ಮಂಡ್ಯ: ನೇಣು ಬಿಗಿದುಕೊಂಡು ಪತ್ನಿ ಆತ್ಮಹತ್ಯೆ; ಹೆದರಿ ಕೆರೆಗೆ ಹಾರಿದ ಪತಿ, ಒಂದು ವರ್ಷದ ಮಗು ಅನಾಥ!

ಮೋಹನ್ ಹಾಗೂ ಸ್ವಾತಿ ಮೃತ ದಂಪತಿಯಾಗಿದ್ದು ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಹುಟ್ಟಿದ್ದು, ಇದೀಗ ದಂಪತಿಯ ಕಲಹಕ್ಕೆ ಇಬ್ಬರು ಸಾವನ್ನಪ್ಪಿದ್ದು ಕೂಸು ಬಡವಾಗಿದೆ.
ಸ್ವಾತಿ-ಮೋಹನ್
ಸ್ವಾತಿ-ಮೋಹನ್
Updated on

ಮಂಡ್ಯ: ಕೌಟುಂಬಿಕ ಕಲಹದಿಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಪತಿ ಕೆರೆಗೆ ಹಾರಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ತಾಲೂಕಿನ ಗದ್ದೆಹೊಸರು ಗ್ರಾಮದಲ್ಲಿ ನಡೆದಿದೆ.

ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿರುವ ಒಂದು ವರ್ಷದ ಮಗು ಇದೀಗ ಅನಾಥವಾಗಿದೆ. ಮೋಹನ್ ಹಾಗೂ ಸ್ವಾತಿ ಮೃತ ದಂಪತಿಯಾಗಿದ್ದು ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಹುಟ್ಟಿದ್ದು, ಇದೀಗ ದಂಪತಿಯ ಕಲಹಕ್ಕೆ ಇಬ್ಬರು ಸಾವನ್ನಪ್ಪಿದ್ದು ಕೂಸು ಬಡವಾಗಿದೆ.

ಮೋಹನ್ ಮತ್ತು ಸ್ವಾತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಆದರೆ ನಿನ್ನೆ ಸಂಜೆ ಮತ್ತೆ ಮನೆಯಲ್ಲಿ ಯಾರು ಇಲ್ಲದೇ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ‌. ನಂತರ ಸ್ವಾತಿ ಅವರ ಅಣ್ಣ, ಹೆಣ್ಣು ಮಗುವನ್ನು ಕರೆದುಕೊಂಡು ಮನೆಗೆ ಬಂದು ನೋಡಿದಾಗ ಸ್ವಾತಿ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಇದರಿಂದ ಕೆರಳಿದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದರು. ಇದನ್ನು ಕಂಡ‌ ಮೋಹನ್ ಅಲ್ಲಿಂದ ಪರಾರಿಯಾಗಿದ್ದನು.

ಸ್ವಾತಿ-ಮೋಹನ್
ಐಷಾರಾಮಿ ಪ್ರದೇಶಗಳ ಗುರಿಯಾಗಿಸಿ ದರೋಡೆ: ಖತರ್ನಾಕ್‌ ಕಳ್ಳರ ಗ್ಯಾಂಗ್‌ ಅಂದರ್

ಆದರೆ ಇಂದು ಬೆಳಗ್ಗೆ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಇದ್ದ ಕೆರೆಯಲ್ಲಿ ಮೋಹನ್ ಶವ ಸಹ ಪತ್ತೆಯಾಗಿದೆ. ಮೋಹನ್ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಇನ್ನು ಆನ್ ಲೈನ್ ಬೆಟ್ಟಿಂಗ್ ಕ್ಕಾಗಿ ಹಣ ನೀಡುವಂತೆ ಸ್ವಾತಿಗೆ ಕಿರುಕುಳ ನೀಡುತ್ತಿದ್ದ ಎಂದು ಸ್ವಾತಿಯ ಘೋಷಕರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com