Loksabha Election 2024: ಕರ್ನಾಟಕದಲ್ಲಿ ದಾಖಲೆಯ ಶೇ.69.56ರಷ್ಟು ಮತದಾನ, ಚುನಾವಣಾ ಆಯೋಗದ ಪರಿಷ್ಕೃತ ಮಾಹಿತಿ!

ಲೋಕಸಭೆ ಚುನಾವಣೆಯ ನಿಮಿತ್ತ ಕರ್ನಾಟಕದಲ್ಲಿ ನಡೆದ ಮತದಾನ ಅಂತಿಮ ಮಾಹಿತಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಒಟ್ಟಾರೆ ಶೇ.69.56ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದೆ.
Loksabha Election 2024: ಕರ್ನಾಟಕದಲ್ಲಿ ದಾಖಲೆಯ ಶೇ.69.56ರಷ್ಟು ಮತದಾನ, ಚುನಾವಣಾ ಆಯೋಗದ ಪರಿಷ್ಕೃತ ಮಾಹಿತಿ!

ಬೆಂಗಳೂರು: ಲೋಕಸಭೆ ಚುನಾವಣೆಯ ನಿಮಿತ್ತ ಕರ್ನಾಟಕದಲ್ಲಿ ನಡೆದ ಮತದಾನ ಅಂತಿಮ ಮಾಹಿತಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಒಟ್ಟಾರೆ ಶೇ.69.56ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದೆ.

ನಿನ್ನೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಕೆಲ ಕ್ಷೇತ್ರಗಳಲ್ಲಿ ತಾಂತ್ರಿಕ ದೋಷ ಮತ್ತು ಮತದಾನ ಬಹಿಷ್ಕಾರದಂತಹ ಘಟನೆಗಳ ನಡುವೆ ಅಧಿಕಾರಿಗಳು ಸಂಧಾನ ಮಾಡಿ ಮತದಾನದ ಅವಧಿ ಮುಕ್ತಾಯದ ಬಳಿಕ ಮತದಾನ ಮಾಡಿಸುವಲ್ಲಿ ಸಫಲರಾಗಿದ್ದರು.

ಹಲವು ಮತಗಟ್ಟೆಗಳಲ್ಲಿ ಸಂಜೆ 7 ಗಂಟೆಯವರೆಗೂ ಮತದಾನ ನಡೆದಿತ್ತು. ಪರಿಣಾಮ ಬಹುತೇಕ ಎಲ್ಲ ಮತಗಟ್ಟೆಗಳಲ್ಲಿಯೂ ಮತದಾನ ನಡೆದಿತ್ತು. ಇದೀಗ ಚುನಾವಣಾ ಆಯೋಗ ಈಗ ಮತದಾನದ ಪ್ರಮಾಣದ ಮಾಹಿತಿ ಬಿಡುಗಡೆ ಮಾಡಿದೆ.

Loksabha Election 2024: ಕರ್ನಾಟಕದಲ್ಲಿ ದಾಖಲೆಯ ಶೇ.69.56ರಷ್ಟು ಮತದಾನ, ಚುನಾವಣಾ ಆಯೋಗದ ಪರಿಷ್ಕೃತ ಮಾಹಿತಿ!
Loksabha Election 2024: ಕೊನೆಗೂ ಸಂಧಾನ, Voting ಬಹಿಷ್ಕರಿಸಿದ್ದ ಗ್ರಾಮಸ್ಥರಿಂದ ಸಂಜೆ ಮತದಾನ!

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪರಿಷ್ಕೃತ ಮಾಹಿತಿಯಲ್ಲಿ ನಿನ್ನೆ ರಾಜ್ಯಾದ್ಯಂತ ಒಟ್ಟಾರೆ ಶೇ.69.56ರಷ್ಟು ಮತದಾನವಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಗರಿಷ್ಠ ಅಂದರೆ ಶೇ.81.67ರಷ್ಟು ಮತದಾನವಾಗಿದ್ದು, ಬೆಂಗಳೂರು ದಕ್ಷಿಣದಲ್ಲಿ ಕನಿಷ್ಠ ಅಂದರೆ ಶೇ.53.17ರಷ್ಟು ಮತದಾನವಾಗಿದೆ ಎಂದು ಚುನವಾವಣಾ ಆಯೋಗ ಮಾಹಿತಿ ನೀಡಿದೆ.

ರಾಜ್ಯದ ಒಟ್ಟು 14 ಕ್ಷೇತ್ರಗಳಲ್ಲಿ ಶೇಕಡಾ 69.56ರಷ್ಟು ಮತದಾನವಾಗಿದ್ದು, ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇಕಡಾ 77.15ರಷ್ಟು ಮತದಾನ

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 77.68ರಷ್ಟು ಮತದಾನ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 77.56ರಷ್ಟು ಮತದಾನ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 73.30ರಷ್ಟು ಮತದಾನ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 78.05ರಷ್ಟು ಮತದಾನ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ. 81.67ರಷ್ಟು ಮತದಾನ

ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇಕಡಾ 70.62ರಷ್ಟು ಮತದಾನ

ಚಾಮರಾಜನಗರ ಕ್ಷೇತ್ರದಲ್ಲಿ ಶೇಕಡಾ 76.81ರಷ್ಟು ಮತದಾನ

Loksabha Election 2024: ಕರ್ನಾಟಕದಲ್ಲಿ ದಾಖಲೆಯ ಶೇ.69.56ರಷ್ಟು ಮತದಾನ, ಚುನಾವಣಾ ಆಯೋಗದ ಪರಿಷ್ಕೃತ ಮಾಹಿತಿ!
Loksabha Election 2024: ರಾಜ್ಯದಲ್ಲಿ ಶೇ.69.23 ರಷ್ಟು ಮತದಾನ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇಕಡಾ 68.30ರಷ್ಟು ಮತದಾನ

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇ. 54.45ರಷ್ಟು ಮತದಾನ

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇ. 54.06ರಷ್ಟು ಮತದಾನ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 53.17ರಷ್ಟು ಮತದಾನ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 77.00ರಷ್ಟು ಮತದಾನ

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 78.27ರಷ್ಟು ಮತದಾನ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com