HSRP ನಂಬರ್ ಪ್ಲೇಟ್ ಅಳವಡಿಸಲು ಹಳೆ ವಾಹನಗಳ ಮಾಲೀಕರ ಪರದಾಟ; ರಾಜ್ಯ ಸಾರಿಗೆ ಇಲಾಖೆಗೆ ತಲೆನೋವು

ಫಿಯೆಟ್, ಅಂಬಾಸಿಡರ್, ಸಿಯೆಲೊ, ಮ್ಯಾಟಿಜ್, ಒಪೆಲ್, ಹೀರೋ ಪಚ್, ಎಲ್‌ಎಂಎಲ್, ಕೈನೆಟಿಕ್ ಹೋಂಡಾ ಮತ್ತಿತರ ಹಳೆಯ ವಾಹನಗಳನ್ನು ಹೊಂದಿರುವ ಹಲವು ಮಾಲೀಕರಿಗೆ ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಸಾಧ್ಯವಾಗುತ್ತಿಲ್ಲ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಫಿಯೆಟ್, ಅಂಬಾಸಿಡರ್, ಸಿಯೆಲೊ, ಮ್ಯಾಟಿಜ್, ಒಪೆಲ್, ಹೀರೋ ಪಚ್, ಎಲ್‌ಎಂಎಲ್, ಕೈನೆಟಿಕ್ ಹೋಂಡಾ ಮತ್ತಿತರ ಹಳೆಯ ವಾಹನಗಳನ್ನು ಹೊಂದಿರುವ ಹಲವು ಮಾಲೀಕರಿಗೆ ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಸಾಧ್ಯವಾಗುತ್ತಿಲ್ಲ.

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಆಯಾ ವಾಹನ ತಯಾರಕರ ಮೂಲಕ ಮಾತ್ರ ಪಡೆಯುವ ಅವಕಾಶವಿದ್ದು, ಈ ಪೈಕಿ ಹೆಚ್ಚಿನ ಕಂಪನಿಗಳು ಈಗ ಮುಚ್ಚಲ್ಪಟ್ಟಿವೆ. ಹೀಗಾಗಿ, ಈ ಹಳೆಯ ವಾಹನ ಮಾಲೀಕರಿಗೆ ತಮ್ಮ ಎಚ್‌ಎಸ್‌ಆರ್‌ಪಿ ಅನ್ನು ಪಡೆಯಲು ಯಾವುದೇ ಆಯ್ಕೆಯಿಲ್ಲದಂತಾಗಿದೆ.

ರಾಜ್ಯ ಸಾರಿಗೆ ಇಲಾಖೆಯೊಂದಿಗೆ ಟಿಎನ್ಐಇ ಈ ಸಮಸ್ಯೆಯನ್ನು ಪ್ರಸ್ತಾಪಿಸಿದಾಗ, ಸಾರಿಗೆ ಹೆಚ್ಚುವರಿ ಆಯುಕ್ತ (ಜಾರಿ) ಮಲ್ಲಿಕಾರ್ಜುನ ಮಾತನಾಡಿ, ರಾಜ್ಯ ಸಾರಿಗೆ ಇಲಾಖೆಗೆ ಹಳೆಯ ವಾಹನ ಮಾಲೀಕರಿಂದ ಈ ಬಗ್ಗೆ ದೂರುಗಳು ಕೇಳಿಬಂದಿವೆ. ಆ ವಾಹನಗಳ ಕಂಪನಿಗಳು ಸದ್ಯ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು.

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಮೇ 31 ರ ಮೊದಲು HSRP ನಂಬರ್ ಪ್ಲೇಟ್ ಹಾಕಿಸಿ; ಇಲ್ಲದಿದ್ದರೆ ಬೀಳುತ್ತೆ ದಂಡ!

'ಎಚ್‌ಎಸ್‌ಆರ್‌ಪಿ ಪಡೆಯಲು ಬಯಸುವ ವಾಹನ ಮಾಲೀಕರು ರಾಜ್ಯ ಸಾರಿಗೆ ಇಲಾಖೆಯ ವೆಬ್‌ಸೈಟ್ (transport.karnataka.gov.in) ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಮತ್ತು ವಾಹನ ತಯಾರಕರನ್ನು ಆಯ್ಕೆ ಮಾಡುವ ಮೂಲಕ ಬುಕ್ ಮಾಡಬೇಕು. ಆದರೆ, ಕೆಲವು ಹಳೆಯ ವಾಹನ ತಯಾರಕರು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿರುವುದರಿಂದ ಜನರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕ್ ಮಾಡಲು ತಯಾರಕರ ಪಟ್ಟಿಯಲ್ಲಿ ಆ ಕಂಪನಿಗಳು ಕಾಣಿಸಿಕೊಂಡಿಲ್ಲ' ಎಂದು ಹೇಳಿದರು.

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಮೇ 31 ರ ಮೊದಲು HSRP ನಂಬರ್ ಪ್ಲೇಟ್ ಹಾಕಿಸಿ; ಇಲ್ಲದಿದ್ದರೆ ಬೀಳುತ್ತೆ ದಂಡ!

'ಇಂತಹ ಕೆಲವು ಸಾವಿರ ವಾಹನಗಳಿದ್ದು, ಮೇ 31ರ ಗಡುವಿನ ಮೊದಲು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಬೇಕು. ಆದರೆ, ಯಾವುದೇ ಆಯ್ಕೆಗಳಿಲ್ಲದ ಕಾರಣ ಇದು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ನಾವು ಈ ಪರಿಸ್ಥಿತಿಯನ್ನು ವಿವರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಮತ್ತು ಅಂತಹ ಹಳೆಯ ವಾಹನಗಳಿಗೆ HSRP ಅಳವಡಿಸಲು ಇತರ ಆಟೋಮೊಬೈಲ್ ಕಂಪನಿಗಳಿಗೆ ಅನುಮತಿ ನೀಡುವಂತೆ ವಿನಂತಿಸುತ್ತೇವೆ' ಎಂದು ಅವರು ಹೇಳಿದರು.

ರಾಜ್ಯ ಸಾರಿಗೆ ಇಲಾಖೆಯು ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದು, ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಇಲ್ಲಿಯವರೆಗೆ, ಗಡುವನ್ನು ಎರಡು ಬಾರಿ ವಿಸ್ತರಿಸಲಾಗಿದೆ ಮತ್ತು ಸದ್ಯದ ಗಡುವು ಮೇ 31 ಕ್ಕೆ ಕೊನೆಗೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com