ಬೆಂಗಳೂರು: ಮನೆಯೂ ಇಲ್ಲ, ಪರಿಹಾರವೂ ಇಲ್ಲ; ನ್ಯಾಯಕ್ಕಾಗಿ NHRC ಮೊರೆ ಹೋದ ಖರೀದಿದಾರ!

ತಡ ಮಾಡುವುದು ಕೇವಲ ನಂಬಿಕೆಯ ಉಲ್ಲಂಘನೆಯಲ್ಲ ಆದರೆ ಗೌರವಾನ್ವಿತ ಜೀವನಕ್ಕಾಗಿ ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಮನೆ ಖರೀದಿದಾರರು NHRC ಸಂಪರ್ಕಿಸಿರುವುದು ಅಪರೂಪದ ನಿದರ್ಶನವಾಗಿದೆ.
Mantri Energia residential project
ಮಾನ್ಯತಾ ಟೆಕ್ ಪಾರ್ಕ್ ಬಳಿ ನಿರ್ಮಾಣವಾಗುತ್ತಿರುವ ಅಪಾರ್ಟ್ ಮೆಂಟ್
Updated on

ಬೆಂಗಳೂರು: ನಿಗದಿತ ಸಮಯದಲ್ಲಿ ಮನೆಯನ್ನೂ ಪೂರ್ಣಗೊಳಿಸಿಕೊಡದೆ, ಪರಿಹಾರ ಹಣವನ್ನು ನೀಡದೆ ಸತಾಯಿಸುತ್ತಿರುವ ಬಿಲ್ಡರ್ ವಿರುದ್ಧ ಬೇಸತ್ತ ಖರೀದಿದಾರರೊಬ್ಬರು ನ್ಯಾಯ ದೊರಕಿಸಿಕೊಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (NHRC) ಸಂಪರ್ಕಿಸಿದ್ದಾರೆ.

ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎನ್‌ಎಚ್‌ಆರ್‌ಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (ಎಸ್‌ಎಚ್‌ಆರ್‌ಸಿ) ಪತ್ರ ಬರೆದಿದೆ. ಉಪ ಆಯುಕ್ತರಿಗೆ (ಬೆಂಗಳೂರು ನಗರ) ಜನವರಿ 9, 2025 ರ ಮೊದಲು ಮನೆ ಖರೀದಿದಾರರಿಗೆ ಸಹಾಯ ಮಾಡಲು ತೆಗೆದುಕೊಂಡ ಕ್ರಮದ ಕುರಿತು ವರದಿಯನ್ನು ಸಲ್ಲಿಸಲು ಆದೇಶಿಸಿದೆ. ತಡ ಮಾಡುವುದು ಕೇವಲ ನಂಬಿಕೆಯ ಉಲ್ಲಂಘನೆಯಲ್ಲ ಆದರೆ ಗೌರವಾನ್ವಿತ ಜೀವನಕ್ಕಾಗಿ ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಮನೆ ಖರೀದಿದಾರರು NHRC ಸಂಪರ್ಕಿಸಿರುವುದು ಅಪರೂಪದ ನಿದರ್ಶನವಾಗಿದೆ. ಮಂತ್ರಿ ಡೆವಲಪರ್ಸ್ ನ `ಮಂತ್ರಿ ಎನರ್ಜಿಯಾ', ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‌ನೊಳಗೆ ಮೊದಲ ವಸತಿ ಸಂಕೀರ್ಣ ನಿರ್ಮಿಸುತ್ತಿದೆ. 18 ಮಹಡಿಗಳನ್ನು ಹೊಂದಿರುವ ಆರು ಟವರ್ ನಲ್ಲಿ ಒಟ್ಟು 832 ಫ್ಲಾಟ್‌ಗಳನ್ನು ಅದ್ಭುತ ಸೌಕರ್ಯಗಳೊಂದಿಗೆ ನಿರ್ಮಿಸಲು ಯೋಜಿಸಲಾಗಿತ್ತು.

ಡೆವಲಪರ್‌ನಿಂದ ಫ್ಲಾಟ್ ಖರೀದಿಸಿದ 300 ಜನರ ಪೈಕಿ ಅಮೃತಾ ಸುಧಾಕರ್ ಕೂಡ ಇದ್ದಾರೆ. ಆಕೆಯ ಕುಟುಂಬವು 78 ಲಕ್ಷ ರೂಪಾಯಿಗಳನ್ನು ಪಾವತಿಸಿದೆ ಎಂದು ಐಟಿ ಉದ್ಯಮದಲ್ಲಿ ಸ್ವತಂತ್ರ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಅಮತಾ ಪತ್ನಿ ಸುಧಾಕರ ಲಕ್ಷ್ಮಣರಾಜ ತಿಳಿಸಿದ್ದಾರೆ. ನಾವು ಆಗಸ್ಟ್ 2018 ರೊಳಗೆ ನಮ್ಮ ಪಾಲಿನ ಹಣ ಪಾವತಿಸಿದ್ದೇವೆ, ಡಿಸೆಂಬರ್ 2019 ರೊಳಗೆ ಫ್ಲಾಟ್ ಬಿಲ್ಡರ್ ಹಸ್ತಾಂತರಿಸುವ ಭರವಸೆ ನೀಡಿದ್ದರರು. ನಾವು ಟೆಕ್ ಪಾರ್ಕ್‌ನಲ್ಲಿರುವ ಅವರ ಕಸ್ಟಮರ್ ಕೇರ್ ಕಚೇರಿಯನ್ನು ಹಲವು ಬಾರಿ ಸಂಪರ್ಕಿಸಿದ್ದೇವೆ. ಮೂರು ತಿಂಗಳೊಳಗೆ ಅಪಾರ್ಟ್ಮೆಂಟ್ ಸಿದ್ಧವಾಗಲಿದೆ ಎಂದು ಸುಳ್ಳು ಭರವಸೆ ನೀಡಿದ್ದರು. ಬೇಸರಗೊಂಡ ನಾವು ಫೆಬ್ರವರಿ 2021 ರಲ್ಲಿ ಕರ್ನಾಟಕ-ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು (ಕೆ-ರೆರಾ) ಸಂಪರ್ಕಿಸಿದ್ದವು, ಕೆ ರೇರಾ 12 ತಿಂಗಳೊಳಗೆ ನಮ್ಮ ಪರವಾಗಿ ತೀರ್ಪು ನೀಡಿತು. ಮಂತ್ರಿ ಎನರ್ಜಿಯಾವನ್ನು ಪರೀಕ್ಷಿಸಿದ RERA ತಂಡವು ಕೇವಲ ಶೇ. 52 ಯೋಜನೆ ಪೂರ್ಣಗೊಂಡಿದೆ ಎಂದು ವರದಿ ಮಾಡಿದೆ.

Mantri Energia residential project
ಬೆಂಗಳೂರು: ಬಿಡಿಎ ಫ್ಲ್ಯಾಟ್‌ ಮಾರಾಟ ಮೇಳ; 1 ಸಾವಿರ ಮನೆಗಳ ಮಾರಾಟ!

ಮನೆ ಖರೀದಿದಾರರು ಪಾವತಿಸಿದ ಮೊತ್ತದ ಶೇ. 10 ರಷ್ಟು ಮೊತ್ತವನ್ನು ಪ್ರತಿ ವರ್ಷ ಪರಿಹಾರವಾಗಿ ಪಾವತಿಸಲು ಮಂತ್ರಿ ಡೆವಲಪರ್‌ಗಳಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು. ಇದು ಜನವರಿ 2020 ರಿಂದ ಯೋಜನೆಯು ಪೂರ್ಣಗೊಳ್ಳುವವರೆಗೆ ಚಾಲ್ತಿಯಲ್ಲಿ ಇರುತ್ತದೆ. ಅವರು 39 ಲಕ್ಷ ರೂ ಪಾವತಿಸೇಕಾಗಿದೆ,ಆದರೆ ಬಿಲ್ಡರ್ ಇಲ್ಲಿಯವರೆಗೆ ನಮಗೆ ಹಣ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ. ಈ ಪ್ರಾಜೆಕ್ಟ್ ನ ಕಾಮಗಾರಿ ಸ್ಥಗಿತಗೊಂಡಿದೆ. “ಅಪಾರ್ಟ್‌ಮೆಂಟ್‌ಗಳ ಅಸ್ಥಿಪಂಜರದ ರಚನೆ ಮಾತ್ರ ಪೂರ್ಣಗೊಂಡಿದೆ. ಒಂದು ಮನೆಯೂ ವಾಸ ಮಾಡುವ ಸ್ಥಿತಿಯಲ್ಲಿಲ್ಲ' ಎಂದು ಲಕ್ಷ್ಮಣರಾಜ ತಿಳಿಸಿದರು. ಕೆಲವು ಖರೀದಿದಾರರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣಗಳನ್ನು ದಾಖಲಿಸಿದರೆ, ಕೆಲವರು ಬೆಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com