
ಬೆಂಗಳೂರು: 21 ವರ್ಷದ ಪತಿಯ ಕಿರುಕುಳ ತಾಳಲಾರದೆ 11 ತಿಂಗಳ ಮಗುವಿನ 17 ವರ್ಷ ವಯಸ್ಸಿನ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಗಂಗಮ್ಮನಗುಡಿ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಸಂತ್ರಸ್ತೆ ತನ್ನ ಪತಿ ಕೌಶಿಕ್ ನನ್ನು ಮನೆಯಿಂದ ಹೊರಗೆ ಕಳುಹಿಸಿದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌಶಿಕ್ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. 11 ತಿಂಗಳ ಮಗುವು ನಿರಂತರವಾಗಿ ಅಳುತ್ತಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಮಗುವು ನಿರಂತರವಾಗಿ ಅಳುತ್ತಿದ್ದುದ್ದನ್ನು ನೋಡಿದ ನೆರೆಮನೆಯ ಸತೀಶ್ ಎಂಬುವವರು ಸಂತ್ರಸ್ತೆಯ ಮನೆಯ ಹತ್ತಿರ ಬಂದಿದ್ದಾರೆ, ಈ ವೇಳೆ ಆಕೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ತಕ್ಷಣ ಬಾಗಿಲು ಒಡೆದು ಆಕೆಯನ್ನು ಕೆಳಗಿಳಿಸಲಾಯಿತು, ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಳು.
10 ನೇ ತರಗತಿಯಲ್ಲಿದ್ದ ಸಮಯದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಕೌಶಿಕ್‌ನೊಂದಿಗೆ ಸಂತ್ರಸ್ತೆ ಸ್ನೇಹ ಬೆಳೆಸಿದ್ದಾಳೆ ಎಂದು ವರದಿಯಾಗಿದೆ. ಆ ಸಮಯದಲ್ಲಿ ಆಕೆ ಕಮ್ಮಗೊಂಡನಹಳ್ಳಿಯ ಹಾಸ್ಟೆಲ್‌ನಲ್ಲಿ ತಂಗಿದ್ದಳು. ನಂತರ ಭೇಟಿಯಾಗಿ ಮದುವೆಯಾಗಲು ನಿರ್ಧರಿಸಿದರು. ಆದರೆ, ಆಕೆಯ ತಂದೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಂತ್ರಸ್ತ ಯುವತಿ ತನ್ನ ಹಠ ಮುಂದುವರಿಸಿದಳು.
ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಯಾವುದೇ ದೇವಸ್ಥಾನದಲ್ಲಿ ಅಥವಾ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿರಲಿಲ್ಲ, 2022ರಲ್ಲಿ ಮನೆಯಲ್ಲಿ ದೇವರ ಫೋಟೋ ಮುಂದೆ ಚಿತ್ರದ ಮುಂದೆ ಪ್ರತಿಜ್ಞೆ ವಿನಿಮಯ ಮಾಡಿಕೊಂಡರು. ಮದುವೆಯ ನಂತರವೂ, ಸಂತ್ರಸ್ತೆ ತನ್ನ ವಿದ್ಯಾಭ್ಯಾಸ ಮುಂದುವರೆಸಿದಳು.
ಗರ್ಭಿಣಿಯಾದ ನಂತರ ಪ್ರಥಮ ಪಿಯುಸಿಯಲ್ಲಿ ಕಾಲೇಜಿನಿಂದ ಹೊರಗುಳಿದಳು.ಇದಾದ ಕೆಲವು ದಿನಗಳ ನಂತರ ಕೌಶಿಕ್ ತನ್ನ ಹೆಂಡತಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ ಎಂದು ತಿಳಿದುಬಂದಿದೆ. ಸಂತ್ರಸ್ತೆ ತನ್ನ ಮಗುವನ್ನು ನೋಡಿಕೊಳ್ಳಲು ಆರ್ಥಿಕ ನೆರವು ಕೋರಿದ್ದರಿಂದ ಆಕೆ ಹೆರಿಗೆಯಾದ ನಂತರವೂ ಕಿರುಕುಳ ಮುಂದುವರೆಯಿತು. ಆಕೆಗೆ ಕುಟುಂಬದ ಇತರ ಸದಸ್ಯರಿಂದ ಯಾವುದೇ ಬೆಂಬಲ ಸಿಗಲಿಲ್ಲ. ಮದುವೆಯ ನಂತರ ಸಂತ್ರಸ್ತೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಆರೋಪಿಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Advertisement