
ಬೆಂಗಳೂರು: ವಕ್ಫ್ ಅಕ್ರಮ ಮುಚ್ಚಿ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಮ್ಮ ಪಕ್ಷದ ನಾಯಕರಿಗೆ 150 ಕೋಟಿ ರೂ. ಆಫರ್ ಮಾಡಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಶುಕ್ರವಾರ ಆರೋಪ ಮಾಡಿದರು,
ವಕ್ಫ್ ಆಸ್ತಿ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಚಿವ ಖರ್ಗೆ, ಬಿಜೆಪಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಆರೋಪ ಪ್ರಸ್ತಾಪ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅನ್ವರ್ ಮಾಣಿಪ್ಪಾಡಿ ಪ್ರಧಾನಿಗೆ ಪತ್ರ ಬರೆದು, ವಕ್ಫ್ನಲ್ಲಿ 2.3 ಲಕ್ಷ ಕೋಟಿ ರೂ ಅಕ್ರಮ ಆಗಿದೆ. ಇದರಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ನಾಯಕರು ಇದ್ದಾರೆ. ಇದನ್ನು ಮುಚ್ಚಿ ಹಾಕಲು ಅಂದಿನ ಸಿಎಂ ಯಡಿಯೂರಪ್ಪ ಅವರು ವಿಜಯೇಂದ್ರರನ್ನು ಕಳಿಸಿ ನನಗೆ ಕೋಟ್ಯಾಂತರ ರೂಪಾಯಿ ಆಫರ್ ಮಾಡಿದ್ದರು. ನನ್ನ ಮನೆಗೆ ಗನ್ ಮ್ಯಾನ್ ಜತೆ ವಿಜಯೇಂದ್ರ ಬಂದು ವಕ್ಫ್ ಅಕ್ರಮ ಬಗ್ಗೆ ಮಾತಾಡದಂತೆ 150 ಕೋಟಿ ರೂ. ಆಫರ್ ಮಾಡಿದ್ದರು ಎಂದು ಮಾಣಿಪ್ಪಾಡಿ ಆರೋಪಿಸಿದ್ದರು.
ಈ ಕುರಿತು ಬಿಜೆಪಿಯ ಯಾವ ಸಿಎಂ ಸಹ ಕ್ರಮ ಕೈಗೊಳ್ಳಲಿಲ್ಲ ಯಾಕೆ?. ಈಗಿನ ಬಿಜೆಪಿ ರಾಜ್ಯಾಧ್ಯಕ್ಷರು ಯಾರ ಹಿತಾಸಕ್ತಿ ಕಾಪಾಡಲು ಮಾಣಿಪ್ಪಾಡಿಗೆ ಹಣದ ಆಮಿಷ ಕೊಡಲು ಹೋಗಿದ್ದರು? ಈ ವಿಚಾರದಲ್ಲಿ ಪ್ರಧಾನಿ ಮೋದಿ ಮೌನವಹಿಸಿರುವುದು ಏಕೆ? ಮಾಣಿಪ್ಪಾಡಿ ಅವರ ಹೇಳಿಕೆಗಳು ಸುಳ್ಳಾಗಿದ್ದರೆ, ಅವರ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ? ಆರೋಪಗಳಿಗೆ ಉತ್ತರ ನೀಡುವಲ್ಲಿ ಅಥವಾ ನಿರಾಕರಿಸುವಲ್ಲಿ ಪಕ್ಷ ವಿಫಲವಾಗಿದೆ. ವಕ್ಫ್ ವಿಚಾರದಲ್ಲಿ ಬಿಜೆಪಿಯವರು ಬೂಟಾಟಿಕೆ ಮಾಡುತ್ತಿದ್ದಾರೆಂದು ಕಿಡಿಕಾರಿದರು.
Advertisement