ಬೆಂಗಳೂರು: ಪಾಸ್‌ಪೋರ್ಟ್ ಕಚೇರಿಯಲ್ಲಿ ಮದುವೆಯ ಡೈಮಂಡ್ ರಿಂಗ್ ಮರೆತ ಮೈಸೂರು ವ್ಯಕ್ತಿ! ಆಮೇಲೇನಾಯ್ತು..!

ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡುವವರು ದಾಖಲೆಗಳನ್ನು ಬಿಟ್ಟು ಹೋಗುವುದು ಸಾಮಾನ್ಯ ವಿದ್ಯಮಾನ. ಆದರೆ ಯಾರಾದರೂ ಅಮೂಲ್ಯವಾದ ಡೈಮಂಡ್ ಉಂಗುರವನ್ನು ಬಿಟ್ಟು ಹೋಗುವುದು ಅಪರೂಪ ,
ಸುರೇಶ್ ಪ್ರಭು ಅವರ ವಜ್ರದುಂಗುರ
ಸುರೇಶ್ ಪ್ರಭು ಅವರ ವಜ್ರದುಂಗುರ

ಬೆಂಗಳೂರು: ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಲಾಲ್‌ಬಾಗ್‌ನ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದ ವ್ಯಕ್ತಿಯು ಮರೆತು ತನ್ನ ವಜ್ರದುಂಗುರ ಬಿಟ್ಟಹೋಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.

ಮೈಸೂರಿನ 65 ವರ್ಷದ ಉಮೇಶ್ ಪ್ರಭು ಅವರ ವಜ್ರದುಂಗುರವನ್ನು ಪಾಸ್‌ಪೋರ್ಟ್ ಅಧಿಕಾರಿಗಳು ಉಮೇಶ್ ಪ್ರಭು ಅವರ ಬೆಂಗಳೂರು ಮೂಲದ ಅವರ ಸೋದರಳಿಯನಿಗೆ ಹಸ್ತಾಂತರಿಸಿದ್ದಾರೆ..

ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡುವವರು ದಾಖಲೆಗಳನ್ನು ಬಿಟ್ಟು ಹೋಗುವುದು ಸಾಮಾನ್ಯ ವಿದ್ಯಮಾನವಾಗಿದೆ .ಆದರೆ ಯಾರಾದರೂ ಅಮೂಲ್ಯವಾದ ಡೈಮಂಡ್ ಉಂಗುರವನ್ನು ಬಿಟ್ಟು ಹೋಗುವುದು ಅಪರೂಪ ಎಂದು ಪಾಸ್‌ಪೋರ್ಟ್ ಸೇವಾ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಕರ್ನಾಟಕ ಉಸ್ತುವಾರಿ ವಿ ಮಹೇಶ್ ವಂದಾಲ್ ಹೇಳಿದರು.

ಟೊರೆಂಟ್ ಫಾರ್ಮಾಸ್ಯುಟಿಕಲ್ ಕಂಪನಿಯ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾದ ಪ್ರಭು ತಾವು ಮೆರತು ಬಿಟ್ಟು ಬಂದಿದ್ದ ಉಂಗುರದ ಬಗ್ಗೆ ಮಾತನಾಡಿದ್ದಾರೆ. ಈ ಉಂಗುರವು ತಮಗೆ ಮಹತ್ವ ಪೂರ್ಣವಾದದ್ದು. ಇದನ್ನು 1992 ರಲ್ಲಿ ನಮ್ಮ ಮದುವೆಯ ದಿನದಂದು ನನ್ನ ಹೆಂಡತಿ ನನಗೆ ಕೊಟ್ಟಿದ್ದರು. ಇದರ ಬೆಲೆ 1ರಿಂದ 1.5 ಲಕ್ಷ ಇರಬೇಕು. ಆದರೆ ನನಗೆ ಅದರ ಬೆಲೆಗಿಂತ ಅದರ ಮೇಲಿನ ಪ್ರೀತಿ ಮುಖ್ಯವಾದ್ದದು, ನಿಜ ಹೇಳಬೇಕೆಂದರೆ, ಅದು ನನಗೆ ಸಿಗುವುದಿಲ್ಲ ಎಂದು ಅಂದುಕೊಂಡಿದ್ದೆ ಎಂದು ಮೈಸೂರು ಮೂಲದ ಉಮೇಶ್ ಪ್ರಭು ತಿಳಿಸಿದ್ದಾರೆ.

ನನ್ನ ಪಾಸ್‌ಪೋರ್ಟ್‌ಗಾಗಿ ತತ್ಕಾಲ್ ಅಪಾಯಿಂಟ್‌ಮೆಂಟ್ ಇದ್ದ ಕಾರಣ ನಾನು ಬುಧವಾರ ಬೆಂಗಳೂರಿಗೆ ಬೇಗನೆ ಹೊರಟಿದ್ದೆ. 10.30 ಕ್ಕೆ ಅಪಾಯಿಂಟ್‌ಮೆಂಟ್‌ ಇತ್ತು ನಾವು 9.45 ಕ್ಕೆ ಬಂದೆವು. ಹಿರಿಯ ನಾಗರಿಕರಿಗಾಗಿ ವಿಶೇಷ ಸರತಿ ಸಾಲು ಇದೆ ಎಂದು ತಿಳಿದು ಅಲ್ಲಿಗೆ ಹೋದೆ. ನನ್ನ ಫಿಂಗರ್‌ಪ್ರಿಂಟ್‌ಗಳನ್ನು ಸ್ಕ್ಯಾನ್ ಮಾಡುತ್ತಿರುವಾಗ, ನನ್ನ ಉಂಗುರವು ಸ್ವಲ್ಪ ಸಡಿಲವಾಗಿತ್ತು. ಆದ್ದರಿಂದ, ನಾನು ಅದನ್ನು ತೆಗೆದು ಪಕ್ಕಕ್ಕೆ ಇರಿಸಿ ಮತ್ತು ಬಯೋಮೆಟ್ರಿಕ್ಸ್ ನೀಡಿದ್ದೆ. ಪಾಸ್ ಪೋರ್ಟ್ ಪ್ರಕ್ರಿಯೆ ಶೀಘ್ರವಾಗಿ ಮುಗಿಯಿತು, ಅದಾದ ನಂತರ ಬೆಂಗಳೂರಿನಲ್ಲಿರುವ ನನ್ನ ಸಹೋದರಿಯ ಮನೆಗೆ ಹೋದೆ.

ಸುರೇಶ್ ಪ್ರಭು ಅವರ ವಜ್ರದುಂಗುರ
ಬೆಂಗಳೂರು: ಎರಡು ಕೈಗಳಿಲ್ಲದ ವ್ಯಕ್ತಿಯ ಪಾಸ್ ಪೋರ್ಟ್ ಗಾಗಿ ಫಿಂಗರ್ ಬಯೋಮೆಟ್ರಿಕ್ ವಿನಾಯಿತಿ!

ಅಲ್ಲಿಂದ ಮತ್ತೆ ಮೈಸೂರಿಗೆ ತೆರಳುತ್ತಿದ್ದಾಗ ಉಂಗುರ ಇಲ್ಲದಿರುವುದು ತಿಳಿಯಿತು. ನಾನು ಮೈಸೂರು ತಲುಪಿದ ತಕ್ಷಣ, ನಾನು ಆನ್‌ಲೈನ್‌ನಲ್ಲಿ ಲಾಲ್‌ಬಾಗ್ ಪಾಸ್‌ಪೋರ್ಟ್ ಸೇವಾ ಮೇಲ್ ಐಡಿಯನ್ನು ಕಂಡು ಅವರಿಗೆ ಪತ್ರ ಬರೆದೆ. ಮರುದಿನ ಅದನ್ನು ಸಂಗ್ರಹಿಸಲು ನನ್ನ ಸೋದರಳಿಯ ಎಸ್‌ಎನ್ ಸುನೀಲ್ ಪೈ ಬರುವುದಾಗಿಯೂ ಹೇಳಿದ್ದೆ ಎಂದು ಅವರು ಹೇಳಿದರು.

ನಮ್ಮ ಅಸೋಸಿಯೇಟ್ ಸಿಸಿ ಸೌಮ್ಯ ಅವರಿಗೆ ಉಂಗುರ ಸಿಕ್ಕಿತ್ತು, ಅದನ್ನು ಸುರಕ್ಷಿತವಾಗಿರಿಸಲು ನನಗೆ ಒಪ್ಪಿಸಿದ್ದರು. ನಾವು ಅದನ್ನು ಇಂದು (ಗುರುವಾರ) ಅವರ ಸೋದರಳಿಯನಿಗೆ ನೀಡಿದ್ದೇವೆ ಎಂದು ಪಿಎಸ್‌ಕೆಯಲ್ಲಿನ ಟಿಸಿಎಸ್‌ನ ಕೇಂದ್ರ ವ್ಯವಸ್ಥಾಪಕ ಸಿಎಚ್ ಗಂಗಾಶಂಕರ್ ತಿಳಿಸಿದ್ದಾರೆ. ಪ್ರಭು ಅವರು ಪಾಸ್‌ಪೋರ್ಟ್ ಕಛೇರಿಗೆ ಮತ್ತೊಂದು ಮೇಲ್ ಮೂಲಕ ಸರ್ಕಾರಿ ಸಂಸ್ಥೆಯೊಂದರ ತ್ವರಿತ ಸೇವೆಯನ್ನು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com