ಮೈಸೂರು: ಅಮಾನತುಗೊಂಡ ಪೊಲೀಸ್ ಗೆ ಮುಖ್ಯಮಂತ್ರಿ ಪದಕ, ವಿವಾದ!

ಮೈಸೂರು ನಗರ ಸಿಸಿಬಿ ಘಟಕದ ಭಾಗವಾಗಿದ್ದ ಸಲೀಂ ಪಾಷಾ ಅವರನ್ನು ಅವ್ಯವಹಾರದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ಅಮಾನತುಗೊಳಿಸಲಾಗಿತ್ತು.
ಮುಖ್ಯಮಂತ್ರಿ ಪದಕ
ಮುಖ್ಯಮಂತ್ರಿ ಪದಕ
Updated on

ಮೈಸೂರು: ಇದು ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಅಚಾತುರ್ತಯವೋ, ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಅಮಾನತುಗೊಂಡಿದ್ದ ಹೆಡ್ ಕಾನ್‌ಸ್ಟೆಬಲ್ ಹೆಸರು ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ಪಡೆದವರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಆದರ್ಶಪ್ರಾಯ ಸೇವಾ ದಾಖಲೆಗಳನ್ನು ಹೊಂದಿರುವ ಅಧಿಕಾರಿಗಳಿಗೆ ಮೀಸಲಾದ ಮುಖ್ಯಮಂತ್ರಿ ಪದಕವು ಇದೀಗ ಈ ಘಟನೆಯ ನಂತರ ವಿವಾದದಲ್ಲಿ ಮುಳುಗಿದೆ.

ಮೈಸೂರು ನಗರ ಸಿಸಿಬಿ ಘಟಕದ ಭಾಗವಾಗಿದ್ದ ಸಲೀಂ ಪಾಷಾ ಅವರನ್ನು ಅವ್ಯವಹಾರದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ಅಮಾನತುಗೊಳಿಸಲಾಗಿತ್ತು. ಅವರ ಮೇಲಿನ ಆರೋಪಗಳು ಕ್ಷುಲ್ಲಕವಲ್ಲ. ಪಾಷಾ ಅವರು ಸಾರ್ವಜನಿಕ ಆಸ್ತಿಯನ್ನು ಕಳ್ಳತನ ಮಾಡಲು ಪರೋಕ್ಷವಾಗಿ ಕ್ರಿಮಿನಲ್ ಗಳಿಗೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜುಲೈ 12 ರಂದು ವಿಜಯನಗರ ಉಪ ವಿಭಾಗದ ಎಸಿಪಿ ಅವರ ವರದಿ ಆಧರಿಸಿ ನಗರ ಪೊಲೀಸ್ ಕಮಿಷನರ್ ಅಧಿಕಾರಿಯು ಇಲಾಖಾ ವಿಚಾರಣೆಯ ತನಕ ಅವರನ್ನು ಅಮಾನತುಗೊಳಿಸಿದ್ದಾರೆ. ಈ ಆರೋಪಗಳ ಹೊರತಾಗಿಯೂ, ಮುಖ್ಯಮಂತ್ರಿಗಳ ಪದಕದೊಂದಿಗೆ ಗುರುತಿಸಲ್ಪಟ್ಟವರಲ್ಲಿ ಅವರ ಹೆಸರನ್ನು ಹೇಗೆ ಸೇರಿಸಲಾಯಿತು ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಪಾಷಾ ಈ ಪ್ರಕರಣಗಳಲ್ಲಿ ಆರೋಪಿಗಳ ಸಂಬಂಧಿಕರೊಂದಿಗೆ ಅನುಮಾನಾಸ್ಪದವಾಗಿ ನಿಕಟ ಸಂಬಂಧವನ್ನು ಹೊಂದಿದ್ದರು ಎನ್ನಲಾಗಿದೆ. ಸಿಡಿಆರ್ ವರದಿಯು ಅದನ್ನು ಸಾಬೀತುಪಡಿಸಿದೆ, ಇದು ಅಂತಿಮವಾಗಿ ಹಿರಿಯ ಅಧಿಕಾರಿಗಳು ಅವರನ್ನು ಅಮಾನತುಗೊಳಿಸುವಂತೆ ಸೂಚಿಸಲು ಕಾರಣವಾಗಿದೆ.

ಮುಖ್ಯಮಂತ್ರಿ ಪದಕ
ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಆಯ್ಕೆಯಾದ ಮೊದಲ ಮಹಿಳಾ ಫಾರೆಸ್ಟರ್ ಸುನೀತಾ ನಿಂಬರ್ಗಿ!

ಇಂತಹ ಘೋರ ಪ್ರಮಾದ ನಡೆದರೆ ಹೇಗೆ ಎಂದು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪರಿಸ್ಥಿತಿಯು ಪೊಲೀಸರು ಮತ್ತು ಅಧಿಕಾರಿಗಳು ಪ್ರಶಸ್ತಿ ಪ್ರಕ್ರಿಯೆಯ ಸಮಗ್ರತೆಯನ್ನು ಹಾಳುಮಾಡಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರನ್ನು ಸಂಪರ್ಕಿಸಿದಾಗ, ಅವರು ಕರೆಗಳು ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com