ನಿತಿನ್ ಗಡ್ಕರಿ ಭೇಟಿಯಾದ ಸಂಸದ ಡಾ. ಸಿ.ಎನ್ ಮಂಜುನಾಥ್: STRR ಯೋಜನೆಗೆ 1,769 ಕೋಟಿ ರೂ. ಪರಿಹಾರ ನೀಡುವ ಭರವಸೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಮಹತ್ತರ ಯೋಜನೆಯಾದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಯು ರಾಜ್ಯ ಸರ್ಕಾರ ಶೇ.30 ಹಾಗೂ ಕೇಂದ್ರ ಸರ್ಕಾರ ಶೇ.70 ಪಾಲುದಾರಿಕೆಯ ಸಹಭಾಗಿತ್ವದಲ್ಲಿ 2021 ರಲ್ಲಿ ಭೂಸ್ವಾಧೀನದೊಂದಿಗೆ ಕಾಮಗಾರಿ ಆರಂಭವಾಗಿತ್ತು.
ನಿತಿನ್ ಗಡ್ಕರಿ ಭೇಟಿಯಾದ ಸಂಸದ ಡಾ.ಸಿ.ಎನ್.ಮಂಜುನಾಥ್.
ನಿತಿನ್ ಗಡ್ಕರಿ ಭೇಟಿಯಾದ ಸಂಸದ ಡಾ.ಸಿ.ಎನ್.ಮಂಜುನಾಥ್.
Updated on

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಮಹತ್ತರ ಯೋಜನೆಯಾದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಗೆ 45 ದಿನಗಳಲ್ಲಿ 1,769 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಭರವಸೆ ನೀಡಿದೆ.

ನಿನ್ನೆಯಷ್ಟೇ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು.

ಭೇಟಿ ವೇಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಇದುವರೆಗೆ ಸುಮಾರು 334.73 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಉಳಿದ 1769.71 ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿತಿನ್ ಗಡ್ಕರಿಯವರು, ಮುಂದಿನ 45 ದಿನಗಳಲ್ಲಿ ಉಳಿದ 1769.71 ಕೋಟಿ ರೂ.ಗಳನ್ನು ನೀಡುವ ಭರವಸೆ ನೀಡಿದ್ದಾರೆಂದು ಮಂಜುನಾಥ್ ಅವರು ಹೇಳಿದ್ದಾರೆ.

ನಿತಿನ್ ಗಡ್ಕರಿ ಭೇಟಿಯಾದ ಸಂಸದ ಡಾ.ಸಿ.ಎನ್.ಮಂಜುನಾಥ್.
ರಸ್ತೆ ಕಾಮಗಾರಿಗೆ ಒಂದು ತಿಂಗಳಲ್ಲಿ ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂ. ನೀಡಲು ಸಿದ್ಧ: ನಿತಿನ್ ಗಡ್ಕರಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಮಹತ್ತರ ಯೋಜನೆಯಾದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಯು ರಾಜ್ಯ ಸರ್ಕಾರ ಶೇ.30 ಹಾಗೂ ಕೇಂದ್ರ ಸರ್ಕಾರ ಶೇ.70 ಪಾಲುದಾರಿಕೆಯ ಸಹಭಾಗಿತ್ವದಲ್ಲಿ 2021 ರಲ್ಲಿ ಭೂಸ್ವಾಧೀನದೊಂದಿಗೆ ಕಾಮಗಾರಿ ಆರಂಭವಾಗಿತ್ತು.

ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ,ರಾಮನಗರ, ಆನೇಕಲ್, ಕನಕಪುರ, ಹಾರೋಹಳ್ಳಿ ವ್ಯಾಪ್ತಿಯನ್ನು ಒಳಗೊಂಡಿತ್ತು. ಆದರೆ ಭೂ ಸ್ವಾಧೀನದ ನಂತರವೂ ಈವರೆಗೆ ಅದರ ಪರಿಹಾರ ಧನ ಫಲಾನುಭವಿಗಳಿಗೆ ಬಹುತೇಕ ತಲುಪಿರಲಿಲ್ಲ, ಈ ವಿಚಾರವಾಗಿ ಅನೇಕ ಫಲಾನುಭವಿಗಳು ನನ್ನ ಬಳಿ ಮನವಿ ನೀಡಿದ್ದರು.

ಈವರೆಗೆ ಕೇಂದ್ರದಿಂದ ಸುಮಾರು ರೂ.334.73 ಕೋಟಿಗಳಷ್ಟು ಅನುದಾನ ಬಿಡುಗಡೆಯಾಗಿದ್ದು, ಬಾಕಿ ಮೊತ್ತ ಸುಮಾರು ರೂ.1769.71 ಕೋಟಿಗಳನ್ನು ಶೀಘ್ರವೇ ಬಿಡುಗಡೆ ಮಾಡಿಕೊಡುವಂತೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ವಂದಿಸಿದ ಸಚಿವರು 45 ದಿನಗಳೊಳಗೆ ಅದನ್ನು ಬಿಡುಗಡೆ ಮಾಡಿಕೊಡುವ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com