ಬೆಂಗಳೂರಿನಲ್ಲಿ ಮತದಾನ ಹೆಚ್ಚಳಕ್ಕೆ ಕ್ರಮ: ಏ.26 ಅಪರಾಹ್ನ ನಂತರ ಸೇವೆ ಒದಗಿಸಲು ಸಾರಿಗೆ ನಿರ್ವಾಹಕರಿಗೆ ಮನವಿ

ಬಿಬಿಎಂಪಿ ಮುಖ್ಯ ಆಯುಕ್ತರೂ ಆಗಿರುವ ತುಷಾರ್ ಗಿರಿನಾಥ್ ಅವರು ಸೋಮವಾರ ಸಾರಿಗೆ ವಲಯದ ಮ್ಯಾಕ್ಸಿ ಕ್ಯಾಬ್, ಸ್ಟೇಜ್ ಕ್ಯಾರೇಜ್, ಕಾಂಟ್ರಾಕ್ಟ್ ಕ್ಯಾರೇಜ್ ನಿರ್ವಾಹಕರು ಮತ್ತು ಇತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಸಾರಿಗೆ ಅಧಿಕಾರಿಗಳು ಮತ್ತು ನಿರ್ವಾಹಕರೊಂದಿಗೆ ಸಭೆ ನಡೆಸಿದ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್
ಸಾರಿಗೆ ಅಧಿಕಾರಿಗಳು ಮತ್ತು ನಿರ್ವಾಹಕರೊಂದಿಗೆ ಸಭೆ ನಡೆಸಿದ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್

ಬೆಂಗಳೂರು: ಐಟಿ ರಾಜಧಾನಿ ಬೆಂಗಳೂರು ನಗರದ ಹಲವು ಮಂದಿ ಮತದಾನ ದಿನ ರಜೆ ಎಂದು ಹೊರಗೆ ಸುತ್ತಾಡಲು, ಪ್ರವಾಸಿ ತಾಣಕ್ಕೆ ಹೋಗುವುದುಂಟು. ಕರ್ನಾಟಕ ಲೋಕಸಭೆ ಚುನಾವಣೆ 2024ರ ಮೊದಲ ಹಂತದ ಮತದಾನ ದಿನದಂದು (ಏಪ್ರಿಲ್ 26) ಜನರು ನಗರದಿಂದ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು ಅಥವಾ ಅವರ ಸ್ವಂತ ಊರುಗಳಿಗೆ ಹೋಗುವುದನ್ನು ತಡೆದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಮಧ್ಯಾಹ್ಮ ಮೇಲೆಯೇ ಸಾರಿಗೆ ಸೌಲಭ್ಯವನ್ನು ಒದಗಿಸುವಂತೆ ಸಾರಿಗೆ ನಿರ್ವಾಹಕರಿಗೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರೂ ಆಗಿರುವ ತುಷಾರ್ ಗಿರಿನಾಥ್ ಅವರು ಸೋಮವಾರ ಸಾರಿಗೆ ವಲಯದ ಮ್ಯಾಕ್ಸಿ ಕ್ಯಾಬ್, ಸ್ಟೇಜ್ ಕ್ಯಾರೇಜ್, ಕಾಂಟ್ರಾಕ್ಟ್ ಕ್ಯಾರೇಜ್ ನಿರ್ವಾಹಕರು ಮತ್ತು ಇತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಬೆಂಗಳೂರು ನಗರದಲ್ಲಿ ಮತದಾನ ದಿನ ಶುಕ್ರವಾಗಿದೆ. ನಂತರ ಶನಿವಾರ, ಭಾನುವಾರ ವಾರಾಂತ್ಯ ಎಂದು ರಜೆ ಇರುವುದರಿಂದ ಶಾಲೆಗಳಿಗೆ ಮಕ್ಕಳಿಗೆ ರಜೆ ಸಹ ಇರುವುದರಿಂದ ಅನೇಕರು ಹೊರ ಊರಿಗೆ ಪ್ರವಾಸ ಹೋಗುವುದುಂಟು. ಬೆಂಗಳೂರು ನಗರದಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಸುಧಾರಿಸಲು, ನಾಗರಿಕರು ತಮ್ಮ ಹಕ್ಕು ಚಲಾಯಿಸಿದ ನಂತರವೇ ಹೊರಗೆ ಸುತ್ತಾಡಲು ಅಥವಾ ಅನಿವಾರ್ಯ ಕಾರಣಗಳಿಗೆ ಹೊರಗೆ ಹೋಗುವಂತೆ ಮಾಡಲು ಸಾರಿಗೆ ನಿರ್ವಾಹಕರನ್ನು ಅಪರಾಹ್ನ ನಂತರವೇ ಸೇವೆ ಒದಗಿಸುವಂತೆ ಒತ್ತಾಯಿಸಲಾಗಿದೆ ಎಂದು ಸಾರಿಗೆ ಆಯುಕ್ತ ಯೋಗೇಶ್ ಎ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರಿಗೆ ನಿರ್ವಾಹಕರು ಹಾಗೂ ಸಾರಿಗೆ ಸಂಸ್ಥೆಗಳ ಪ್ರತಿನಿಧಿಗಳು ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಯೋಗೇಶ್ ತಿಳಿಸಿದರು. ಏಪ್ರಿಲ್ 26 ರಂದು ಮಧ್ಯಾಹ್ನದ ನಂತರ ಮಾತ್ರ ಸೇವೆಗಳು ಲಭ್ಯವಿರುತ್ತವೆ ಎಂದು ಅವರು ತಮ್ಮ ಪ್ರಯಾಣಿಕರಿಗೆ ತಿಳಿಸಲು ಸಾರಿಗೆ ನಿರ್ವಾಹಕರನ್ನು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com