ಡಿಜಿಟಲ್​ ಅರೆಸ್ಟ್​: ಬೆಂಗಳೂರಿನ ಟೆಕ್ಕಿಗೆ ಬರೋಬ್ಬರಿ 11.8 ಕೋಟಿ ರೂ. ವಂಚನೆ!

ವಂಚನೆಗೊಳಗಾದ ಸುಭಾಷ್(ಹೆಸರು ಬದಲಾಯಿಸಲಾಗಿದೆ) ಅವರು ರಾಜಧಾನಿ ಬೆಂಗಳೂರಿನ ಹೆಬ್ಬಾಳ ಸಮೀಪದ ಜಿಕೆವಿಕೆ ಲೇಔಟ್ ನಿವಾಸಿಯಾಗಿದ್ದು, ನವೆಂಬರ್ 25 ರಿಂದ ಡಿಸೆಂಬರ್ 15ರ ನಡುವೆ ಹಣ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
Digital Arrest
ಡಿಜಿಟಲ್ ಅರೆಸ್ಟ್ (ಸಾಂಕೇತಿಕ ಚಿತ್ರ) online desk
Updated on

ಬೆಂಗಳೂರು: ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇದ್ದು, ಡಿಜಿಟಲ್​ ಅರೆಸ್ಟ್ ಮೂಲಕ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 11.8 ಕೋಟಿ ರೂ. ವಂಚಿಸಲಾಗಿದೆ.

ವಂಚನೆಗೊಳಗಾದ ಸುಭಾಷ್(ಹೆಸರು ಬದಲಾಯಿಸಲಾಗಿದೆ) ಅವರು ರಾಜಧಾನಿ ಬೆಂಗಳೂರಿನ ಹೆಬ್ಬಾಳ ಸಮೀಪದ ಜಿಕೆವಿಕೆ ಲೇಔಟ್ ನಿವಾಸಿಯಾಗಿದ್ದು, ನವೆಂಬರ್ 25 ರಿಂದ ಡಿಸೆಂಬರ್ 15ರ ನಡುವೆ ಹಣ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ತಾವು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರೆಂದು ಹೇಳಿಕೊಂಡು ಸೈಬರ್​ ವಂಚಕರು ಸುಭಾಷ್ ಅವರಿಗೆ ಕರೆ ಮಾಡಿದ್ದಾರೆ. “ಮುಂಬೈನ ಕೊಲಾಬಾದಲ್ಲಿ ನಿಮ್ಮ ಮೇಲೆ ಪ್ರಕರಣವೊಂದು ದಾಖಲಾಗಿದೆ. ನಿಮ್ಮ ಆಧಾರ್ ಕಾರ್ಡ್​ ಬಳಸಿಕೊಂಡು ಹಣ ವರ್ಗಾವಣೆಯಾಗಿದೆ. 6 ಕೋಟಿ ರೂ. ವಂಚನೆಯಾಗಿದೆ. ಈಗ ಕೇಸ್​ ಸುಪ್ರೀಂಕೋರ್ಟ್​​ನಲ್ಲಿ ಇದೆ ಎಂದು ಹೆದರಿಸಿದ್ದಾರೆ.

Digital Arrest
ಬೆಂಗಳೂರಿನಲ್ಲಿ ಆನ್‌ಲೈನ್ ಹೂಡಿಕೆ ವಂಚನೆ ದಂಧೆ: 10 ಮಂದಿ ಬಂಧನ

ಬಳಿಕ, ವಂಚಕರು ವಿಡಿಯೋ ಕಾಲ್ ಮಾಡಿ ಒಂದು‌ ತಿಂಗಳ ಕಾಲ ಸುಭಾಷ್​ ಅವರನ್ನು ಡಿಜಿಟಲ್ ಅರೆಸ್ಟ್ (Digital Arrest) ಮಾಡಿದ್ದಾರೆ. ಒಂದು ತಿಂಗಳ ಕಾಲ ಮನೆಯಲ್ಲಿ ಇರದಂತೆ ಹೇಳಿದ್ದಾರೆ. ಹೀಗಾಗಿ ಅವರು ಯಲಹಂಕದ ಲಾಡ್ಜ್​ವೊಂದರಲ್ಲಿ ಇದ್ದರು.

ಸುಭಾಷ್ ಅವರು ಕಳೆದ ಹಲವು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಇದನ್ನೇ ಟಾರ್ಗೆಟ್​ ಮಾಡಿದ ಸೈಬರ್ ವಂಚಕರು ಟೆಕ್ಕಿ ವಿನಯ್​ ಕುಮಾರ್​ ಅವರಿಂದ ಷೇರುಗಳನ್ನು ಮಾರಾಟ ಮಾಡಿಸಿದ್ದಾರೆ. ಬಳಿಕ ಹಂತ ಹಂತವಾಗಿ ಒಂದು ತಿಂಗಳ ಕಾಲ ಅವರಿಂದ 11 ಕೋಟಿ 83 ಲಕ್ಷ ರೂ. ಅನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಈ ಸಂಬಂಧ ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com