ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಆಸ್ಪತ್ರೆ ಮಂಚದ ಮೇಲೆ ಮಲಗಿರುವ ಫೋಟೋ ವೈರಲ್ ಆಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ದರ್ಶನ್ ಅವರಿಗೆ ಅಪಾರವಾದ ಬೆನ್ನು ನೋವು ಕಾಡಿತ್ತು. ಹೀಗಾಗಿ ಅವರಿಗೆ ಚಿಕಿತ್ಸೆ ಪಡೆಯಲು ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಮೊದ ಮೊದಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾ ಬೇಡವಾ ಎಂಬ ಗೊಂದಲದಲ್ಲಿ ನಟ ದರ್ಶನ್ ಇದ್ದರು. ಇದೀಗ ದಿಢೀರ್ ಅಂತ ದರ್ಶನ್ ಆಸ್ಪತ್ರೆಯ ಮಂಚದ ಮೇಲೆ ಮಲಗಿರುವ ಫೋಟೋ ವೈರಲ್ ಆಗಿದೆ.
ಅಕ್ಟೋಬರ್ 30ರಂದು ನಟ ದರ್ಶನ್ ಮಧ್ಯಂತರ ಜಾಮೀನು ಸಿಕ್ಕಿ ಹೊರಬಂದಿದ್ದರು. ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಒಟ್ಟು 42 ದಿನಗಳ ಮಧ್ಯಂತರ ಜಾಮೀನಿನಲ್ಲಿ ಈಗಾಗಲೇ 33 ದಿನಗಳು ಕಳೆದಿವೆ. ಇನ್ನು 9 ದಿನಗಳು ಬಾಕಿ ಇದ್ದು, ಆ ಬಳಿಕ ಜೈಲಿಗೆ ಮರಳಬೇಕಿದೆ. ಇದರ ಮಧ್ಯೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ದಾಖಲಾಗಿ ಒಂದು ತಿಂಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾದ ಫೋಟೋ ಒಂದು ವೈರಲ್ ಆಗಿದೆ.
ಮಧ್ಯಂತರ ಜಾಮೀನು ಮುಕ್ತಾಯಕ್ಕೆ ಇನ್ನು 9 ದಿನ ಬಾಕಿ ಇರುವಂತೆ ನಟನ ಚಿಕಿತ್ಸೆ ಬಗ್ಗೆ ನಾಲ್ಕು ವಾರಗಳಿಂದ ಯಾವುದೇ ಮಾಹಿತಿ ಬಿಟ್ಟು ಕೊಡದ ಕುಟುಂಬಸ್ಥರು ಇಂದು ದಿಢೀರ್ ಅಂತ ಫೋಟೊ ಬಿಡುಗಡೆ ಮಾಡಿದ್ದಾರೆ. ದರ್ಶನ್ ಚಿಕಿತ್ಸೆ ಬಗ್ಗೆ ಪ್ರಾಸಿಕ್ಯೂಶನ್‌ಗೆ ಅನುಮಾನ ಮೂಡಿದ್ದು ಕೋರ್ಟ್ ಸಹ ದರ್ಶನ್ ಆರೋಗ್ಯದ ಬಗ್ಗೆ ವಿಚಾರಿಸಿತ್ತು. ಇದರ ಬೆನ್ನಲ್ಲೆ ಫೋಟೋ ಬಿಡುಗಡೆಯಾಗಿರುವುದು ಹಲವು ಅನುಮಾನ ಮೂಡಿಸಿವೆ.
Advertisement