Loksabha Election 2024: ಗುಂಪು ಘರ್ಷಣೆಯಾಗಿದ್ದ ಹನೂರು ಮತಗಟ್ಟೆಯಲ್ಲಿ ಮರುಮತದಾನ: Election Commission

ಲೋಕಸಭಾ ಚುನಾವಣೆಯ ಮತದಾನದ ವೇಳೆ ಗುಂಪುಘರ್ಷಣೆಯಾಗಿ ಮತದಾನ ಸ್ಥಗಿತವಾಗಿದ್ದ ಚಾಮರಾಜನಗರದ ಹನೂರು ತಾಲೂಕಿನ ಒಂದು ಮತಗಟ್ಟೆಯಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಗಲಾಟೆ ವೇಳೆ ಹನೂರು ಮತಗಟ್ಟೆ ಧ್ವಂಸ
ಗಲಾಟೆ ವೇಳೆ ಹನೂರು ಮತಗಟ್ಟೆ ಧ್ವಂಸ

ಚಾಮರಾಜನಗರ: ಲೋಕಸಭಾ ಚುನಾವಣೆಯ ಮತದಾನದ ವೇಳೆ ಗುಂಪುಘರ್ಷಣೆಯಾಗಿ ಮತದಾನ ಸ್ಥಗಿತವಾಗಿದ್ದ ಚಾಮರಾಜನಗರದ ಹನೂರು ತಾಲೂಕಿನ ಒಂದು ಮತಗಟ್ಟೆಯಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಲೋಕಸಭಾ ಚುನಾವಣೆ ಮತದಾನಕ್ಕೆ ಜನರಿಂದ ಮತದಾನ ಬಹಿಷ್ಕಾರಕ್ಕೆ ಒಳಗಾಗಿದ್ದ ಹನೂರು (Hanur) ತಾಲೂಕಿನ ಒಂದು ಮತಗಟ್ಟೆಗೆ ಏಪ್ರಿಲ್ 29 ರಂದು ಅಂದರೆ ಸೋಮವಾರ ಮರು ಮತದಾನ ನಡೆಯಲಿದೆ. ಮತಗಟ್ಟೆ ಸಂಖ್ಯೆ 146 ಕ್ಕೆ ಸೋಮವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೂ ಮರು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಶುಕ್ರವಾರ ಸ್ಥಳೀಯ ಜನರ ಗಲಾಟೆಯಿಂದಾಗಿ ಮತದಾನಕ್ಕೆ ಅಡ್ಡಿಯಾಗಿತ್ತು.

ಗಲಾಟೆ ವೇಳೆ ಹನೂರು ಮತಗಟ್ಟೆ ಧ್ವಂಸ
ಚಾಮರಾಜನಗರ: ಮತದಾನದ ವೇಳೆ ಗುಂಪು ಘರ್ಷಣೆ: ಮನವೊಲಿಸಲು ಯತ್ನಿಸಿದ ಅಧಿಕಾರಿಗಳ ಮೇಲೂ ಗ್ರಾಮಸ್ಥರ ದಾಳಿ, ಲಾಠಿ ಚಾರ್ಜ್!

ಏನಾಗಿತ್ತು?

ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸೌಲಭ್ಯ ಇಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಮತದಾನ ಬಹಿಷ್ಕಾರ ಅಥವಾ ಮತದಾನ ಮಾಡಬೇಕೇ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆ ಬಳಿಕ ಹಿಂಸಾಚಾರಕ್ಕೆ ತಿರುಗಿದ್ದು, ಗ್ರಾಮಸ್ಥರಮನವೊಲಿಸಲು ತೆರಳಿದ್ದ ಅಧಿಕಾರಿಗಳ ಮೇಲೆಯೇ ಜನ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿದ್ದರು.

ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸೌಲಭ್ಯ ಇಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಈ ವೇಳೆ ಅಧಿಕಾರಿಗಳು ಕೆಲವರ ಮನವೊಲಿಸಿ ಮತದಾನಕ್ಕೆ ಕರೆತಂದದ್ದರು. ಈ ವೇಳೆ ಮತ ಕೇಂದ್ರದ ಬಳಿ ಬಂದ ಗ್ರಾಮದ ಒಂದು ಗುಂಪು, ಇಡೀ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದೇವೆ ಎಂದು ಗಲಾಟೆ ಆರಂಭಿಸಿದೆ. ಗುಂಪು ಮತಗಟ್ಟೆಯನ್ನು ಸುತ್ತುವರಿದಿದ್ದು, ಮೂಲಸೌಕರ್ಯ ಕಲ್ಪಿಸುವವರೆಗೆ ಮತದಾನ ಮಾಡಬೇಡಿ ಆಗ್ರಹಿಸಿದ್ದಾರೆ.

ಬಳಿಕ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಬಳಿಕ ಪೊಲೀಸರು ಜನರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಮತಗಟ್ಟೆ ಮೇಲೆ ದಾಳಿ ಮಾಡಿದ್ದು, ಮೇಜು, ಕುರ್ಚಿ, ಇವಿಎಂ ಧ್ವಂಸಮಾಡಿದ್ದರು. ಇದೀಗ ಇದೇ ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com