ಜೈಲಲ್ಲಿ ರಾಜಾತಿಥ್ಯ: ನಟ ದರ್ಶನ್ ಗೆ ಫುಲ್ ಡ್ರಿಲ್; ಕೋರ್ಟ್ ಅನುಮತಿಗೆ ಪೊಲೀಸರ ಸಿದ್ಧತೆ!

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ (Actor Darshan) ರಾಜಾತಿಥ್ಯ ಹಾಗೂ ಮೊಬೈಲ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ಸಿದ್ಧತೆ ನಡೆಸಿದ್ದು, ದರ್ಶನ್ ವಿಚಾರಣೆಗೆ ಕೋರ್ಟ್ ಅನುಮತಿ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.
actor Darshan
ನಟ ದರ್ಶನ್
Updated on

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತೆ ಸಂಕಷ್ಟ ಎದುರಿಸುವಂತಾಗಿದ್ದು, ಜೈಲಲ್ಲೇ ನಟ ದರ್ಶನ್ ವಿಚಾರಣೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಹೌದು.. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ (Actor Darshan) ರಾಜಾತಿಥ್ಯ ಹಾಗೂ ಮೊಬೈಲ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ಸಿದ್ಧತೆ ನಡೆಸಿದ್ದು, ದರ್ಶನ್ ವಿಚಾರಣೆಗೆ ಕೋರ್ಟ್ ಅನುಮತಿ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಅಂತೆಯೇ ಒಂದು ವೇಳೆ ದರ್ಶನ್ ತನಿಖೆಗೆ ಸಹಕಾರ ಕೊಟ್ಟಿಲ್ಲ ಅಂದರೆ ವಶಕ್ಕೆ ಪಡೆಯಲು ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

actor Darshan
ಜೈಲಿನಲ್ಲಿರುವ ನಟ ದರ್ಶನ್ ಗೆ ವಿಡಿಯೊ ಕಾಲ್: ರೌಡಿಶೀಟರ್ ಸತ್ಯ ಪೊಲೀಸ್ ವಶಕ್ಕೆ, ಪ್ರಕರಣ ತನಿಖೆಗೆ 3 ವಿಶೇಷ ತಂಡ

ಮೂಲಗಳ ಪ್ರಕಾರ ಆಗ್ನೇಯ ವಿಭಾಗ ಪೊಲೀಸರು ಮೂರು ಆಯಾಮದಲ್ಲಿ ತನಿಖೆಗೆ ಮುಂದಾಗಿದ್ದು, ತನಿಖೆ ಜೊತೆಗೆ ಮಹಜರು ಪ್ರಕ್ರಿಯೆ ಕೂಡ ನಡೆಯಲಿದೆ. ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗ ಕುಳಿತಿದ್ದ ಜಾಗ, ದರ್ಶನ್ ವೀಡಿಯೊ ಕಾಲ್ ಮಾಡಿದ್ದ ಜಾಗದ ಮಹಜರು ನಡೆಯಲಿದೆ ಎಂದು ಹೇಳಲಾಗಿದೆ.

ದರ್ಶನ್‌ ವಿರುದ್ಧ ಮತ್ತೆ 2 ಪ್ರಕರಣ ದಾಖಲು

ಕೊಲೆ ಆರೋಪಿ ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದ್ದು, ಕಾರಾಗೃಹ ತಿದ್ದುಪಡಿ ಅಧಿನಿಯಮ 2022 ಕಲಂ 42 ಅಡಿಯಲ್ಲಿ ದಾಖಲಾಗಿದೆ. ಕಾರಾಗೃಹ ಅಧಿನಿಯಮ ಸೆಕ್ಷನ್ 42ಕ್ಕೆ ಆರು ತಿಂಗಳು ಶಿಕ್ಷೆ ಅಥವಾ ಇನ್ನೂರು ರೂಪಾಯಿ ದಂಡ ಇಲ್ಲವಾದರೆ ಶಿಕ್ಷೆ ಜೊತೆಗೆ ದಂಡ ವಿಧಿಸಲು ಅವಕಾಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com