ಮೈಸೂರು, ಕಲಬುರಗಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇ.30 ರಷ್ಟು ಕುಸಿತ!

ದೇಶಾದ್ಯಂತ ಇರುವ ವಿಮಾನ ನಿಲ್ದಾಣಗಳು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ, 2023-24 ರ ಸಾಲಿನಲ್ಲಿ ಶೇ.15 ರಷ್ಟು ಬೆಳವಣಿಗೆ ಸಾಧಿಸಿವೆ.
ವಿಮಾನ ನಿಲ್ದಾಣ
ವಿಮಾನ ನಿಲ್ದಾಣ online desk

ಬೆಂಗಳೂರು: ದೇಶಾದ್ಯಂತ ಇರುವ ವಿಮಾನ ನಿಲ್ದಾಣಗಳು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ, 2023-24 ರ ಸಾಲಿನಲ್ಲಿ ಶೇ.15 ರಷ್ಟು ಬೆಳವಣಿಗೆ ಸಾಧಿಸಿವೆ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ವಿಭಾಗದಲ್ಲಿ ಶೇ.22.3 ರಷ್ಟು ಬೆಳವಣಿಗೆಯಾಗಿದ್ದು, ದೇಶೀಯ ವಿಮಾನ ಪ್ರಯಾಣ ವಿಭಾಗದಲ್ಲಿ ಶೇ.12.5 ರಷ್ಟು ಬೆಳವಣಿಗೆ ದಾಖಲಾಗಿದೆ.

ಕರ್ನಾಟಕದಾದ್ಯಂತ ಇರುವ ವಿಮಾನ ನಿಲ್ದಾಣಗಳು ಅತ್ಯುತ್ತಮವಾದ ಬೆಳವಣಿಗೆಯನ್ನು ದಾಖಲಿಸಿವೆ. ಕೆಲವು ಮಾರ್ಗಗಳಿಗೆ ವಿಮಾನಗಳು ಹಾಗೂ ಕೆಲವು ವಿಮಾನ ಸಂಸ್ಥೆಗಳ ವಿಮಾನಗಳು ಸ್ಥಗಿತಗೊಂಡಿದ್ದರಿಂದ 9 ವಿಮಾನ ನಿಲ್ದಾಣಗಳ ಪೈಕಿ 2 ವಿಮಾನ ನಿಲ್ದಾಣಗಳ ಮೇಲೆ ಪರಿಣಾಮ ಬೀರಿದೆ.

ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ವೈಮಾನಿಕ ಟ್ರಾಫಿಕ್ ವರದಿ ಬಿಡುಗಡೆ ಮಾಡಿದ್ದು, ಮಾರ್ಚ್ 2024 ರ ಹಣಕಾಸು ವರ್ಷದಲ್ಲಿ ವಿಮಾನ ನಿಲ್ದಾಣಗಳ ಕಾರ್ಯಕ್ಷಮತೆಯನ್ನು ವಿವರಿಸುತ್ತದೆ.

ಏಪ್ರಿಲ್ 2022-ಮಾರ್ಚ್ 2023 ರಿಂದ 32,72,79,136 ಕ್ಕೆ ಹೋಲಿಸಿದರೆ ಏಪ್ರಿಲ್ 2023-2024 ರಿಂದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಒಟ್ಟು 37,64,26,164 ಪ್ರಯಾಣಿಕರನ್ನು ದಾಖಲಿಸಲಾಗಿದೆ.

ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭದ್ರತೆ ಉಲ್ಲಂಘಿಸಿದ ಯೂಟ್ಯೂಬರ್ ಬಂಧನ

ಕಳೆದ ವರ್ಷ ವಿಧಾನಸಭಾ ಚುನಾವಣೆ ಹಾಗೂ ಈ ವರ್ಷದ ಲೋಕಸಭಾ ಚುನಾವಣೆ ಪ್ರಚಾರಗಳಿದ್ದ ಕಾರಣ ಕೇಂದ್ರ ಹಾಗೂ ರಾಜಕೀಯ ನಾಯಕರು ತೀವ್ರವಾದ ಪ್ರಚಾರದಲ್ಲಿ ತೊಡಗಿದ್ದು, ತತ್ಪರಿಣಾಮವಾಗಿ ಹೆಚ್ಎಎಲ್ ವಿಮಾನ ನಿಲ್ದಾಣ ಹಾಗೂ ಬೀದರ್ ವಿಮಾನ ನಿಲ್ದಾಣಗಳು ಶೇಕಡಾವಾರಿನಲ್ಲಿ ಗರಿಷ್ಠ ಪ್ರಮಾಣದ ಬೆಳವಣಿಗೆ ದಾಖಲಿಸಿವೆ.

ಹೆಚ್ಎಎಲ್ ನಿಲ್ದಾಣದಿಂದ ಆರ್ಥಿಕ ವರ್ಷದ ಕೊನೆಯ ಭಾಗ 2024 ರ ಮಾರ್ಚ್ ವೇಳೆಗೆ 17,950 ಪ್ರಯಾಣಿಕರು ಸಂಚರಿಸಿದ್ದಾರೆ, ಕಳೆದ ವರ್ಷ ಈ ಸಂಖ್ಯೆ 14,885 ರಷ್ಟಿತ್ತು. ಹೆಚ್ಎಎಲ್ ವಿಮಾನ ನಿಲ್ದಾಣ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.'20.6 ರಷ್ಟು ಏರಿಕೆ ಕಂಡಿದೆ.

ಭಾರತೀಯ ವಾಯುಪಡೆಯ ಒಡೆತನದ ಬೀದರ್ ವಿಮಾನ ನಿಲ್ದಾಣದಿಂದ ಕಳೆದ ವರ್ಷ 10,140 ಮಂದಿ ಪ್ರಯಾಣಿಸಿದ್ದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 16,507 ಮಂದಿ ಪ್ರಯಾಣಿಸಿದ್ದಾರೆ. ಈ ಮೂಲಕ 62.8% ಬೆಳವಣಿಗೆಯನ್ನು ದಾಖಲಿಸಿದೆ. ಆದಾಗ್ಯೂ, ಬೀದರ್ ಮತ್ತು ಬೆಂಗಳೂರು ನಡುವೆ ಒಂದು ಮಾರ್ಗವನ್ನು ನಿರ್ವಹಿಸುವ ಏಕೈಕ ವಿಮಾನಯಾನ ಸಂಸ್ಥೆ (ಸ್ಟಾರ್ ಏರ್) (ಪ್ರಾದೇಶಿಕ ಸಂಪರ್ಕ ಯೋಜನೆಯ UDAAN ಅಡಿಯಲ್ಲಿ) 2024 ರಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ವಿಮಾನ ನಿಲ್ದಾಣ
ರಾಜ್ಯದಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆ ಹೆಚ್ಚಳ; ಶೇ.8.1 ರಷ್ಟು ಏರಿಕೆ!

ಮೈಸೂರು ಮತ್ತು ಕಲಬುರಗಿ ವಿಮಾನ ನಿಲ್ದಾಣಗಳು ಇದೀಗ ಮುಕ್ತಾಯಗೊಂಡ ಆರ್ಥಿಕ ವರ್ಷದಲ್ಲಿ 30% ಕ್ಕಿಂತ ಹೆಚ್ಚು ಕುಸಿತವನ್ನು ದಾಖಲಿಸುವ ಮೂಲಕ ಭಾರಿ ಹೊಡೆತವನ್ನು ಎದುರಿಸಿವೆ. ಮೈಸೂರು ಈ ಹಿಂದೆ 1,88,296 ಕ್ಕೆ ಹೋಲಿಸಿದರೆ ಕೇವಲ 1,27,994 ಪ್ರಯಾಣಿಕರನ್ನು ಹೊಂದಿದ್ದು, 32% ಇಳಿಕೆ ಕಂಡಿದೆ. ಅಲಯನ್ಸ್ ಏರ್ ಮೈಸೂರಿನಿಂದ ತನ್ನ ಗೋವಾ ಮತ್ತು ಹೈದರಾಬಾದ್ ಕಾರ್ಯಾಚರಣೆಗಳನ್ನು ನಿಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com