ಬೆಂಗಳೂರು: ಚಾಕುವಿನಿಂದ ಪರಸ್ಪರ ಇರಿದುಕೊಂಡ ಅಮ್ಮ-ಮಗಳು; ತಾಯಿಗೆ ಚಿಕಿತ್ಸೆ, ಪುತ್ರಿ ಸಾವು!

ತಾಯಿ ಮಗಳು ಜಗಳವಾಡಿಕೊಂಡು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದು, ಮಗಳು ಮೃತಪಟ್ಟು ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಾಯಿ ಮಗಳು ಜಗಳವಾಡಿಕೊಂಡು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದು, ಮಗಳು ಮೃತಪಟ್ಟು ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

19 ವರ್ಷದ ಪಿಯುಸಿ ವಿದ್ಯಾರ್ಥಿನಿ ಸಾಹಿತಿ ಮೃತಪಟ್ಟ ಯುವತಿ. ಶಾಸ್ತ್ರಿನಗರದಲ್ಲಿ ಸಾಹಿತಿ ಮತ್ತು ಅವರ ತಾಯಿ ವಾಸವಾಗಿದ್ದರು. ಕೆಲವು ವರ್ಷಗಳ ಹಿಂದೆ ಅವರ ತಂದೆ ಮೃತಪಟ್ಟಿದ್ದರು. ತಾಯಿ ಮತ್ತು ಮಗಳು ಪದೇ ಪದೇ ಜಗಳವಾಡುತ್ತಿದ್ದರು.

ಎಂದಿನಂತೆ ಸೋಮವಾರವೂ ಇಬ್ಬರ ನಡುವೆ ಜಗಳವಾಗಿದೆ. ರಾತ್ರಿ ಸುಮಾರು 7. 30 ರ ವೇಳೆಗೆ ಜಗಳ ಆರಂಭವಾಗಿದೆ, ಇಬ್ಬರೂ ಚಾಕುಗಳನ್ನು ಎತ್ತಿಕೊಂಡು ಪರಸ್ಪರ ಇರಿದುಕೊಂಡಿದ್ದಾರೆ. ತಾಯಿ ಮಗಳ ಕುತ್ತಿಗೆ ಮತ್ತು ಹೊಟ್ಟೆಗೆ ಮೂರು ಬಾರಿ ಇರಿದಿದ್ದರೆ, ಮಗಳು ತನ್ನ ತಾಯಿಗೆ ನಾಲ್ಕು ಬಾರಿ ಇರಿದಿದ್ದಾಳೆ. ಗಲಾಟೆ ಕೇಳಿದ ಅಕ್ಕಪಕ್ಕದವರು ಅವರ ಮನೆಗೆ ಧಾವಿಸಿ, ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಸಾಂದರ್ಭಿಕ ಚಿತ್ರ
ಗದಗ: ನಾಲ್ವರು ಅಮಾಯಕರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟ ಮಗ ಸೇರಿ 8 ಜನರ ಬಂಧನ

ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ಸಾಹಿತಿ ಮೃತಪಟ್ಟಿದ್ದಾರೆ. ಅವರ ತಾಯಿ ಸಹ ಚಾಕು ಇರಿತದಿಂದ ಗಾಯಗೊಂಡಿದ್ದಾರೆ. ಅಪಾಯದಿಂದ ಪಾರಾಗಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರು ಮಾತ್ರ ಮನೆಯಲ್ಲಿ ವಾಸಿಸುತ್ತಿದ್ದರು. ತಾಯಿ ಚೇತರಿಸಿಕೊಂಡ ನಂತರವಷ್ಟೇ ಘಟನೆಗೆ ಕಾರಣ ತಿಳಿದು ಬರಲಿದ್ದು, ಆಕೆಯ ಹೇಳಿಕೆ ದಾಖಲಿಸಿಕೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬನಶಂಕರಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com