ಬೆಂಗಳೂರು: ಚೆನ್ನೈ ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (CMRL) ಪ್ರಸ್ತಾಪಿಸಿರುವ 6,900 ಕೋಟಿ ರೂಪಾಯಿ ವೆಚ್ಚದ ಬೊಮ್ಮಸಂದ್ರ-ಹೊಸೂರು ಮೆಟ್ರೊ ಯೋಜನೆಯು ಕರ್ನಾಟಕದಲ್ಲಿ ಐದು ಮತ್ತು ತಮಿಳುನಾಡಿನಲ್ಲಿ ಏಳು ನಿಲ್ದಾಣಗಳನ್ನು ಹೊಂದಿರುತ್ತದೆ.
23 ಕಿಮೀ ಎತ್ತರಿಸಿದ(Elevated) ಮಾರ್ಗದ (ಕರ್ನಾಟಕದಲ್ಲಿ 12 ಕಿಮೀ ಮತ್ತು ತಮಿಳು ನಾಡಿನಲ್ಲಿ 11 ಕಿಮೀ) ವಿವರವಾದ ಕಾರ್ಯಸಾಧ್ಯತಾ ವರದಿಯನ್ನು ಸಿಎಂಆರ್‌ಎಲ್‌ನ ತಂಡವು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳಿಗೆ ಸಲ್ಲಿಸಿದೆ.
ಆದರೆ, ಐಟಿ ಸಿಟಿ ಬೆಂಗಳೂರಿನ ಉದ್ಯಮ ಹಿತಾಸಕ್ತಿಗಳಿಗೆ ಹೊಸೂರು ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ಸಾಧ್ಯತೆಯಿರುವುದರಿಂದ ಕರ್ನಾಟಕದಿಂದ ಯೋಜನೆಗೆ ಪ್ರತಿರೋಧ ವ್ಯಕ್ತವಾಗುತ್ತಿದೆ.
ತಮಿಳುನಾಡು ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಯೋಜಿಸುತ್ತಿರುವುದರಿಂದ, ದಕ್ಷಿಣ ಬೆಂಗಳೂರಿನಿಂದ ವಿಮಾನಯಾನ ಮಾಡುವವರನ್ನು ಆಕರ್ಷಿಸುವ ಸಾಧ್ಯತೆಯಿದೆ, ಬೊಮ್ಮಸಂದ್ರದಿಂದ, ನಮ್ಮ ಮೆಟ್ರೋದ ಹಳದಿ ಮಾರ್ಗವು ಆರ್‌ವಿ ರಸ್ತೆಯನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಏರ್‌ಪೋರ್ಟ್ ಲೈನ್ (Blue line) ನೊಂದಿಗೆ ಇಂಟರ್‌ಚೇಂಜ್‌ನೊಂದಿಗೆ ಸಂಪರ್ಕಿಸುತ್ತದೆ.
ಮಾರ್ಗವು ಉಪನಗರ ರೈಲು ಮತ್ತು ಬಸ್ ಡಿಪೋಗಳನ್ನು ದಾಟಿ ಹೋಗುತ್ತದೆ. ಬೊಮ್ಮಸಂದ್ರ ಮಾರ್ಗವನ್ನು ಅತ್ತಿಬೆಲೆಯವರೆಗೆ ವಿಸ್ತರಿಸಲು ಬೆಂಗಳೂರೂ ಮೆಟ್ರೊ ಜುಲೈ 9 ರಂದು ಸ್ವಂತ ಯೋಜನೆಯನ್ನು ಪ್ರಾರಂಭಿಸಿತು.
ಬಿಎಂಆರ್ ಸಿಎಲ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ: ಅಧಿಕಾರಿಗಳು
ಆರ್ವಿ ಅಸೋಸಿಯೇಟ್ಸ್ ಆರ್ಕಿಟೆಕ್ಟ್ಸ್ ಇಂಜಿನಿಯರ್ ಮತ್ತು ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸುತ್ತಿದೆ, ಅದು ಪೂರ್ಣಗೊಳ್ಳಲು ಆರು ತಿಂಗಳು ತೆಗೆದುಕೊಳ್ಳಬಹುದು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ತಮಿಳುನಾಡು ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸುವಂತೆ ಸೂಚಿಸಿದೆ.
ಸಾಧ್ಯತಾ ವರದಿಯನ್ನು ಆರಂಭದಲ್ಲಿ ಬಿಎಂಆರ್‌ಸಿಎಲ್ ಸಿದ್ಧಪಡಿಸಬೇಕಿತ್ತು. ಆದರೆ, ತಮಿಳುನಾಡು ಈ ಯೋಜನೆಗೆ ಹೆಚ್ಚಿನ ಆಸಕ್ತಿ ತೋರಿಸಿದ್ದರಿಂದ ಬೆಂಗಳೂರು ಮೆಟ್ರೋ ಅದನ್ನು ಮುಂದುವರಿಸಲಿಲ್ಲ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈಗ ತಮಿಳುನಾಡಿಗೆ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸುವಂತೆ ಕೇಳಿಕೊಂಡಿದೆ ಎಂದು ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದೆ.
ಹೊಸೂರು ಬೆಂಗಳೂರಿನಿಂದ ಕೇವಲ 39 ಕಿಮೀ ದೂರದಲ್ಲಿದೆ. ಬೆಂಗಳೂರಿಗೆ ಹೋಲಿಸಿದರೆ ಉತ್ತಮ ರಸ್ತೆಗಳು ಮತ್ತು ಕಡಿಮೆ ದಟ್ಟಣೆಯೊಂದಿಗೆ, ಮೆಟ್ರೋ ಸಂಪರ್ಕವು ಹೊಸೂರಿನ ಆರ್ಥಿಕ ಭವಿಷ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೆಂಗಳೂರು ಹೊಸೂರಿನಿಂದ ತೀವ್ರ ಪೈಪೋಟಿ ಎದುರಿಸುವ ಸಾಧ್ಯತೆಯಿದೆ ಎಂದು ಮೂಲವೊಂದು ಟಿಎನ್‌ಐಇಗೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲಭ್ಯರಾಗಿಲ್ಲ.
Advertisement