ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ; 2023-2024ರಲ್ಲಿ BMRCL ಗೆ 130 ಕೋಟಿ ರೂ. ಲಾಭ

ಬೆಂಗಳೂರು ಮೆಟ್ರೊ ರೈಲು ನೆಟ್‌ವರ್ಕ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸತತ ಎರಡನೇ ಹಣಕಾಸು ವರ್ಷವೂ ತನ್ನ ಕಾರ್ಯಾಚರಣೆಯಿಂದ ಅಧಿಕ ಲಾಭ ಗಳಿಸಿದೆ. 2023-2024ರ ಆರ್ಥಿಕ ವರ್ಷದಲ್ಲಿ 129.3 ಕೋಟಿ ರೂ. ಲಾಭ ಗಳಿಸಿದೆ. ಇದು ಈವರೆಗಿನ ಅತ್ಯಧಿಕ ಲಾಭವಾಗಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನೆಟ್‌ವರ್ಕ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸತತ ಎರಡನೇ ಹಣಕಾಸು ವರ್ಷವೂ ತನ್ನ ಕಾರ್ಯಾಚರಣೆಯಿಂದ ಅಧಿಕ ಲಾಭ ಗಳಿಸಿದೆ. 2023-2024ರ ಆರ್ಥಿಕ ವರ್ಷದಲ್ಲಿ 129.3 ಕೋಟಿ ರೂ. ಲಾಭ ಗಳಿಸಿದೆ. ಇದು ಈವರೆಗಿನ ಅತ್ಯಧಿಕ ಲಾಭವಾಗಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ. ಈ ಅವಧಿಯಲ್ಲಿ ಮೆಟ್ರೋ ಈಗ 73.8 ಕಿಮೀಗೆ ವಿಸ್ತರಿಸಿದ್ದು, ಈ ಅವಧಿಯಲ್ಲಿ 23.28 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ.

ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 'ನಾವು ನಿರೀಕ್ಷಿಸಿದ್ದಕ್ಕೆ ಅನುಗುಣವಾಗಿ ಆದಾಯವಿದೆ. ಪ್ರಯಾಣ ದರದ ಮೂಲಕ ನಮ್ಮ ಆದಾಯವು 735.48 ಕೋಟಿ ರೂ.ಗಳಷ್ಟಿದ್ದರೆ, ನಮ್ಮ ವೆಚ್ಚವು 606.18 ಕೋಟಿ ರೂ.ಗಳಷ್ಟಿದೆ. ಇದರಿಂದಾಗಿ ಕಾರ್ಯಾಚರಣೆಗಳು ಆರ್ಥಿಕವಾಗಿ ಸಮರ್ಥನೀಯ ಮತ್ತು ಸಂಭಾವ್ಯ ಲಾಭದಾಯಕವಾಗಿದೆ ಎಂದಿದ್ದಾರೆ.

'ಯಾವುದೇ ಹೊಸ ಮಾರ್ಗದ ಸೇರ್ಪಡೆಯು ಪ್ರಯಾಣಿಕರ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ. ಅಕ್ಟೋಬರ್ 9, 2023 ರಂದು ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವಿನ ನಿರ್ಣಾಯಕ ಸಂಪರ್ಕ ಮತ್ತು ನೇರಳೆ ಮಾರ್ಗದ ಚಲ್ಲಘಟ್ಟಕ್ಕೆ ಸೇವೆಯ ವಿಸ್ತರಣೆಯು ಈ ಹೆಚ್ಚುವರಿ ಆದಾಯಕ್ಕೆ ಕಾರಣವಾಗಿದೆ' ಎಂದರು.

2022-2023ರ ಆರ್ಥಿಕ ವರ್ಷದಲ್ಲಿ 17.72 ಕೋಟಿ ಪ್ರಯಾಣಿಕರು ಸಂಚರಿಸಿದ್ದರು. ಕಾರ್ಯಾಚರಣೆಯ ವೆಚ್ಚ 108 ಕೋಟಿ ರೂ. ಆಗಿತ್ತು. ಆದರೆ, ಆ ವರ್ಷದಲ್ಲಿ ನಮ್ಮ ಆದಾಯ ಕೇವಲ 594.01 ಕೋಟಿ ರೂ.ನಷ್ಟಿತ್ತು. 2021-22ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ಅದ್ಭುತ ಸಾಧನೆಯಾದೆ. ಆಗ ನಮ್ಮ ಆದಾಯವು ಕೇವಲ 228.76 ಕೋಟಿ ರೂ. ಆಗಿದ್ದರೆ, ನಮ್ಮ ವೆಚ್ಚವು 345.6 ಕೋಟಿ ಆಗಿತ್ತು. ಇದರಿಂದ ನಮಗೆ 118 ಕೋಟಿ ರೂ. ನಷ್ಟ ಉಂಟಾಗಿತ್ತು. ಮೆಟ್ರೋ ಕಾರ್ಯಾಚರಣೆಯಲ್ಲಿ ಸ್ವಾವಲಂಬನೆಯ ಪ್ರವೃತ್ತಿಯನ್ನು ಸ್ಪಷ್ಟವಾಗಿ ಕಾರ್ಯರೂಪಕ್ಕೆ ತರಲಾಗಿದ್ದು, ಇದು BMRCL ಗೆ ಉತ್ತಮವಾಗಿದೆ ಎಂದು ಅವರು ಹೇಳಿದರು.

ನಮ್ಮ ಮೆಟ್ರೋ
ಮೆಟ್ರೋ 3ನೇ ಹಂತದ ಯೋಜನೆ: ಭೂಸ್ವಾಧೀನ ಪ್ರಕ್ರಿಯೆಗೆ BMRCL ಚಾಲನೆ

ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆಗಳು ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಎಸ್ ಶಂಕರ್ ಮಾತನಾಡಿ, 'ಹಣಕಾಸಿನ ಫಲಿತಾಂಶಗಳು ನಮಗೆ ಹೆಚ್ಚು ಭರವಸೆ ನೀಡಿದೆ. ನಾವು ನಿರೀಕ್ಷಿಸಿದಂತೆ ಸಾರ್ವಜನಿಕರು ಮೆಟ್ರೋ ಪ್ರಯಾಣದತ್ತ ಮುಖಮಾಡುತ್ತಿರುವುದನ್ನು ತೋರಿಸುತ್ತದೆ. ನಮ್ಮ ನಿಲ್ದಾಣಗಳಾದ್ಯಂತ ಫೀಡರ್ ಬಸ್ ಸೇವೆಗಳನ್ನು ಹೆಚ್ಚಿಸುವಲ್ಲಿ ಬಿಎಂಟಿಸಿ ನೀಡಿದ ಬೆಂಬಲವು ಇದಕ್ಕೆ ಕೊಡುಗೆ ನೀಡಿದೆ. ಈ ವರ್ಷದ ಡಿಸೆಂಬರ್‌ ವೇಳೆಗೆ, ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ಪ್ರಾರಂಭವಾದಾಗ, ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಮತ್ತು ನಮ್ಮ ಆದಾಯವೂ ಹೆಚ್ಚಾಗುತ್ತದೆ ಎಂದರು.

ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ಮಾತನಾಡಿ, ಈಗಷ್ಟೇ ಮುಕ್ತಾಯಗೊಂಡ ಆರ್ಥಿಕ ವರ್ಷದಲ್ಲಿ ದಿನಕ್ಕೆ ಸರಾಸರಿ ಪ್ರಯಾಣಿಕರ ಸಂಖ್ಯೆ 6.36 ಲಕ್ಷದಷ್ಟಿತ್ತು. ಕೆಆರ್ ಪುರ ಸಂಪರ್ಕಕ್ಕೂ ಮೊದಲು, ಬೈಯಪ್ಪನಹಳ್ಳಿ ಪ್ರಯಾಣಿಕರಿಗೆ ಪ್ರಮುಖ ಕೇಂದ್ರವಾಗಿತ್ತು. ಆದರೆ, ಕೆಆರ್ ಪುರಕ್ಕೆ ಹೊಸ ಸಂಪರ್ಕದಿಂದಾಗಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ (ಕಾಡುಗೋಡಿ) ರೈಲು ಹತ್ತುವ ಸರಾಸರಿ ಪ್ರಯಾಣಿಕರ ಸಂಖ್ಯೆ ಪ್ರತಿದಿನ 1.05 ಲಕ್ಷಕ್ಕೆ ಇಳಿದಿದೆ. ವೈಟ್‌ಫೀಲ್ಡ್ ಮತ್ತು ಕಾಡುಗೋಡಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಬೈಯಪ್ಪನಹಳ್ಳಿಯ ಅವಲಂಬನೆಯನ್ನು ಕಡಿಮೆ ಮಾಡಿದೆ ಎಂದರು.

ನಮ್ಮ ಮೆಟ್ರೋ
ಬೆಂಗಳೂರು: ನೇರಳೆ ಮಾರ್ಗದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಮುಖ, ಆದಾಯಕ್ಕೆ ಭಾರಿ ಹೊಡೆತ

ನಾಡಪ್ರಭು ಕೆಂಪೇಗೌಡ ಇಂಟರ್‌ಚೇಂಜ್ ನಿಲ್ದಾಣವು ಅಗ್ರ ನಿಲ್ದಾಣವಾಗಿದೆ ಮತ್ತು ಬೆನ್ನಿಗಾನಹಳ್ಳಿ ಈಗ ಎರಡನೇ ಅತ್ಯಂತ ಜನನಿಬಿಡ ನಿಲ್ದಾಣವಾಗಿದೆ. ಇಂದಿರಾ ನಗರ ಮತ್ತು ನಾಗಸಂದ್ರ ಜಂಟಿಯಾಗಿ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ ಎಂದು ಅವರು ಹೇಳಿದರು.

ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಮೆಟ್ರೋ ರೈಲಿನಲ್ಲಿ ಸಂಚರಿಸುವವರ ಸಂಖ್ಯೆ ದಿನಕ್ಕೆ 8 ಲಕ್ಷವಾಗಿದೆ. ಇದು ಈ ವಾರ ಎರಡು ಬಾರಿ ಸಂಭವಿಸಿದೆ. 'ಸಿಇಟಿ ಪರೀಕ್ಷೆಯ ಅಭ್ಯರ್ಥಿಗಳು ಮೆಟ್ರೋ ಸವಾರಿ ಮಾಡಲು ಆಯ್ಕೆ ಮಾಡಿಕೊಂಡಿದ್ದರಿಂದ ಗುರುವಾರ (ಏಪ್ರಿಲ್ 18) 7.96,577 ಮಂದಿ ಸಂಚರಿಸಿದ್ದಾರೆ ಎಂದು ಶಂಕರ್ ಹೇಳಿದರು. ಏಪ್ರಿಲ್ 15 ರಂದು, ಐಪಿಎಲ್ ಪಂದ್ಯ ಮತ್ತು ಸಮಯದ ವಿಸ್ತರಣೆಯಿಂದಾಗಿ ಪ್ರಯಾಣಿಕರ ಸಂಖ್ಯೆ 7,92,505 ಆಗಿತ್ತು. ಆಗಸ್ಟ್ 15, 2022 ರಂದು ಪ್ರಯಾಣಿಕರ ಸಂಖ್ಯೆ 8 ಲಕ್ಷವನ್ನು ಮೀರಿದೆ. ಕಾಂಗ್ರೆಸ್‌ನ ರ್ಯಾಲಿ ಮತ್ತು ಲಾಲ್ ಬಾಗ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನದಿಂದಾಗಿ ಆ ದಿನ ಪ್ರಯಾಣಿಕರ ಸಂಖ್ಯೆಯು 8,25,190 ರಷ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com