ಮಳೆ ನೀರು ಒಳಚರಂಡಿಗೆ ಸೇರದಂತೆ ಮುಂಜಾಗ್ರತೆ ವಹಿಸಿ: ಜಲಮಂಡಳಿ ಅಧ್ಯಕ್ಷ ಡಾ ರಾಮ್‌ ಪ್ರಸಾತ್‌ ಮನೋಹರ್‌ ಸೂಚನೆ

ಮಳೆಗಾಲದಲ್ಲಿ ಮಳೆ ನೀರು ಒಳಚರಂಡಿ ಗಳಿಗೆ ಸೇರ್ಪಡೆ ಆಗದಂತೆ ಅಗತ್ಯ ಮುಂಜಾಗ್ರತೆಯನ್ನು ವಹಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್
ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್

ಬೆಂಗಳೂರು: ಮಳೆಗಾಲದಲ್ಲಿ ಮಳೆ ನೀರು ಒಳಚರಂಡಿ ಗಳಿಗೆ ಸೇರ್ಪಡೆ ಆಗದಂತೆ ಅಗತ್ಯ ಮುಂಜಾಗ್ರತೆಯನ್ನು ವಹಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮಳೆ ನೀರು ಒಳಚರಂಡಿ ಗೆ ಸೇರ್ಪಡೆ ಆಗುವ ಪ್ರದೇಶಗಳನ್ನು ಗುರುತಿಸುವ ಕಾರ್ಯ ಮೊದಲು ಆಗಬೇಕು. ಆ ಪ್ರದೇಶಗಳಲ್ಲಿ ಮಳೆ ನೀರು ಒಳಚರಂಡಿ ಗೆ ಸೇರ್ಪಡೆ ಆಗುವ ಮೂಲಕ ತೊಂದರೆ ಅಗದೇ ಇರುವಂತೆ ಕೈಗೊಳ್ಳಬೇಕಾದ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ, ಕಾಮಗಾರಿಗಳನ್ನು ಕೈಗೊಳ್ಳಲು ಕ್ರೀಯಾ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.

ಮ್ಯಾನ್‌ ಹೋಲ್‌ ಮತ್ತು ಒಳಚರಂಡಿ ಮಾರ್ಗಗಳ ಡಿಸಿಲ್ಟಿಂಗ್‌: ಮ್ಯಾನ್‌ ಹೋಲ್‌ಗಳು ಮತ್ತು ಒಳಚರಂಡಿ ಮಾರ್ಗಗಳ ಪರಿಶೀಲನೆ ನಡೆಸಬೇಕು. ಯಾವ ಕಡೆಗಳಲ್ಲಿ ಡಿಸಿಲ್ಟಿಂಗ್‌ ಅಗತ್ಯವಿದೆಯೋ ಅಲ್ಲಿ ಡಿಸಿಲ್ಟಿಂಗ್‌ ಕಾಮಗಾರಿಗಳನ್ನು ಕೈಗೊಳ್ಳಬೇಕು. ಮಳೆ ನೀರನ್ನ ಸ್ಟಾರ್ಮ್‌ ವಾಟರ್‌ ಡ್ರೈನ್‌ ನಲ್ಲಿ ಹರಿಯಬಿಡಬೇಕು. ಆದರೆ ಕೆಲವರು ಅನಧಿಕೃತವಾಗಿ ಮಳೆ ನೀರನ್ನ ಒಳಚರಂಡಿ ಕೊಳವೆ ಮಾರ್ಗಗಳಿಗೆ ಹರಿಯಬಿಡುತ್ತಾರೆ. ಬೆಂಗಳೂರು ನಗರದಾದ್ಯಂತ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಬೇಕು. ಹಾಗೂ ಅನಧಿಕೃತವಾಗಿ ನೀರು ಹರಿಯಬಿಡುತ್ತಿರುವುದನ್ನ ತಡೆಗಟ್ಟುವ ಜೊತೆಯಲ್ಲೇ ಆಯಾ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಳೆನೀರು ಉಕ್ಕುವ ಮ್ಯಾನ್‌ಹೋಲ್‌ಗಳಲ್ಲಿ ಪ್ರೇಶರ್ ಲಾಕಿಂಗ್‌ ಸಿಸ್ಟಮ್‌ ಅಳವಡಿಸಿ: ಮಳೆಯ ಪ್ರಮಾಣ ಹೆಚ್ಚಾದ ಸಂಧರ್ಭದಲ್ಲಿ ಒತ್ತಡದಿಂದ ಕೆಲವು ಕಡೆಗಳಲ್ಲಿ ಮ್ಯಾನ್‌ ಹೋಲ್‌ ಕವರ್ ಗಳು ತೆರೆದುಕೊಳ್ಳುತ್ತವೆ. ಇದರಿಂದ ಪಾದಚಾರಿಗಳು ಹಾಗೂ ಚಲಿಸುತ್ತಿರುವ ವಾಹನಗಳಿಗೆ ಅನಾನುಕೂಲವಾಗುತ್ತದೆ. ಇದನ್ನ ತಡೆಯುವ ನಿಟ್ಟಿನಲ್ಲಿ ಒತ್ತಡ ಹೆಚ್ಚಾಗಬಹುದಾದ ಮ್ಯಾನ್‌ ಹೋಲ್‌ಗಳನ್ನು ಗುರುತಿಸಿ, ಅವುಗಳ ಬದಲಿಗೆ ಪ್ರೆಶರ್‌ ಮ್ಯಾನ್‌ ಹೋಲ್‌ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್
21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು ಪೂರೈಸಲು ಸಿದ್ಧ: BWSSB

ಮಳೆ ನೀರು ಹರಿದು ಹೋಗುವಂತೆ ಮಾಡಲು ಕೆಲವು ಕಡೆಗಳಲ್ಲಿ ಸಾರ್ವಜನಿಕರು ಮ್ಯಾನ್‌ಹೋಲ್‌ಗಳ ಕವರ್‌ಗಳನ್ನ ತಗೆದುಬಿಡುತ್ತಾರೆ. ಇದರಿಂದ ಮಳೆ ನೀರು ಒಳಚರಂಡಿ ಕೊಳವೆ ಮಾರ್ಗಕ್ಕೆ ಪ್ರವೇಶ ಪಡೆದು ಒಳಚರಂಡಿ ಮಾರ್ಗದ ಮೇಲೆ ಒತ್ತಡ ಹೆಚ್ಚಿಸುತ್ತದೆ. ಅಲ್ಲದೇ, ಮ್ಯಾನ್‌ಹೋಲ್‌ಗಳ ಕವರ್‌ ಗಳನ್ನು ತಗೆಯುವುದರಿಂದ ಅವುಗಳ ಮಾಹಿತಿ ಇಲ್ಲದೇ ಮ್ಯಾನ್‌ಹೋಲ್‌ಗಳಲ್ಲಿ ಪಾದಚಾರಿಗಳು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಳೆ ನೀರು ಆವರಿಸುವದರಿಂದ ಮ್ಯಾನ್‌ಹೋಲ್‌ಗಳು ಕಾಣದೇ ವಾಹನಗಳು ಸಿಲುಕುವ ಸಾಧ್ಯತೆ ಇರುತ್ತದೆ. ಹಾಗೆಯೇ, ಮನೆಗಳಲ್ಲಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆಯ ಮೂಲಕ ಸಂಗ್ರಹವಾಗುವ ನೀರನ್ನು ಇಂಗು ಗುಂಡಿಗಳ ಮೂಲಕ ಇಂಗುವ ವ್ಯವಸ್ಥೆ ಮಾಡಬೇಕು. ಇದನ್ನು ನೇರವಾಗಿ ಒಳಚರಂಡಿ ಕೊಳವೆ ಮಾರ್ಗಕ್ಕೆ ಬಿಡಬಾರದು. ಈ ರೀತಿ ಮಾಡುವುದರಿಂದ ಒಳಚರಂಡಿ ಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸಾರ್ವಜನಿಕರು ಈ ಎರಡೂ ಅಂಶಗಳ ಬಗ್ಗೆ ಗಮನ ಹರಿಸಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com