ತಾಯಿಯಿಂದ ಬೇರ್ಪಟ್ಟಿದ್ದ ಹುಲಿ ಮರಿಯ ರಕ್ಷಣೆ!

ತಾಯಿಯಿಂದ ಬೇರ್ಪಟ್ಟಿದ್ದ ಆರು ತಿಂಗಳ ಹುಲಿ ಮರಿಯನ್ನು ಇತ್ತೀಚೆಗೆ ಪ್ರದಾನಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ.
ಹುಲಿ ಮರಿ
ಹುಲಿ ಮರಿ

ಪ್ರದಾನಿ (ಉತ್ತರ ಕನ್ನಡ): ತಾಯಿಯಿಂದ ಬೇರ್ಪಟ್ಟಿದ್ದ ಆರು ತಿಂಗಳ ಹುಲಿ ಮರಿಯನ್ನು ಇತ್ತೀಚೆಗೆ ಪ್ರದಾನಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ.

ತಾಯಿಯಿಂದ ಬೇರ್ಪಟ್ಟು ತಬ್ಬಲಿಯಾದ ಹುಲಿ ಮರಿಯೊಂದು ಶುಕ್ರವಾರ ರಾತ್ರಿ ಜನವಸತಿ ಪ್ರದೇಶದಲ್ಲಿ ಸಿಕ್ಕಿದ್ದು, ರಕ್ಷಣೆಗೆ ಅರಣ್ಯ ಇಲಾಖೆ ವಿವಿಧ ರೀತಿಯ ಪ್ರಯತ್ನ ನಡೆಸಿದೆ.

ಪ್ರಧಾನಿ ಗ್ರಾಮದಲ್ಲಿ ಜನ ವಾಸವಿರದ ಮನೆಯೊಂದರ ಹಿಂದೆ ಶುಕ್ರವಾರ ಹುಲಿ ಮರಿ ಕಂಡುಬಂದಿದೆ. ರಾತ್ರಿ ಅದನ್ನು ಹಳಿಯಾಳ ವಿಭಾಗದ ವಿರ್ನೋಲಿ ವಲಯದ ಅಧಿಕಾರಿಗಳು ಅದನ್ನು ಬೋನ್‌ನಲ್ಲಿ ಹಾಕಿ ರಕ್ಷಿಸಿ ಕರೆದೊಯ್ದು ಆರೈಕೆ ಮಾಡುತ್ತಿದ್ದಾರೆ. ಮರಿಗೆ ಸುಮಾರು 4 ರಿಂದ 5 ತಿಂಗಳ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಏಳೆಂಟು ದಿನಗಳಿಂದ ತಾಯಿಯಿಂದ ಬೇರ್ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಅಮ್ಮನ ಹಾಲಿಲ್ಲದೇ ಹುಲಿಯ ಹೊಟ್ಟೆ ಸಣ್ಣದಾಗಿದ್ದು, ಗಾಬರಿಗೊಂಡ ಸ್ಥಿತಿಯಲ್ಲಿ ಮರಿಯಿದೆ. ತಾಯಿ ಹುಲಿ ಮೃತಪಟ್ಟು ಅಥವಾ ಬರ‍್ಯಾವುದೋ ಕಾರಣಕ್ಕೆ ಅದರಿಂದ ದೂರವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹುಲಿ ಮರಿ
ಹುಲಿ ದಾಳಿಗೆ ಆನೆ ಮರಿ ಸಾವು: ತಾಯಾನೆ ರೋಧನೆ, ಟ್ರಾಫಿಕ್ ಜಾಮ್

ವನ್ಯಜೀವಿ ಕಾರ್ಯಕರ್ತ ರಾಹುಲ್ ಬಾವಾಜಿ ಮಾತನಾಡಿ, ಗ್ರಾಮದಲ್ಲಿ ನಡೆದು ಹೋಗುತ್ತಿದ್ದಾಗ ಗ್ರಾಮದ ದೊಡ್ಡ ಗುಂಪೊಂದು ನಿಂತಿರುವುದನ್ನು ನೋಡಿದೆ. ಈ ವೇಳೆ ವಿಚಾರಿಸಿದಾಗ ಕಳೆದ ಮೂರು ದಿನಗಳಿಂದ ಹುಲಿ ಮರಿಯೊಂದು ಗ್ರಾಮದಲ್ಲಿ ಸಂಚರಿಸುತ್ತಿರುವುದಾಗಿ ತಿಳಿಸಿದರು. ಬಳಿಕ ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೆವು. ಹುಲಿ ಮರಿ ಯಾರೂ ವಾಸವಿರದ ಮನೆಯಲ್ಲಿರುವುದು ಕಂಡು ಬಂದಿತ್ತು ಎಂದು ಹೇಳಿದ್ದಾರೆ.

ಹುಲಿ ಬಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ್ದು, ಈ ವೇಳೆ ಕಾರ್ಯಾಚರಣೆಗೆ ತೊಡಕುಗಳು ದುರಾಗಿದೆ. ಬಳಿಕ ಇರಣ್ಯ ಇಲಾಖೆ ಸಿಬ್ಬಂದಿ ಹಾಗೂ ವನ್ಯಜೀವಿ ಕಾರ್ಯಕರ್ತ ರಾಹುಲ್ ಹಾಗೂ ಇತರರು ಜನರನ್ನು ಸ್ಥಳದಿಂದ ಹೋಗುವಂತೆ ಮಾಡಲುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅಧಿಕಾರಿಗಳು ಹುಲಿಮರಿಯನ್ನು ರಕ್ಷಣೆ ಮಾಡಿದ್ದಾರೆ. ಹುಲಿ ಮರಿ ಸೆರೆಗೆ ಬಲೆ ಬಳಸಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹುಲಿ ಮರಿ ಸಂಪೂರ್ಣವಾಗಿ ದುರ್ಬಲವಾಗಿತ್ತು, ಬಹುಶಃ ಆಹಾರವಿಲ್ಲದೆ ದುರ್ಬಲವಾಗಿರಬಹುದು ಎಂದು ರಾಹುಲ್ ಬಾವಾಜಿ ಮಾಹಿತಿ ನೀಡಿದ್ದಾರೆ.

ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಮಾತನಾಡಿ, ದಾಂಡೇಲಿಯಲ್ಲಿ ಹುಲಿ ಮರಿಯನ್ನು ಬಿಡಲಾಗಿದೆ. ತಾಯಿಯೊಂದಿಗೆ ಮರಳಿ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ತಾಯಿಯನ್ನು ಪತ್ತೆ ಸಾಧ್ಯವಾಗಿದೆ. ಭಾನುವಾರ ರಾತ್ರಿ ಮತ್ತೆ ತಾಯಿಯೊಂದಿಗೆ ಸೇರಿಸಲು ಪ್ರಯತ್ನಿಸುತ್ತೇವೆ ಮತ್ತು ಸ್ವಲ್ಪ ಸಮಯದವರೆಗೆ ನೋಡಿ, ನಮ್ಮ ಪ್ರಯತ್ನಗಳು ವಿಫಲವಾದರೆ ಮರಿಯನ್ನು ಮೃಗಾಲಯಕ್ಕೆ ಸ್ಥಳಾಂತರಿಸುತ್ತೇವೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com