ವಿಂಟೇಜ್ ಕಾರು ಮೂಲಕ ಮತದಾನ ಜಾಗೃತಿ
ವಿಂಟೇಜ್ ಕಾರು ಮೂಲಕ ಮತದಾನ ಜಾಗೃತಿ

ವಿಂಟೇಜ್ ಕಾರ್, ಬೈಕ್ ರ್‍ಯಾಲಿ ಮೂಲಕ ಮತದಾನ ಜಾಗೃತಿ: ರಾಜ್ಯಪಾಲರಿಂದ ಚಾಲನೆ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ಮತದಾರರ ಜಾಗೃತಿ ಕಾರ್ ಹಾಗೂ ಬೈಕ್ ಗಳ ರ್‍ಯಾಲಿಗೆ ಚಾಲನೆ ನೀಡಿದರು.
Published on

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ಮತದಾರರ ಜಾಗೃತಿ ಕಾರ್ ಹಾಗೂ ಬೈಕ್ ಗಳ ರ್‍ಯಾಲಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ರಾಜ್ಯಪಾಲರು, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ನಮಗೆಲ್ಲರಿಗೂ ತಿಳಿದಿದೆ. ಜನರ ಸರ್ಕಾರ, ಜನರಿಂದ, ಜನರಿಗಾಗಿ ಎಂಬುದು ನಮ್ಮ ಪ್ರಜಾಪ್ರಭುತ್ವದ ವಿಶೇಷತೆ. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಮತದಾರರು ಮತ್ತು ಗಣ್ಯರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿದ್ದಾರೆ ಎಂದು ಹೇಳಿದರು.

ಮತದಾನ ಪ್ರಜಾಪ್ರಭುತ್ವದ ಶಕ್ತಿ ಮತ್ತು ಪ್ರಜಾಪ್ರಭುತ್ವದ ನಂಬಿಕೆಯನ್ನು ರಕ್ಷಿಸುತ್ತದೆ. ಮತದಾನವು ದೇಶವನ್ನು ಬಲಪಡಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. "ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ." ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಈ ಹಕ್ಕನ್ನು ಶೇ. 100 ರಷ್ಟನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಚುನಾವಣೆಯಲ್ಲಿ ಮತದಾನ ಮಾಡುವುದು ಎಂದರೆ ಗಣರಾಜ್ಯವನ್ನು ಬಲಪಡಿಸುವುದು. ನಾವು ವೋಟ್ ಹಾಕದಿದ್ದರೆ ಏನಾಗುತ್ತದೆ ಎಂಬ ಕಲ್ಪನೆ ಕೆಲವರಿಗೆ ಇದೆ. ವಾಸ್ತವವಾಗಿ, ಹಲವು ಬಾರಿ ಗೆಲುವು ಅಥವಾ ಸೋಲು ಕೇವಲ ಒಂದು ಮತದಿಂದ ನಿರ್ಧರಿಸಲ್ಪಟ್ಟಿದೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ಹಾಗಾಗಿ, ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಅವರು ಕರೆ ನೀಡಿದರು.

ಅಂಗವಿಕಲರು, ವೃದ್ಧರು ಮತ್ತು ಪ್ರತಿಯೊಬ್ಬ ಮತದಾರರು ಸುಲಭವಾಗಿ ಮತದಾನ ಮಾಡುವಂತೆ ಚುನಾವಣಾ ಆಯೋಗವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ, ಲೋಕಸಭೆ ಚುನಾವಣೆಗಳು ನಡೆಯುತ್ತಿವೆ. ಮೊದಲ ಹಂತದ ಮತದಾನ ನಡೆದಿದೆ. ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ, ಸಾಧ್ಯವಾದಷ್ಟು ಮತದಾನ ಮಾಡುವುದು ಅವಶ್ಯಕ. ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಮತದಾನ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಕೊಡುಗೆ ನೀಡುವಂತೆ ನಾನು ಎಲ್ಲ ಮತದಾರರನ್ನು ಕೋರುತ್ತೇನೆ. ಕರ್ನಾಟಕದ ಜವಾಬ್ದಾರಿಯುತ ನಾಗರಿಕರಾಗಿ ಮತದಾನ ಮಾಡುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಕಡೆಗೆ ನಮ್ಮ ಕರ್ತವ್ಯವನ್ನು ಮಾಡೋಣ ಎಂದು ಮನವಿ ಮಾಡಿದರು.

ವಿಂಟೇಜ್ ಕಾರು ಮೂಲಕ ಮತದಾನ ಜಾಗೃತಿ
ಮತದಾನ ಜಾಗೃತಿ ಅಭಿಯಾನ: ವಿಶೇಷ ಚೇತನರ ಬೈಕ್​ ಜಾಥಾಗೆ ರಜನೀಶ್ ಗೋಯಲ್ ಚಾಲನೆ

ವಿಂಟೇಜ್ ಕಾರ್ ಹಾಗೂ ಬೈಕ್ ಗಳ ರ್‍ಯಾಲಿ ಸಾಗಿದ ಹಾದಿ: ಈ ರ್‍ಯಾಲಿಯು ರಾಜಭವನದಿಂದ ಇನ್ಪಂಟ್ರಿ ರಸ್ತೆ, ಸಿಟಿಒ‌ ವೃತ್ತ, ಕ್ವೀನ್ಸ್ ವೃತ್ತ, ಅನಿಲ್ ಕುಂಬ್ಲೆ ವೃತ್ತ, ಕಾವೇರಿ ಎಂಪೋರಿಯಮ್, ಟ್ರಿನಿಟಿ ವೃತ್ತ, ಸಿದ್ದಲಿಂಗಯ್ಯ ವೃತ್ತ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣದ ಬಳಿ ಮುಕ್ತಾಯವಾಯಿತು. ಈ ವೇಳೆ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯ ಚುನಾವಣಾಧಿಕಾರಿಯಾದ ಮನೋಜ್ ಕುಮಾರ್ ಮೀನಾ, ಜಿಲ್ಲಾ ಚುನಾವಣಾಧಿಕಾರಿ, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com