ಲೋಕ ಸಮರ 2024: ಟೆಲಿಫೋನ್ ಪ್ರಚಾರ/ಸಮೀಕ್ಷೆ ಹಾವಳಿ; ಬೇಸತ್ತ ಜನ; ಎಚ್ಚರ ಎಂದ ಚುನಾವಣಾ ಆಯೋಗ

ಲೋಕಸಭಾ ಚುನಾವಣೆಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ಈ ನಡುವಲ್ಲೇ ಸಮೀಕ್ಷೆಗಳ ಫೋನ್ ಕರೆಗಳಿಗೆ ಜನರು ಬೇಸರ ಹೊರಹಾಕುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ಈ ನಡುವಲ್ಲೇ ಸಮೀಕ್ಷೆಗಳ ಫೋನ್ ಕರೆಗಳಿಗೆ ಜನರು ಬೇಸರ ಹೊರಹಾಕುತ್ತಿದ್ದಾರೆ.

ಫೋನ್ ಕರೆಗಳ ಕುರಿತು ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗ, ಟೆಲಿ ಆಟೋಮೆಟೆಡ್ ಫೋನ್ ಕರೆಗಳ ಬಗ್ಗೆ ಎಚ್ಚರದಿಂದಿರುವಂತೆ ಮತದಾರರಿಗೆ ಮನವಿ ಮಾಡಿಕೊಂಡಿದೆ.

ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ಟೆಲಿ ಆಟೋಮೆಟೆಡ್ ಫೋನ್ ಬರುತ್ತಿದ್ದು, ನೀವು ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದರೆ "1" ಒತ್ತಿರಿ, ಬಿಜೆಪಿಗೆ ಮತ ಹಾಕುತ್ತಿದ್ದರೆ 2 ಒತ್ತಿ ಎಂದು ಹೇಳಲಾಗುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾಗಿದ್ದು, ಇಂತಹ ಕರೆಗಳನ್ನು ಸ್ವೀಕರಿಸುವ ವೇಳೆ ಜನರು ಎಚ್ಚರ ವಹಿಸಬೇಕು. ಅಂತಹ ಕರೆಗಳನ್ನು ತೆಗೆದುಕೊಳ್ಳಬಾರದು, ತೆಗೆದುಕೊಡರೂ ಕರೆಯನ್ನು ಕಟ್ ಮಾಡಿ ಎಂದು ಸಲಹೆ ನೀಡಿದೆ.

ಇಂತಹ ಕರೆಗಳ ಬಗ್ಗೆ ಜನರಿಂದ ಮಾಹಿತಿ ಬಂದಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಲೋಕಸಭಾ ಚುನಾವಣೆ 2024: ರಾಜ್ಯದಲ್ಲಿ ಏಪ್ರಿಲ್ 24ರಿಂದ ಚುನಾವಣಾ ಪ್ರಚಾರ, ಚುನಾವಣೋತ್ತರ ಸಮೀಕ್ಷೆ ನಿಷೇಧ

ನೆಟ್‌ವರ್ಕ್ ಸೇವಾ ಪೂರೈಕೆದಾರರಿಂದ ನಾಗರಿಕರ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವು ನೆಟ್ ವರ್ಕ್ ಸೇವಾ ಪೂರೈಕೆದಾರರು ಹಣ ಪಡೆದು ಮಾಹಿತಿಗಳನ್ನು ಮಾರಾಟ ಮಾಡಿರುವುದಾಗಿಯೂ ತಿಳಿದುಬಂದಿದೆ. ಜನರು, ಸಂಸ್ಥೆಗಳು ಅಥವಾ ರಾಜಕೀಯ ಪಕ್ಷಗಳು ಅಭಿಪ್ರಾಯ ಸಂಗ್ರಹಣೆಯನ್ನು ಮಾಡಬಹುದು, ಆದರೆ ಹೆಸರು, ವಯಸ್ಸು, ಲಿಂಗ, ವೃತ್ತಿ, ಜಾತಿ, ಇತ್ಯಾದಿ ಸೇರಿದಂತೆ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದು ಅಪರಾಧವಾಗಿರುತ್ತದೆ. ಸಂಪರ್ಕ ಸಂಖ್ಯೆಗಳನ್ನು ಸಂಗ್ರಹಿಸುವುದು ಮತ್ತು ವಿತರಿಸುವುದು ಕೂಡ ಅಪರಾಧವಾಗಿದೆ.

ಜನರು ಇದರಲ್ಲಿ ಭಾಗವಹಿಸಬೇಡಿ, ಯಾವುದೇ ವಿವರಗಳನ್ನು ಹಂಚಿಕೊಳ್ಳಬೇಡಿ ಮತ್ತು ಸಮಸ್ಯೆಯನ್ನು ತಕ್ಷಣವೇ ಚುನಾವಣಾ ಅಧಿಕಾರಿಗಳಿಗೆ cVigil ಆ್ಯಪ್‌ನಲ್ಲಿ ಅಥವಾ ‘1950’ ಗೆ ವರದಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ವಿವರಗಳನ್ನು ಸಂಗ್ರಹಿಸಲಾಗುತ್ತಿದ್ದು, ದೂರು ದಾಖಲಿಸಿ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಟೆಲಿ ಆಟೋಮೆಟೆಡ್ ಕಾಲ್ ವೊಂದು ಕನ್ನಡದಲ್ಲಿ ನನಗೆ ಬಂದಿತ್ತು. ಕಾಂಗ್ರೆಸ್ ಗೆ ಮತ ಹಾಕಿದರೆ 1 ಅಥವಾ ಬಿಜೆಪಿಗೆ ಮತ ಹಾಕಿದರೆ 2 ಒತ್ತುವಂತೆ ಕೇಳಲಾಗಿತ್ತು. ನಂತರ ವಿವರಗಳನ್ನು ಕೇಳಲು ಹೋಗಲಿಲ್ಲ. ಕೋಪಬಂದು ಫೋನ್ ಕಟ್ ಮಾಡಿದ್ದೆ. ನಾನು ಯಾರಿಗೆ ಮತ ಹಾಕುತ್ತೇನೆಂಬುದನ್ನು ಯಾರೂ ಕೇಳುವಂತಿಲ್ಲ. ಆ ಕೇಳುವುದು ಕಾನೂನಿಗೆ ವಿರುದ್ಧ ಎಂದು ಬೆಂಗಳೂರು ಮೂಲದ ಗೇಮಿಂಗ್ ಅಪ್ಲಿಕೇಶನ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಒಬ್ಬರು ಹೇಳಿದ್ದಾರೆ.

ಸಂಗ್ರಹ ಚಿತ್ರ
CVoter survey: ಕಾಂಗ್ರೆಸ್‌ಗೆ ಆಘಾತ ನೀಡಿದ ಸಿವೋಟರ್ ಸಮೀಕ್ಷೆ; ಬಿಜೆಪಿ-ಜೆಡಿಎಸ್ ಮೈತ್ರಿಗೆ ಅತಿಹೆಚ್ಚು ಸ್ಥಾನ

ಫೋನ್ ಬಂದ ಬಳಿಕ ವಾದಿಸಲು ಶುರು ಮಾಡಿದ್ದೆ. ಆದರೆ, ಸ್ವಯಂಚಾಲಿತ ಕರೆಯಾಗಿದ್ದರಿಂದ ಮಾತನಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.

ಇದು ಅಭಿಪ್ರಾಯ ಸಂಗ್ರಹಣೆಯನ್ನು ನಡೆಸಬೇಕಾದ ವಿಧಾನವಲ್ಲ. ಒಬ್ಬ ವ್ಯಕ್ತಿ ಅಥವಾ ಏಜೆನ್ಸಿ ನನ್ನ ಸಂಪರ್ಕ ಸಂಖ್ಯೆಯನ್ನು ಹೊಂದಿದ್ದರೆ, ನನ್ನ ಹೆಸರು ಮತ್ತು ಇತರ ವೈಯಕ್ತಿಕ ವಿವರಗಳನ್ನೂ ಪಡೆದುಕೊಂಡಿದ್ದಾರೆಂದು ಅರ್ಥ. ಸಂಪರ್ಕ ಸಂಖ್ಯೆಗಳನ್ನು ಹಂಚಿಕೊಳ್ಳುವ ಕಂಪನಿಗಳು ಜನರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಗೌಪ್ಯತೆಗಿಂತ ಮುಖ್ಯವಾದದ್ದು ಬೇರೇನೂ ಇಲ್ಲ ಎಂದು ಬೆಂಗಳೂರಿನ ನೇಹಾ ಕೆ. ಎಂಬುವವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com