ವರ್ಗಾವಣೆ, ಒತ್ತಡದ ಜೀವನ; ಆರಕ್ಷಕರ ಅಸ್ವಾಭಾವಿಕ ಸಾವು; ಹದಗೆಟ್ಟ ವ್ಯವಸ್ಥೆಯ ಪ್ರತೀಕ?: ಭಾಸ್ಕರ್ ರಾವ್ ಬಿಚ್ಚಿಟ್ಟ ಬಹಿರಂಗ ಸತ್ಯ!

ಪೊಲೀಸ್ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಮತ್ತು ರಾಜಕೀಯ ಹಸ್ತಕ್ಷೇಪವನ್ನು ರದ್ದುಗೊಳಿಸುವ ಏಕೈಕ ಉದ್ದೇಶದಿಂದ ಸ್ಥಾಪಿಸಲಾದ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ (ಪಿಇಬಿ) ಅಸ್ತಿತ್ವದಲ್ಲಿದ್ದರೂ ಪೊಲೀಸ್ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ವರ್ಗಾವಣೆಗಾಗಿ ಹಣ ನೀಡುವುದು ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತಿದೆ.
ನಿವೃತ್ತ ಐಪಿಎಸ್ ಅಧಿಕಾರ್ ಭಾಸ್ಕರ್ ರಾವ್
ನಿವೃತ್ತ ಐಪಿಎಸ್ ಅಧಿಕಾರ್ ಭಾಸ್ಕರ್ ರಾವ್
Updated on

ಬೆಂಗಳೂರು: ಯಾದಗಿರಿಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ಸಾವು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಪೊಲೀಸ್ ವರ್ಗಾವಣೆಯಲ್ಲಿ ಹಣ ಮತ್ತು ಜಾತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ವೃತ್ತಿಯ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ, ಆದರೆ ಅವರು ಅದೇ ಹುದ್ದೆಯಲ್ಲಿ ಮುಂದುವರಿಯಲು ಹಣಕ್ಕಾಗಿ ಶಾಸಕರು ಮತ್ತು ಆವರ ಪುತ್ರ ಬೇಡಿಕೆಯಿಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಅದಾದ ಒಂದು ದಿನದ ನಂತರ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ 53 ವರ್ಷದ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡರು, ಇದು ಕೆಲಸದ ಸ್ಥಳದಲ್ಲಿನ ಒತ್ತಡದ ಕಾರಣ ಎಂದು ಶಂಕಿಸಲಾಗಿದೆ.

ಎರಡು ಘಟನೆಗಳು ಎರಡು ಪ್ರಮುಖ ವಿಷಯಗಳ ಬಗ್ಗೆ ಸುಳಿವು ನೀಡಿವೆ. ಪೊಲೀಸ್ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಮತ್ತು ರಾಜಕೀಯ ಹಸ್ತಕ್ಷೇಪವನ್ನು ರದ್ದುಗೊಳಿಸುವ ಏಕೈಕ ಉದ್ದೇಶದಿಂದ ಸ್ಥಾಪಿಸಲಾದ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ (ಪಿಇಬಿ) ಅಸ್ತಿತ್ವದಲ್ಲಿದ್ದರೂ ಪೊಲೀಸ್ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ವರ್ಗಾವಣೆಗಾಗಿ ಹಣ ನೀಡುವುದು ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ರಾಜಕಾರಣಿಗಳು ಕೈ ಹಾಕುತ್ತಾರೆ, ಅದಕ್ಕಿಂತ ಹೆಚ್ಚಾಗಿ ಪೊಲೀಸ್ ಇಲಾಖೆಯಲ್ಲಿಯೇ ವರ್ಗಾವಣೆ ಹಸ್ತಕ್ಷೇಪ ಹೆಚ್ಚು ಮಾಡಲಾಗುತ್ತದೆ ಎಂಬುದು ಬಹಿರಂಗ ರಹಸ್ಯ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹಣ ಅಥವಾ ಜಾತಿಯ ಆಧಾರದ ಮೇಲೆ ಎಂದಿಗೂ ವರ್ಗಾವಣೆಯಾಗುವುದಿಲ್ಲ ಎಂದು ಹೇಳಿದರೆ, ವರ್ಗಾವಣೆ ದಿನ ಪೋಸ್ಟಿಂಗ್‌ಗೆ ಹಣ ನೀಡಬೇಕಾಗುತ್ತದೆ ಇದು ಕ್ಯಾನ್ಸರ್‌ಗಿಂತ ಕೆಟ್ಟದಾಗಿದೆ ಎಂದು ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳುತ್ತಾರೆ.

ನಿವೃತ್ತ ಐಪಿಎಸ್ ಅಧಿಕಾರ್ ಭಾಸ್ಕರ್ ರಾವ್
ಕಮಿಷನ್ ಪೊಲೀಸರನ್ನು ದುರ್ಬಲಗೊಳಿಸುತ್ತದೆ: ಭಾಸ್ಕರ್ ರಾವ್

ಹಣವಿಲ್ಲದೆ ಪೋಸ್ಟಿಂಗ್ ಮಾಡುವುದು ಒಂದು ಅಪವಾದ. ದುರದೃಷ್ಟವಶಾತ್, ಕಾರ್ಯನಿರ್ವಾಹಕರಲ್ಲದ ಪೋಸ್ಟಿಂಗ್‌ಗಳಿಗೂ ಅಧಿಕಾರಿಗಳು ಪಾವತಿಸಬೇಕಾಗುತ್ತದೆ. ನಾನು ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗಲೂ ವರ್ಗಾವಣೆಗಾಗಿ ನಗದು ಹಣ ಪ್ರಚಲಿತವಿತ್ತು. ಬೆಂಗಳೂರಿನಲ್ಲಿ ವರ್ಗಾವಣೆ ಮಾಡಿಸಿಕೊಳ್ಳಬೇಕೆಂದರೆ ಹಣ ನೀಡಲೇಬೇಕು, ಅಧಿಕಾರಿಯೊಬ್ಬರು ನಗದು ಪಾವತಿಸಿ ಹುದ್ದೆಯನ್ನು ಪಡೆದಾಗ, ಅವರು ತಮ್ಮ ಹಣವನ್ನು ದೈನಂದಿನ ಸಂಗ್ರಹಣೆಯ ಮೂಲಕ ಪಡೆಯಬೇಕು. ಕಾನ್‌ಸ್ಟೆೇಬಲ್‌ಗಳಿಗೆ ಹಣ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸುವ ಮೂಲಕ ಜವಾಬ್ದಾರಿಯನ್ನು ನೀಡಲಾಗುತ್ತದೆ,ಎಂದು ಭಾಸ್ಕರ್ ರಾವ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಪೋಸ್ಟಿಂಗ್‌ಗಳಿಗಾಗಿ ಹಣ ನೀಡಿದವರಿಗೆ ಹೆಚ್ಚಿನ ಮಟ್ಟದ ಒತ್ತಡವನ್ನು ಉಂಟುಮಾಡುತ್ತದೆ. ಅಧಿಕಾರಿಯು ಮೊದಲು ಪೋಸ್ಟಿಂಗ್‌ಗಾಗಿ ಪಾವತಿಸಿದ ಹಣವನ್ನು ಸಂಗ್ರಹಿಸಬೇಕು ಮತ್ತು ನಂತರ ಮುಂದಿನ ಪೋಸ್ಟಿಂಗ್‌ಗೆ ಹಣವನ್ನು ಸಂಗ್ರಹಿಸಬೇಕು ಎಂದು ಹೇಳಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳೂ ಇದ್ದಾರೆ, ಅವರು ಎಲ್ಲಿ ನೇಮಕಗೊಂಡರೂ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ.. ಅಕ್ರಮ ಡ್ಯಾನ್ಸ್ ಬಾರ್‌ಗಳು, ಜೂಜಾಟದ ಅಡ್ಡೆಗಳು, ಅಕ್ರಮ ಪಾರ್ಕಿಂಗ್, ತಪ್ಪು ಪ್ರಕರಣಗಳಲ್ಲಿ ಜನರನ್ನು 'ಫಿಕ್ಸಿಂಗ್', ಮತ್ತು ಮರಳು ಮಾಫಿಯಾ 'ಮಾಮೂಲಿ' ಪೊಲೀಸ್ ಇಲಾಖೆಗೆ ಹಣ ವಸೂಲಿಯ ಸಾಮಾನ್ಯ ಮೂಲಗಳು ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

ಆದರೆ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಉಮೇಶ್ ಬೇರೆಯದೆ ಅಭಿಪ್ರಾಯ ಹೊಂದಿದ್ದಾರೆ. ಯಾವುದೇ ವರ್ಗಾವಣೆಗೆ ಸಹಾಯ ಮಾಡಲು ಯಾವುದೇ ರಾಜಕಾರಣಿ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸುವುದಿಲ್ಲ. ಅಧಿಕಾರಿಗಳೇ ವರ್ಗಾವಣೆ ಕೋರಿ ರಾಜಕಾರಣಿಗಳ ಮನೆ ಬಾಗಿಲಿಗೆ ಹೋಗುತ್ತಾರೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರಾಜಕಾರಣಿಗಳು ಹಣದ ಬೇಡಿಕೆ ಇಡುತ್ತಾರೆ. ರಾಮಕೃಷ್ಣ ಹೆಡ್ಗೆಯವರು ಮುಖ್ಯಮಂತ್ರಿಯಾಗಿದ್ದಾಗ ಆರಂಭವಾದ ‘ಮಿನಿಟ್’ (ಶಿಫಾರಸು ಪತ್ರಗಳು) ಪರಿಕಲ್ಪನೆಯನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾದರೆ ಮಿನಿಟ್ ನೀಡಬೇಕು. ಆದರೆ ಈಗ ಶಾಸಕರು ಪೊಲೀಸ್ ಅಧಿಕಾರಿಗಳಿಗೆ ಮಿನಿಟ್ ನೀಡುತ್ತಾರೆ, ಅವರ ಪೋಸ್ಟಿಂಗ್ ಅನ್ನು ಶಿಫಾರಸು ಮಾಡುತ್ತಾರೆ ಮತ್ತು ಅದನ್ನು ತಮ್ಮ ಕ್ಷೇತ್ರದ ಸಾರ್ವಜನಿಕರ ಹಿತಾಸಕ್ತಿಯಿಂದ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ.

ನಿವೃತ್ತ ಐಪಿಎಸ್ ಅಧಿಕಾರ್ ಭಾಸ್ಕರ್ ರಾವ್
ಭ್ರಷ್ಟ ಪೊಲೀಸ್ ಅಧಿಕಾರಿಯ ಅಸಡ್ಡೆ ವರ್ತನೆ: ರಾಜೀನಾಮೆ ಕೊಡ್ತೇನೆಂದು ಶಾಸಕ ಬೇಸರ; ವರ್ಗಾವಣೆ ಭರವಸೆ ನೀಡಿದ ಸರ್ಕಾರ

ಪೊಲೀಸ್ ವರ್ಗಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪದಿಂದ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಬೋರ್ಡ್ ನ ಉದ್ದೇಶವೇ ವಿಫಲವಾಗಿದೆ ಎಂದು ಉಮೇಶ್ ಹೇಳುತ್ತಾರೆ. ಅರ್ಹತೆಯ ಮೇರೆಗೆ ಯಾವುದೇ ಲಾಭದಾಯಕ ಪೊಲೀಸ್ ಠಾಣೆಗೆ ಪೋಸ್ಟಿಂಗ್ ಮಾಡಲಾಗುವುದಿಲ್ಲ . ಒಂದೋ ಹಣಕ್ಕಾಗಿ ವರ್ಗಾವಣೆಯಾಗಬೇಕು ಅಥವಾ ಅಧಿಕಾರಿ ತುಂಬಾ ಪ್ರಭಾವಶಾಲಿಯಾಗಿರಬೇಕು’ ಎಂದು ಉಮೇಶ್ ದೃಢವಾಗಿ ನಂಬುತ್ತಾರೆ. ಪೊಲೀಸ್ ಅಧಿಕಾರಿಯ ಜೀವನದಲ್ಲಿ ಒತ್ತಡವು ಒಂದು ಭಾಗವಾಗಿದೆ ಎಂದು ಉಮೇಶ್ ಹೇಳುತ್ತಾರೆ. ಒತ್ತಡವನ್ನು ನಿಭಾಯಿಸಲು ಅಧಿಕಾರಿಗೆ ಸಾಧ್ಯವಾಗದಿದ್ದರೆ, ಅವರು ಯಾವುದೇ ಒತ್ತಡವಿಲ್ಲದ ಕಾರ್ಯನಿರ್ವಾಹಕೇತರ ಪೋಸ್ಟಿಂಗ್‌ಗಳಿಗೆ ಹೋಗಬೇಕು. ಪೊಲೀಸ್ ಕೆಲಸಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ, ವ್ಯಕ್ತಿಯು ಇದೆಲ್ಲವನ್ನೂ ಯೋಚಿಸಬೇಕು. ಯಾವುದೇ ನಿಗದಿತ ಕೆಲಸದ ಸಮಯ ಮತ್ತು ವಾರದ ರಜಾದಿನಗಳಿಲ್ಲದ ಕಾರಣ ಪೊಲೀಸ್ ಅಧಿಕಾರಿಯ ಕೆಲಸವು ಹೆಚ್ಚು ಒತ್ತಡದಿಂದ ಕೂಡಿರುತ್ತದೆ. ಒತ್ತಡವನ್ನು ಎದುರಿಸಲು, ಪೊಲೀಸರು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರು ದೈಹಿಕ ವ್ಯಾಯಾಮಕ್ಕೆ ಸಮಯ ಮೀಸಲಿಟ್ಟರೆ ಮಾತ್ರ ಇದು ಸಾಧ್ಯ,ಎಂದು ಉಮೇಶ್ ಒತ್ತಿ ಹೇಳಿದರು.

ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಪೇದೆಯೊಬ್ಬರು ಹೇಳುವಂತೆ ವಾರದ ನಿಗದಿತ ರಜೆಗಳ ಕೊರತೆ ಮತ್ತು ರಜೆ ಪಡೆಯಲು ತೊಂದರೆಯು ಒತ್ತಡಕ್ಕೆ ಪ್ರಮುಖ ಕಾರಣವಾಗಿದೆ. ವಾರದ ರಜೆಗಳನ್ನು ನೀಡಬೇಕೆಂದು ನಿರ್ದೇಶನಗಳಿದ್ದರೂ, ನಮ್ಮ ಕೆಲಸವು ದೈನಂದಿನ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ. ಅದು ಅಪರಾಧ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ, ವಿವಿಐಪಿ ಭೇಟಿ ಅಥವಾ ಉತ್ಸವದ ಬಂದೋಬಸ್ತ್ ಕರ್ತವ್ಯದ ಮೇಲೆ ನಿಗದಿಯಾಗುತ್ತದೆ. ಕೆಲಸವು ಒತ್ತಡದಿಂದ ಕೂಡಿರುವಾಗ, ಯಾವುದೇ ರಜೆ ಅಥವಾ ವಾರದ ರಜೆಗಳು ಮತ್ತು ವಿಸ್ತೃತ ಕೆಲಸದಿಂದಾಗಿ ನಾವು ನಮ್ಮ ಕುಟುಂಬದೊಂದಿಗೆ ಸಮಯಕಳೆಯಲು ಸಾಧ್ಯವಾಗುವುದಿಲ್ಲ, ಇದು ಒತ್ತಡವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ. ರಾಮಯ್ಯ ಸ್ಮಾರಕ ಆಸ್ಪತ್ರೆಯ ಮನೋವೈದ್ಯಕೀಯ ಸಲಹೆಗಾರ ಡಾ ವಿರೂಪಾಕ್ಷ ಎಚ್‌ಎಸ್ ಮಾತನಾಡಿ, ಇಂದಿನ ವೇಗದ ಜಗತ್ತಿನಲ್ಲಿ ಕೆಲಸದ ಒತ್ತಡ ಮತ್ತು ವೈಯಕ್ತಿಕ ಜವಾಬ್ದಾರಿಗಳು ಗಮನಾರ್ಹ ಒತ್ತಡಕ್ಕೆ ಕಾರಣವಾಗಬಹುದು, ಇದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿರಂತರ ಬೇಡಿಕೆಗಳು, ಮತ್ತು ಕೆಲಸದಲ್ಲಿನ ಹೆಚ್ಚಿನ ನಿರೀಕ್ಷೆಗಳು ಕೆಲಸ-ಜೀವನದ ಅಸಮತೋಲನಕ್ಕೆ ಕಾರಣವಾಗುತ್ತವೆ. ಈ ದೀರ್ಘಕಾಲದ ಒತ್ತಡವು ದೇಹ ಮತ್ತು ಮನಸ್ಸಿನ ಮೇಲೆ ಆಳವಾದ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಪೊಲೀಸ್ ಅಧಿಕಾರಿಗಳ ಸಾವು

  • ಆಗಸ್ಟ್ 2024 ಪರಶುರಾಮ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಹೃದಯಾಘಾತ ಶಂಕೆ

  • ತಿಮ್ಮೇಗೌಡ, ಪೊಲೀಸ್ ಇನ್ಸ್‌ಪೆಕ್ಟರ್, ಆತ್ಮಹತ್ಯೆ

  • ಅಕ್ಟೋಬರ್ 2022 HL ನಂದೀಶ, ಪೊಲೀಸ್ ಇನ್ಸ್‌ಪೆಕ್ಟರ್, ಹೃದಯಾಘಾತ

  • ಡಿಸೆಂಬರ್ 2020 ವಿ ಲಕ್ಷ್ಮಿ, ಡಿವೈಎಸ್ಪಿ, ಆತ್ಮಹತ್ಯೆ

  • ಜುಲೈ 2016 ಕಲ್ಲಪ್ಪ ಹಂಡಿಬಾಗ್, ಡಿವೈಎಸ್ಪಿ, ಆತ್ಮಹತ್ಯೆ

  • ಅಕ್ಟೋಬರ್ 2016 ಯಲ್ಲಪ್ಪ ಹಂಡಿಬಾಗ್ (ಕಲ್ಲಪ್ಪ ಹಂಡಿಬಾಗ್ ಅವರ ಸಹೋದರ), ಕಾನ್‌ಸ್ಟೇಬಲ್, ಆತ್ಮಹತ್ಯೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com