ರೈಲ್ವೆ ನಿರ್ವಹಣಾ ಶುಲ್ಕ ತುಂಬಾ ದುಬಾರಿ: ಎರಡು ಯೋಜನೆ ಸ್ಥಗಿತಗೊಳಿಸಿದ BDA

ಬೆಂಗಳೂರು ರೈಲ್ವೆ ವಿಭಾಗ ವಿಧಿಸುವ ಒಟ್ಟಾರೆ ನಿರ್ವಹಣಾ ಶುಲ್ಕವು ತುಂಬಾ ಹೆಚ್ಚಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧಿಕಾರಿಗಳು ಭಾವಿಸಿದ್ದಾರೆ.
 ರಸ್ತೆ ಕೆಳ ಸೇತುವೆ ಕಾಮಗಾರಿ
ರಸ್ತೆ ಕೆಳ ಸೇತುವೆ ಕಾಮಗಾರಿ

ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗ ವಿಧಿಸುವ ಒಟ್ಟಾರೆ ನಿರ್ವಹಣಾ ಶುಲ್ಕವು ತುಂಬಾ ಹೆಚ್ಚಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧಿಕಾರಿಗಳು ಭಾವಿಸಿರುವುದರಿಂದ, ಅನುಷ್ಠಾನಗೊಳಿಸಬೇಕಾದ ಎರಡು ಯೋಜನೆಗಳು ಸ್ಥಗಿತಗೊಂಡಿವೆ.

ಹೆಬ್ಬಾಳ ಮೇಲ್ಸೇತುವೆ ಬಳಿ ರಸ್ತೆ ಮೇಲ್ಸೇತುವೆ(ROB) ಮತ್ತು ಚಲ್ಲಘಟ್ಟದಲ್ಲಿ ರಸ್ತೆ ಕೆಳ ಸೇತುವೆ(RUB) ಯೋಜನೆಗಳು ಸ್ಥಗಿತಗೊಂಡಿವೆ. ಆದಾಗ್ಯೂ, ಇದು ದೇಶಾದ್ಯಂತ ಅನ್ವಯವಾಗುವ ನಿಯಮ ಪುಸ್ತಕದ ಪ್ರಕಾರವೇ ನಡೆಯುತ್ತಿದೆ ಎಂದು ರೈಲ್ವೆ ಹೇಳುತ್ತಿದೆ.

ಕಾಮಗಾರಿಯನ್ನು ಮುಂದುವರಿಸುವ ಮೊದಲು ನಿರ್ವಹಣಾ ಶುಲ್ಕವನ್ನು ಬಿಡಿಎ ರೈಲ್ವೆಗೆ ಠೇವಣಿಯಾಗಿ ಪಾವತಿಸಬೇಕಾಗುತ್ತದೆ.

ಈ ಸಂಬಂಧ ರೈಲ್ವೆ ಹೊರಡಿಸಿದ ಪತ್ರಗಳ ನಕಲು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು, ಚಲ್ಲಘಟ್ಟ ಆರ್‌ಯುಬಿಗೆ ಸಂಬಂಧಿಸಿದಂತೆ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಇಂಜಿನಿಯರ್ ಬರೆದ ಪತ್ರದಲ್ಲಿ ಬಿಡಿಎ 13,93,08,490 ರೂ. ಠೇವಣಿ ಪಾವತಿಸಬೇಕಾಗಿದೆ. ಕೋಡಲ್ ಶುಲ್ಕ 2,40, 18,705 ಮೇಲ್ವಿಚಾರಣಾ ಶುಲ್ಕ ಸೇರಿದಂತೆ ಯೋಜನಾ ವೆಚ್ಚದ ಶೇ. 6.25 ರಷ್ಟು ಮತ್ತು ಯೋಜನಾ ವೆಚ್ಚದ ಶೇ, 30 ರಷ್ಟು ನಿರ್ವಹಣಾ ಶುಲ್ಕ ಪಾವತಿಸಬೇಕಾಗಿದೆ.

 ರಸ್ತೆ ಕೆಳ ಸೇತುವೆ ಕಾಮಗಾರಿ
ಬಿಬಿಎಂಪಿ, ಬಿಡಿಎ, ಕೆಐಎಡಿಬಿ ವ್ಯಾಜ್ಯಗಳು ನ್ಯಾಯಾಲಯಕ್ಕೆ ಅಂಟಿರುವ ಅನಿಷ್ಟ: ಹೈಕೋರ್ಟ್‌ ಕಿಡಿ

"ಈ ಶುಲ್ಕಗಳನ್ನು ಯೋಜನೆಗೆ ಮುಂಚಿತವಾಗಿ ವಿಧಿಸಲಾಗುತ್ತದೆ. ಮೇಲ್ವಿಚಾರಣಾ ಶುಲ್ಕ ಪರವಾಗಿಲ್ಲ. ಆದರೆ ನಿರ್ವಹಣೆಗೆ 11.5 ಕೋಟಿ ಶುಲ್ಕ ತುಂಬಾ ಹೆಚ್ಚು. ಯೋಜನೆಗೆ ನಮ್ಮ ಅಂದಾಜು ವೆಚ್ಚ(ರೈಲ್ವೆ ಭಾಗದ ಮೂಲಕ ಹಾದುಹೋಗುತ್ತದೆ) 38.43 ಕೋಟಿ ರೂ. ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.

ನಿರ್ವಹಣಾ ಶುಲ್ಕವನ್ನು ಮನ್ನಾ ಮಾಡಲು ಬಿಡಿಎ ರೈಲ್ವೆಯೊಂದಿಗೆ ಮಾತುಕತೆ ನಡೆಸಲಿದೆ. ಏಕೆಂದರೆ ಪ್ರಾಧಿಕಾರವು ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಇಲ್ಲದಿದ್ದರೆ, ಒಂದೇ ಬಾರಿಗೆ ಶುಲ್ಕವನ್ನು ಪಾವತಿಸುವ ಬದಲು ವಾರ್ಷಿಕ ಆಧಾರದ ಮೇಲೆ ನಮಗೆ ಅನುಮತಿ ನೀಡಬೇಕು ಎಂದು ಅವರು ಹೇಳಿದ್ದಾರೆ.

ಚಲ್ಲಘಟ್ಟ RUB ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದಲ್ಲಿ ಕೆಂಗೇರಿ ಮತ್ತು ಹೆಜ್ಜಾಲ ನಿಲ್ದಾಣಗಳ ನಡುವೆ ನಡೆಯುತ್ತಿದ್ದು, ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ಮತ್ತು ತಡೆಗೋಡೆಗಳ ಸಹಿತ ನಿರ್ಮಾಣಗೊಳ್ಳಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com