Bengaluru Metro: ನಾಗಸಂದ್ರ-ಮಾದವಾರ ನಡುವೆ 6 ಬೋಗಿ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ

ರೀಚ್ 3ಸಿ ವಿಸ್ತ್ರತ ಮಾರ್ಗದ ಮಾದವರ ಮತ್ತು ನಾಗಸಂದ್ರ ನಡುವೆ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ.
Nagasandra - Madavara trial run began
ನಾಗಸಂದ್ರ-ಮಾದವಾರ ನಡುವೆ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಯಶಸ್ವಿ
Updated on

ಬೆಂಗಳೂರು: ನಮ್ಮ ಮೆಟ್ರೋ ನಾಗಸಂದ್ರ - ಮಾದಾವರ ನಡುವೆ ಪ್ರಾಯೋಗಿಕ ಸಂಚಾರ ಆರಂಭಿಸಿದ್ದು, ಭಾನುವಾರ ಬೆಳಿಗ್ಗೆ 6 ಬೋಗಿಗಳ ರೈಲು ನಿಲ್ದಾಣಕ್ಕೆ ಆಗಮಿಸಿ ಸಿಗ್ನಲ್‌ ಪರೀಕ್ಷೆ ನಡೆಸಿದವು.

ಹೌದು.. ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆಯಾಗುತ್ತಿದ್ದು, ಸದ್ಯ ರೇಷ್ಮೆ ಮಂಡಳಿಯಿಂದ ನಾಗಸಂದ್ರವರೆಗೂ ಮಾರ್ಗ ವಿಸ್ತರಣೆಯಾಗಿದೆ.

ಈ ಮಾರ್ಗವನ್ನು ರೇಷ್ಮೆ ಮಂಡಳಿಯಿಂದ ಮಾದಾವರ (ಬೆಂಗಳೂರು ಅಂತಾರಾಷ್ಟ್ರೀ ವಸ್ತು ಪ್ರದರ್ಶನ ಮೈದಾನ) ವರೆಗೂ ವಿಸ್ತರಣೆ ಮಾಡಲಾಗಿದೆ. ಸದ್ಯ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಇಲ್ಲಿ ಇಂದು ರೈಲು ಪ್ರಾಯೋಗಿಕ ಸಂಚಾರ ನಡೆಸಿದವು.

Nagasandra - Madavara trial run began
ಪ್ರಾಸಿಕ್ಯೂಷನ್ ಗೆ ಅನುಮತಿ, ರಾಜೀನಾಮೆ ಪ್ರಶ್ನೆಯೇ ಇಲ್ಲ-ಸಿದ್ದರಾಮಯ್ಯ; ರಾಜ್ಯಪಾಲರ ವಿರುದ್ಧ ಪ್ರತಿಭಟನೆ; ನಮ್ಮ ಮೆಟ್ರೋ 3 ನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿದ ಬಿಎಂಆರ್‌ಸಿಎಲ್‌ ಅಧಿಕಾರಿಗಳು, " ರೀಚ್ 3ಸಿ ವಿಸ್ತ್ರತ ಮಾರ್ಗದ ಮಾದವರ ಮತ್ತು ನಾಗಸಂದ್ರ ನಡುವೆ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. 6 ಬೋಗಿಗಳ ರೈಲು ಕನಿಷ್ಠ 5 ಕಿ.ಮೀ ವೇಗದಿಂದ ಗರಿಷ್ಠ 35 ಕಿ.ಮೀ ವೇಗದಲ್ಲಿ ಚಲಿಸಿ ಪರೀಕ್ಷೆ ನಡೆಸಲಾಯಿತು " ಎಂದು ತಿಳಿಸಿದ್ದಾರೆ. ಅಲ್ಲದೆ ರೈಲುಗಳ ಸಂಚಾರದ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com