ಬೆಂಗಳೂರು: ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ನಿಲ್ದಾಣದ 2, 3, 4, 5 ಸಂಖ್ಯೆಗಳ ಪ್ಲಾಟ್ ಫಾರಂಗಳಲ್ಲಿ ನಿಲ್ಲುತ್ತಿದ್ದ ಕೆಲ ರೈಲುಗಳ ಸಂಚಾರವನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಬುಧವಾರ ಮಾಹಿತಿ ನೀಡಿದೆ.
ಇಂದಿನಿಂದ ಸೆ.4ರವರೆಗೆ 2 ಮತ್ತು 3ನೆ ಪ್ಲಾಟ್ ಫಾರಂ ಬಂದ್ ಆಗಲಿದ್ದು, ಸೆ.5 ರಿಂದ 19ರವರೆಗೆ 4 ಮತ್ತು 5ನೆ ಪ್ಲಾಟ್ ಫಾರಂ ಬಂದ್ ಆಗಲಿದೆ. ಈ ಕಾರಣಕ್ಕೆ ಕೆಲ ರೈಲುಗಳನ್ನು ರದ್ದು ಮಾಡಲಾಗಿದೆ.
ತುಮಕೂರು- ಕೆಎಸ್‍ಆರ್ ಬೆಂಗಳೂರು ಮತ್ತು ಕೆಎಸ್‍ಆರ್ ಬೆಂಗಳೂರು-ತುಮಕೂರು ರೈಲು ಸಂಚಾರವನ್ನು ಇಂದಿನಿಂದ ಸೆ.19ರವರೆಗೆ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.
ತುಮಕೂರು-ಯಶವಂತಪುರ ರೈಲು ಇಂದಿನಿಂದ ಸೆ.19ರವರೆಗೆ ಚಿಕ್ಕಬಾಣಾವರ- ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ. ಯಶವಂತಪುರ-ಹೊಸೂರು ಮಧ್ಯೆ ಸಂಚರಿಸುವ ರೈಲು ಇಂದಿನಿಂದ ಸೆ.19ರವರೆಗೆ ಯಶವಂತಪುರ- ಹೆಬ್ಬಾಳ ನಡುವೆ ಭಾಗಶಃ ರದ್ದಾಗಲಿದೆ ಎಂದು ತಿಳಿಸಿದೆ.
ಯಾವೆಲ್ಲಾ ರೈಲು ಭಾಗಶಃ ರದ್ದು?
06574 ತುಮಕೂರು ಯಶವಂತಪುರ ಎಕ್ಸ್‌ಪ್ರೆಸ್ - ಚಿಕ್ಕಬಾಣಾವರಕ್ಕೆ ಕೊನೆ.
06591 ಯಶವಂತಪುರ ಹೊಸೂರು - ಹೆಬ್ಬಾಳದಿಂದ ಆರಂಭ.
06580 ತುಮಕೂರು ಯಶವಂತಪುರ - ಚಿಕ್ಕಬಾಣಾವರಕ್ಕೆ ಕೊನೆ.
06592 ಹೊಸೂರು ಯಶವಂತಪುರ - ಹೆಬ್ಬಾಳಕ್ಕೆ ಕೊನೆ.
06593 ಯಶವಂತಪುರ ಚಿಕ್ಕಬಳ್ಳಾಪುರ - ಯಲಹಂಕದಿಂದ ಆರಂಭ
06594 ಚಿಕ್ಕಬಳ್ಳಾಪುರ ಯಶವಂತಪುರ - ಯಲಹಂಕಕ್ಕೆ ಕೊನೆ.
06393 ಯಶವಂತಪುರ ಹೊಸೂರು ಎಕ್ಸ್‌ಪ್ರೆಸ್ - ಹೆಬ್ಬಾಳದಿಂದ ಆರಂಭ.
06394 ಹೊಸೂರು ಯಶವಂತಪುರ - ಹೆಬ್ಬಾಳಕ್ಕೆ ಕೊನೆ.
06573 ಯಶವಂತಪುರ-ತುಮಕೂರು ಎಕ್ಸ್‌ಪ್ರೆಸ್ ಚಿಕ್ಕಬಾಣಾವಾರದಿಂದ ಆರಂಭ.
16239 ಚಿಕ್ಕಮಗಳೂರು -ಯಶವಂತಪುರ ಎಕ್ಸ್‌ಪ್ರೆಸ್ ಚಿಕ್ಕಬಾಣಾವಾರಕ್ಕೆ ಕೊನೆ.
16240 ಯಶವಂತಪುರ- ಚಿಕ್ಕಮಗಳೂರು ಎಕ್ಸ್‌ಪ್ರೆಸ್ ಚಿಕ್ಕಬಾಣಾವಾರದಿಂದ ಆರಂಭ.
16208 ಮೈಸೂರು -ಯಶವಂತಪುರ ಎಕ್ಸ್‌ಪ್ರೆಸ್ ಚಿಕ್ಕಬಾಣಾವಾರಕ್ಕೆ ಕೊನೆ.
16211 ಯಶವಂತಪುರ-ಸೇಲಂ ಎಕ್ಸ್‌ಪ್ರೆಸ್ ಹೆಬ್ಬಾಳದಿಂದ ಆರಂಭ.
16212 ಸೇಲಂ -ಯಶವಂತಪುರ ಎಕ್ಸ್‌ಪ್ರೆಸ್ ಹೆಬ್ಬಾಳಕ್ಕೆ ಕೊನೆ.
16207 ಯಶವಂತಪುರ-ಮೈಸೂರು ಎಕ್ಸ್‌ಪ್ರೆಸ್ ಚಿಕ್ಕಬಾಣಾವಾರದಿಂದ ಆರಂಭ.
17211 ಮಚಲೀಪಟ್ಟಣಂ-ಯಶವಂತಪುರ ಎಕ್ಸ್‌ಪ್ರೆಸ್ - ಯಲಹಂಕದಲ್ಲಿ ಕೊನೆ.
17212 ಯಶವಂತಪುರ-ಮಚಲೀಪಟ್ಟಣಂ ಎಕ್ಸ್‌ಪ್ರೆಸ್ - ಯಲಹಂಕದಿಂದ ಆರಂಭ.
12194 ಜಂಬಲ್‌ಪುರ್ -ಯಶವಂತಪುರ ಎಕ್ಸ್‌ಪ್ರೆಸ್ ಯಲಹಂಕದಲ್ಲಿ ಕೊನೆ.
12193 ಯಶವಂತಪುರ-ಜಂಬಲ್‌ಪುರ ಎಕ್ಸ್‌ಪ್ರೆಸ್ ಯಲಹಂಕದಿಂದ ಆರಂಭ.
06579 ಯಶವಂತಪುರ-ತುಮಕೂರು ಎಕ್ಸ್‌ಪ್ರೆಸ್ ಚಿಕ್ಕಬಾಣಾವಾರಕ್ಕೆ ಕೊನೆ.
22883 ಪುರಿ -ಯಶವಂತಪುರ ಎಕ್ಸ್‌ಪ್ರೆಸ್ ಯಲಹಂಕದಿಂದ ಆರಂಭ.
22884 ಯಶವಂತಪುರ-ಪುರಿ ಎಕ್ಸ್‌ಪ್ರೆಸ್ ಯಲಹಂಕಕ್ಕೆ ಕೊನೆ.
19301 ಡಾ. ಅಂಬೇಡ್ಕರ್ ನಗರ್ -ಯಶವಂತಪುರ ಎಕ್ಸ್‌ಪ್ರೆಸ್ ಯಲಹಂಕಕ್ಕೆ ಕೊನೆ.
19302 ಯಶವಂತಪುರ-ಡಾ. ಅಂಬೇಡ್ಕರ್ ನಗರ್ ಎಕ್ಸ್‌ಪ್ರೆಸ್ ಯಲಹಂಕದಿಂದ ಆರಂಭ.
ಯಾವೆಲ್ಲಾ ರೈಲು ಮಾರ್ಗ ಬದಲಾವಣೆ?
22697 ಹುಬ್ಬಳ್ಳಿ - ಚೆನ್ನೈ ಎಕ್ಸ್‌ಪ್ರೆಸ್.
22698 ಚೆನ್ನೈ ಹುಬ್ಬಳ್ಳಿ ಎಕ್ಸ್‌ಪ್ರೆಸ್.
06512 ಬಾಣಸವಾಡಿ ತುಮಕೂರು ಎಕ್ಸ್‌ಪ್ರೆಸ್.
06511 ತುಮಕೂರು ಬಾಣಸವಾಡಿ ಎಕ್ಸ್‌ಪ್ರೆಸ್.
17310 ವಾಸ್ಕೋ ಡ ಗಾಮ ಯಶವಂತಪುರ ಎಕ್ಸ್‌ಪ್ರೆಸ್.
17309 ಯಶವಂತಪುರ ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್.
11312 ಹಾಸನ ಸೊಲ್ಲಾಪುರ ಎಕ್ಸ್‌ಪ್ರೆಸ್.
11311 ಸೊಲ್ಲಾಪುರ ಹಾಸನ ಎಕ್ಸ್‌ಪ್ರೆಸ್
Advertisement