ಬೆಂಗಳೂರು: ತರಕಾರಿ ವ್ಯಾಪಾರಿ ಸಾಕ್ಷಿ ಪರಿಗಣಿಸಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

ವಿಚಾರಣೆ ನಡೆಸಿದ ಅನೇಕ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ ನಂತರ ಪ್ರಕರಣ ಕೈ ಜಾರುವ ಹಂತದಲ್ಲಿತ್ತು. ಆದರೆ ಈಗ ಪ್ರತ್ಯಕ್ಷದರ್ಶಿ ಸಲ್ಮಾ ಅವರ ಹೇಳಿಕೆ ಮೇಲೆ ಇಡೀ ಪ್ರಕರಣ ನಿಂತಿತ್ತು. ತರಕಾರಿ ಮಾರುತ್ತಿದ್ದ ಸಲ್ಮಾ ಅಂಗಡಿಯಿಂದ ಕೇವಲ 10 ಅಡಿ ದೂರದಲ್ಲಿ ಕೊಲೆ ನಡೆದಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿ ನಡೆದ ಕೊಲೆಯೊಂದಕ್ಕೆ ಎಚ್‌ಎಎಲ್ ತರಕಾರಿ ವ್ಯಾಪಾರಿ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿಚಾರಣೆ ನಡೆಸಿದ ಅನೇಕ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ ನಂತರ ಪ್ರಕರಣ ಕೈ ಜಾರುವ ಹಂತದಲ್ಲಿತ್ತು. ಆದರೆ ಈಗ ಪ್ರತ್ಯಕ್ಷದರ್ಶಿ ಸಲ್ಮಾ ಅವರ ಹೇಳಿಕೆ ಮೇಲೆ ಇಡೀ ಪ್ರಕರಣ ನಿಂತಿತ್ತು. ತರಕಾರಿ ಮಾರುತ್ತಿದ್ದ ಸಲ್ಮಾ ಅಂಗಡಿಯಿಂದ ಕೇವಲ 10 ಅಡಿ ದೂರದಲ್ಲಿ ಕೊಲೆ ನಡೆದಿತ್ತು. ಆಕೆಯ ಪ್ರತ್ಯಕ್ಷದರ್ಶಿ ಸಾಕ್ಷಿ ಹೇಳಿಕೆ ಅವಲಂಬಿಸಿ, ಆಕೆಯ ಸಾಕ್ಷಿ ಅರ್ಹವೆಂದು ಪರಿಗಣಿಸಿದ , ನ್ಯಾಯಾಲಯವು ಸಲ್ಮಾ ಅವರನ್ನುಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ ಪ್ರಕರಣವನ್ನು ಅಂಗೀಕರಿಸಿತು.

ರಕ್ಷಣೆಗಾಗಿ ಕಾನೂನು ಇದ್ದರೂ, ಅನೇಕ ಸಾಕ್ಷಿಗಳು ಪ್ರಾಸಿಕ್ಯೂಷನ್ ಅನ್ನು ಬೆಂಬಲಿಸದೆ ದೂರವಾದ ಸಮಯದಲ್ಲಿ ಸಲ್ಮಾ ತನ್ನ ನಿಲುವು ಬದಲಿಸದೆ ಅಚಲವಾಗಿ ನಿಂತಿದ್ದರು. ವಿಭೂತಿಪುರ ನಿವಾಸಿ ಮೊಹಮ್ಮದ್ ಅಮ್ಜದ್ (38) ಎಂಬಾತನಿಗೆ ಸಲ್ಮಾ ಹೇಳಿದ ಸಾಕ್ಷ್ಯಾಧಾರದ ಮೇಲೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರಿಗೆ ಜೀವಾವಧಿ ಶಿಕ್ಷೆ, 1 ಕೋಟಿ ರೂ. ದಂಡ: ಸುಗ್ರೀವಾಜ್ಞೆಗೆ ಯುಪಿ ಕ್ಯಾಬಿನೆಟ್ ಅಸ್ತು

ಆರೋಪಿ ಮೊಹಮದ್ ಅಮ್ಜದ್, ಸೈಯದ್ ಅಬ್ದುಲ್ಲಾ ಅವರನ್ನು ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಸಲ್ಮಾ ಅವರು ಏಕೈಕ ಪ್ರತ್ಯಕ್ಷದರ್ಶಿಯಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ. ಆಕೆಯ ಸಾಕ್ಷ್ಯವನ್ನು ಅಸಂಬದ್ಧ ಎಂದು ಆಕೆಯ ಕ್ರಾಸ್-ಎಕ್ಸಾಮಿನೇಷನ್‌ನಲ್ಲಿ ಸಾಧ್ಯವಾಗಲಿಲ್ಲ. ಸಲ್ಮಾ ಅವರ ಸಾಕ್ಷ್ಯವು ದೂರುದಾರರ ಸಾಕ್ಷ್ಯಗಳು, ಮರಣೋತ್ತರ ಪರೀಕ್ಷೆಯ ವರದಿಗಳು ಇತ್ಯಾದಿಗಳಿಂದ ದೃಢೀಕರಿಸಲ್ಪಟ್ಟಿದೆ. ಈ ಎಲ್ಲಾ ಅಂಶಗಳು ಆರೋಪಿಯು ಅಪರಾಧ ಎಸಗಿದ್ದಾನೆಂದು ಸೂಚಿಸುತ್ತವೆ ಎಂದು ನ್ಯಾಯಾಲಯವು ಸೇರಿಸಿತು.

ಅಬ್ದುಲ್ಲಾ ಮತ್ತು ಇತರರು 2013 ರ ನವೆಂಬರ್‌ನಲ್ಲಿ ಅಮ್ಜದ್‌ನ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದರು, ಇದರಿಂದ ಆಕ್ರೋಶಗೊಂಡಿದ್ದ ಅಮ್ಜದ್, ಆಗಸ್ಟ್ 2, 2015 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಎಚ್‌ಎಎಲ್ ತರಕಾರಿ ಮಾರುಕಟ್ಟೆ ಬಳಿ ಸೈಯದ್ ಅಬ್ದುಲ್ಲಾನನ್ನು ಕೊಲೆ ಮಾಡಿ, ಅವನ ಎದೆ, ಹೊಟ್ಟೆ ಮತ್ತು ದೇಹದ ಇತರ ಭಾಗಗಳಿಗೆ ಚಾಕುವಿನಿಂದ ಇರಿದಿದ್ದರು. ಆರೋಪಿಗಳ ಪರ ವಕೀಲರು ಲಾಭ ಪಡೆಯಲು ಪ್ರಾಸಿಕ್ಯೂಷನ್‌ನಲ್ಲಿನ ಸಣ್ಣ ವ್ಯತ್ಯಾಸಗಳನ್ನು ಸೂಚಿಸಿದರು. ಆದಾಗ್ಯೂ, ಪ್ರಥಮ ಮಾಹಿತಿ ವರದಿಯಲ್ಲಿ ಪ್ರತ್ಯಕ್ಷದರ್ಶಿಯನ್ನು ಉಲ್ಲೇಖಿಸದ ಕಾರಣ ಪ್ರಾಸಿಕ್ಯೂಷನ್‌ನ ಸಂಪೂರ್ಣ ಪ್ರಕರಣವನ್ನು ತಿರಸ್ಕರಿಸಲಾಗುವುದಿಲ್ಲ ಮತ್ತು ಅಪರಾಧ ನಡೆದ ಸ್ಥಳದಲ್ಲಿ ಸಲ್ಮಾ ಇರಲಿಲ್ಲ ಎಂದು ಧೃಡೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಜಯರಾಮ ಶಿವ ಠಾಗೋರ್ ಇತರರು ಹಾಗೂ ಮಹಾರಾಷ್ಟ್ರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ನೀಡಿದ ತೀರ್ಪಿನ ಅನ್ವಯ ಒಬ್ಬ ಪ್ರತ್ಯಕ್ಷದರ್ಶಿಯ ಸಾಕ್ಷ್ಯದ ಆಧಾರದ ಮೇಲೆ ಶಿಕ್ಷೆಗೆ ಅನುಮತಿಸಲಾಗಿದೆ, ಆದರೆ ಎಚ್ಚರಿಕೆಯ ನಿಯಮವನ್ನು ನಿರ್ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ಸಣ್ಣ ವ್ಯತ್ಯಾಸಗಳು ಪ್ರಾಸಿಕ್ಯೂಷನ್ ಪ್ರಕರಣಕ್ಕೆ ಮಾರಕವಲ್ಲ ಎಂದು ಕೋರ್ಟ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com