರು ಉತ್ತರದಲ್ಲಿ 'ಗೋ ಬ್ಯಾಕ್' ಅಭಿಯಾನವನ್ನು ಎದುರಿಸಿದ್ದೀರಿ?

A

ಕೆಲವು ಟಿಕೆಟ್ ಆಕಾಂಕ್ಷಿಗಳು ಮಾಧ್ಯಮದ ಗಮನ ಸೆಳೆಯಲು ಈರೀತಿಯ ಪ್ರಯತ್ನ ಮಾಡಿದ್ದಾರೆ. ಬೆಂಗಳೂರು ಉತ್ತರದಲ್ಲಿ ಪಕ್ಷದ 10-12 ಕಾರ್ಯಕರ್ತರ ಬೆಂಬಲವೂ ಇಲ್ಲದ ಕೆಲವು ಆಕಾಂಕ್ಷಿಗಳು ಇದನ್ನು ಮಾಡಿದ್ದಾರೆ.

Q

ನಿಮ್ಮ ಒಬ್ಬ ಶಾಸಕ ಎಸ್.ಟಿ.ಸೋಮಶೇಖರ್ ನಿಮ್ಮ ಎದುರಾಳಿಯ ಪರ ನಿಂತಿದ್ದಾರೆ. ಪರಿಣಾಮ ಏನಾಗಲಿದೆ?

A

ಸದಾನಂದಗೌಡ ಅವರು ಮೊದಲ ಹಂತದ ಪ್ರಚಾರದಲ್ಲಿ ಪಕ್ಷದ ಕಾರ್ಯಕರ್ತರ ಎಲ್ಲಾ ಸಭೆಗಳಲ್ಲಿ ಭಾಗವಹಿಸಿದ್ದರು. ಕಾರ್ಯಕರ್ತರಿಗೂ ಮನವರಿಕೆ ಮಾಡಿದರು. ನನ್ನ ಉಮೇದುವಾರಿಕೆ ಘೋಷಣೆಯಾದ ಕೂಡಲೇ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆ. ಸೋಮಶೇಖರ್ ಅವರ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಅದಕ್ಕೆ ಅವರು ಅರ್ಹರೂ ಅಲ್ಲ.

Q

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಹಿಡಿದು ಪ್ರಚಾರ ನಡೆಸುತ್ತಿದೆ. ನಿಮ್ಮ ನಡೆ ಏನು?

A

ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಗ್ಯಾರಂಟಿ ಕಾರ್ಡ್‌ಗಳು ವಿತರಿಸಿದ್ದು ಅವರಿಗೆ ಸಹಾಯ ಮಾಡಿತು. ಅದನ್ನು ನಾವು ಅಲ್ಲಗಳೆಯುವಂತಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಅವರು ಹೊರಗಿನಿಂದ ಭಾರಿ ಸಾಲ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯ ನಂತರವೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗುವುದು ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.

Q

ಕೇಂದ್ರ ಸರ್ಕಾರ ರಾಜ್ಯ ತೆರಿಗೆ ಪಾಲು ಮತ್ತು ಎನ್‌ಡಿಆರ್‌ಎಫ್ ನಿಧಿ ನೀಡಲು ನಿರಾಕರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ನಿಮ್ಮ ಪ್ರತಿಕ್ರಿಯೆ?

A

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ ಯಾವುದೇ ರಾಜ್ಯಗಳು ಅರ್ಹತೆ ಹೊಂದಿದ್ದರೂ ಕಾನೂನಿನ ಪ್ರಕಾರ ಹಣ ನೀಡಬೇಕಾಗುತ್ತದೆ. ಹಣಕಾಸು ಆಯೋಗವು ತೆರಿಗೆ ಪಾಲನ್ನು ಶಿಫಾರಸು ಮಾಡಿದ್ದು, ಪ್ರಧಾನಿ ಮೋದಿ ಯಾವುದೇ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಿಲ್ಲ.

Q

ಇಡಿ ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆ ಎಂದು ನಿಮ್ಮ ಎದುರಾಳಿ ಹೇಳಿದ್ದಾರೆ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

A

ಇದು ಕೇವಲ ಆರೋಪವಷ್ಟೇ. ನಾನು ಯಾವುದೇ ಭ್ರಷ್ಟಾಚಾರ ಮಾಡದ ಕಾರಣ ನನ್ನ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಹಿಂದಿನ ಯುಪಿಎ ಸರ್ಕಾರ ಷಡ್ಯಂತ್ರ ರೂಪಿಸಿ ನನ್ನನ್ನು 24ನೇ ಆರೋಪಿಯನ್ನಾಗಿ ಮಾಡಿ, ನನ್ನನ್ನು ಟಾರ್ಗೆಟ್ ಮಾಡಿತ್ತು. ನನ್ನ ಹೋರಾಟ ನ್ಯಾಯಾಲಯದಲ್ಲಿದೆ. ಅವರು (ರಾಜೇಗೌಡ) ಅನಗತ್ಯವಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ಅಷ್ಟೊಂದು ಬುದ್ದಿವಂತರಾಗಿದ್ದರೆ ಪ್ರಕರಣವನ್ನು ಅಧ್ಯಯನ ಮಾಡಬೇಕಿತ್ತು.

Q

ಕೇಂದ್ರ ಸಚಿವರಾಗಿ ನಿಮ್ಮ ಕೊಡುಗೆ ಏನು?

A

ನಾನು ಮೋದಿ ಸರ್ಕಾರದ ಸಾಧನೆಗಳ ಭಾಗವಾಗಿದ್ದೇನೆ. ಸರ್ಕಾರ ತಂದ ಯೋಜನೆಗಳಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, 142 ಕೋಟಿ ಜನರಿಗೆ ವಿತರಿಸಿದ ಬಳಿರುವ ಹೆಚ್ಚುವರಿ ದಾಸ್ತಾನು ಇದೆ. ನಮ್ಮ ರೈತರಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸುವ ಕುರಿತಂತೆಯೂ ಚಿಂತನೆ ನಡೆಸಿದ್ದೇನೆ. 3-3.5 ಲಕ್ಷ ಸಣ್ಣ ಆಹಾರ ಘಟಕಗಳನ್ನು ಆರಂಭಿಸುವ ಮೂಲಕ ಕರ್ನಾಟಕ ಆಹಾರ ಸಂಸ್ಕರಣೆಯಲ್ಲಿ ಪ್ರಗತಿ ಸಾಧಿಸುತ್ತಿದೆ.

Q

ಬೆಂಗಳೂರಿಗೆ ನಿಮ್ಮ ಯೋಜನೆ ಏನು?

A

ಉತ್ತಮ ಮೂಲಸೌಕರ್ಯ ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುವುದು. ರಾಜ್ಯ ಸರ್ಕಾರದ ದುರಾಡಳಿತದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕಾವೇರಿ 5ನೇ ಹಂತವನ್ನು ಅನುಷ್ಠಾನಗೊಳಿಸಬೇಕಿದೆ.

Related Stories

No stories found.

Advertisement

X
Kannada Prabha
www.kannadaprabha.com