ಬೆಂಗಳೂರು: ಬೆಂಗಳೂರು tech-savvy ನಗರ ಎಂದೇ ಖ್ಯಾತಿ ಪಡೆದಿದ್ದು ತಂತ್ರಜ್ಞಾನದ ದೃಷ್ಟಿಯಿಂದ ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತದೆ.
ಈಗ ಆಟೋ ಚಾಲಕನೋರ್ವ ಕ್ರಿಪ್ಟೋ ಕರೆನ್ಸಿ ಮೂಲಕ ಪೇಮೆಂಟ್ ಪಡೆಯುತ್ತಿರುವುದು ಹೆಚ್ಚು ಪ್ರಚಾರವಾಗುತ್ತಿದೆ. ಆಟೋ ಚಾಲಕನ ಮುಂದಾಲೋಚನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಟೋ ಚಾಲಕ ತನ್ನ ಆಟೋ ಮೇಲೆ "ಕ್ರಿಪ್ಟೋ ಕರೆನ್ಸಿ ಸ್ವೀಕರಿಸಲಾಗುವುದು" ಎಂದು ಬರೆದಿದ್ದ ಫೋಟೋ ಆ.18 ರಂದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, 51,000 ವೀಕ್ಷಣೆ 1,500 ಲೈಕ್ ಗಳನ್ನು ಪಡೆದಿತ್ತು.
"ಈ ಆಟೋ ಚಾಲಕ ಹೆಚ್ಚಿನ ಸಾಕ್ಷರ ಭಾರತೀಯರಿಗಿಂತ ವೇಗವಾಗಿ ರೂಪಾಂತರಗೊಳ್ಳುತ್ತಿದ್ದಾರೆ" ಎಂದು X ಬಳಕೆದಾರ ಗರಿಮಾ ಶರ್ಮಾ ಬರೆದಿದ್ದರೆ, ಮತ್ತೊಬ್ಬ ಬಳಕೆದಾರರು ವ್ಯಂಗ್ಯವಾಡಿದ್ದು, "ಆತ ವೆಬ್3 ಹ್ಯಾಕಥಾನ್‌ಗಳಿಗೆ ಹಾಜರಾಗುತ್ತಿರಬೇಕು." ಎಂದು ಹೇಳಿದ್ದಾರೆ.
"ಹೆಚ್ಚಿನ ಜನರು ಕ್ರಿಪ್ಟೋ ಖಾತೆಗಳನ್ನು ಹೊಂದಿಲ್ಲ, ಆದರೆ ಈತ ಮಾತ್ರ ಕ್ರಿಪ್ಟೋವನ್ನು ಸ್ವೀಕರಿಸುತ್ತಿದ್ದಾರೆ" ಎಂದು ಆರ್ಯನ್ ಅಗರ್ವಾಲ್ ಟೀಕಿಸಿದ್ದಾರೆ.
ಡಿಜಿಟಲ್ ಕರೆನ್ಸಿಯನ್ನು ಅಳವಡಿಸಿಕೊಳ್ಳುವ ಚಾಲಕನ ನಿರ್ಧಾರವು ದೈನಂದಿನ ವಹಿವಾಟುಗಳಲ್ಲಿ ಕ್ರಿಪ್ಟೋಕರೆನ್ಸಿಗಳ ಸ್ವೀಕಾರದ ಕಡೆಗೆ ಬೆಳೆಯುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಆದಾಗ್ಯೂ, ಮಾರುಕಟ್ಟೆಯ ಚಂಚಲತೆಯನ್ನು ಉಲ್ಲೇಖಿಸಿರುವ ಮಂದಿ, ತಮ್ಮದೇ ಆದ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 2022 ರ ನಂತರ ಹಲವರು ಕ್ರಿಪ್ಟೋ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ನಾನು ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ಕ್ರಿಪ್ಟೋದಲ್ಲಿ ಆಹಾರಕ್ಕಾಗಿ ಪಾವತಿಸುತ್ತಿದ್ದೆ. ಅವರು ಇನ್ನೂ ಕ್ರಿಪ್ಟೋವನ್ನು ಸ್ವೀಕರಿಸುತ್ತಾರೆಯೇ. ಹೌದು ಎಂದಾದರೆ, ಅದು ಅದ್ಭುತ ಎಂದು ಮತ್ತೊಬ್ಬ ನೆಟಿಜನ್ ಹೇಳಿದ್ದಾರೆ.
ಈ ಅನಿಶ್ಚಿತತೆಯ ಹೊರತಾಗಿಯೂ, ಭಾರತ ಸರ್ಕಾರ ಕ್ರಿಪ್ಟೋ ಉದ್ಯಮವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಂಡಿದೆ. 2022 ರ ಬಜೆಟ್ ನಲ್ಲಿ ಕ್ರಿಪ್ಟೋಕರೆನ್ಸಿ ಗಳಿಕೆಯ ಮೇಲೆ 30% ತೆರಿಗೆಯನ್ನು ಪರಿಚಯಿಸಲಾಗಿತ್ತು ಮತ್ತು ನಿರ್ದಿಷ್ಟ ಮಿತಿಯನ್ನು ಮೀರಿದ ವಹಿವಾಟುಗಳಿಗೆ 1% ತೆರಿಗೆಯನ್ನು ಮೂಲದಲ್ಲಿ ತಡೆಹಿಡಿಯಲಾಗಿದೆ (TDS).
Advertisement