ಮಡಿಕೇರಿ: ನೀರು ಕುಡಿಯಲು ಬಂದು ಎಸ್ಟೇಟ್ ಕೆರೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ರಕ್ಷಣೆ

ನೀರು ಕುಡಿಯಲು ಬಂದು ಕಾಫಿ ಎಸ್ಟೇಟ್ ಒಳಗಿನ ಬೃಹತ್ ಖಾಸಗಿ ಕೆರೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ಹಿಂಡನ್ನು ರಕ್ಷಿಸಲಾಗಿದೆ.
ಕಾಡಾನೆಗಳ ರಕ್ಷಣೆ
ಕಾಡಾನೆಗಳ ರಕ್ಷಣೆ

ಮಡಿಕೇರಿ: ನೀರು ಕುಡಿಯಲು ಬಂದು ಕಾಫಿ ಎಸ್ಟೇಟ್ ಒಳಗಿನ ಬೃಹತ್ ಖಾಸಗಿ ಕೆರೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ಹಿಂಡನ್ನು ರಕ್ಷಿಸಲಾಗಿದೆ. ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ಕುಮಟೂರು ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಮತ್ತೊಂದು ಘಟನೆಯಲ್ಲಿ ಮಡಿಕೇರಿ-ಮೈಸೂರು ಹೆದ್ದಾರಿಗೆ ದಿಢೀರ್ ಕಾಡಾನೆಯೊಂದು ನುಗ್ಗಿದ ಪರಿಣಾಮ ಪ್ರಯಾಣಿಕರು ಕೆಲ ಕಾಲ ಭಯಭೀತರಾಗಿದ್ದರು.

ಮಂಗಳವಾರ ಮಧ್ಯರಾತ್ರಿ 12 ಆನೆಗಳ ಹಿಂಡು ಕಾಫಿ ಬೆಳೆಗಾರ ಬಾಚಂಗಡ ದೀಪಕ್ ಮಾಲೀಕತ್ವದ ಎಸ್ಟೇಟ್‌ಗೆ ನುಗ್ಗಿವೆ. ಬೆಳೆ ಹಾನಿ ಮಾಡಿದ ನಂತರ, ಹಿಂಡು ಎಸ್ಟೇಟ್ ಒಳಗೆ ಇರುವ ಬೃಹತ್ ಕೆರೆಗೆ ತೆರಳಿ ಬಾಯಾರಿಕೆ ನೀಗಿಸಿಕೊಂಡಿವ.

ಬುಧವಾರ ಬೆಳ್ಳಂಬೆಳಗ್ಗೆ, ಹಿಂಡಿನಲ್ಲಿದ್ದ ಕೆಲವು ದೊಡ್ಡ ಆನೆಗಳು ಸುಲಭವಾಗಿ ಕೆರೆಯಿಂದ ಹೊರ ಬಂದಿವೆ. ಆದರೆ, ಆನೆ ಮರಿ ಸೇರಿದಂತೆ ಹಿಂಡಿನ ನಾಲ್ಕು ಆನೆಗಳಿಗೆ ಕೆರೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ನಂತರ ಗ್ರಾಮಸ್ಥರು ಮತ್ತು ಎಸ್ಟೇಟ್ ಮಾಲೀಕರು ಕಾಡಾನೆಗಳ ಬಗ್ಗೆ ತಿತಿಮತಿ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕಾಡಾನೆಗಳ ರಕ್ಷಣೆ
ಕುಶಾಲನಗರ: EPT ಯಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ

ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕೆರೆಯ ಒಂದು ಬದಿಯಲ್ಲಿ ಮಾರ್ಗವನ್ನು ಅಗೆದು ಆನೆಗಳಿಗೆ ಹಾದಿ ಮಾಡಿಕೊಟ್ಟಿದ್ದಾರೆ. ಬಳಿಕ ಕೆರೆಯಿಂದ ಹೊರಗೆ ಬಂದ ಆನೆಗಳು ಸ್ವಲ್ಪ ದೂರದಲ್ಲಿ ಕಾಯುತ್ತಿದ್ದ ಇತರ ಆನೆಗಳನ ಹಿಂಡನ್ನು ಮತ್ತೆ ಸೇರಿಕೊಂಡವು.

ಮತ್ತೊಂದು ಘಟನೆಯಲ್ಲಿ ಮಡಿಕೇರಿ-ಮೈಸೂರು ಹೆದ್ದಾರಿಯಲ್ಲಿ ರಸ್ತೆ ಮಧ್ಯದಲ್ಲಿಯೇ ಆನೆಯೊಂದು ಕಂಡ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿಗೆ ಯತ್ನಿಸಿದ ಆನೆ ಸಮೀಪದ ಖಾಸಗಿ ಎಸ್ಟೇಟ್‌ನ ಗೇಟ್ ಅನ್ನು ಮುರಿದು ತೋಟಕ್ಕೆ ನುಗ್ಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com