Chaddi Gang: ಹುಬ್ಬಳ್ಳಿಯಲ್ಲಿ ಪೊಲೀಸ್ ಫೈರಿಂಗ್, ನಟೋರಿಯಸ್ 'ಚಡ್ಡಿ ಗ್ಯಾಂಗ್' ದರೋಡೆಕೋರನ ಬಂಧನ, Video!

ಹುಬ್ಬಳ್ಳಿ-ಧಾರವಾಡದ ನವಲೂರಿನಲ್ಲಿ ವಿಕಾಸ ಕುಮಾರ್ ಎಂಬುವವರ ಮನೆಯ ಬಾಗಿಲಿಗೆ ಸೈಜ್ ಕಲ್ಲಿನಿಂದ ಹೊಡೆದು ಮನೆಯೊಳಗೆ ನುಗ್ಗಿದ ಡಕಾಯಿತರ ತಂಡ ಕುಟುಂಬದ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ದಂಪತಿಗಳ ಕೈಕಾಲು ಕಟ್ಟಿ, ಮನಬಂದಂತೆ ಹಲ್ಲೆ ಮಾಡಿ ದರೋಡೆ ಮಾಡಿ ಪರಾರಿಯಾಗಿತ್ತು.
Notorious inter-State robber Arrested
ನಟೋರಿಯಸ್ ಚಡ್ಡಿಗ್ಯಾಂಗ್ ದರೋಡೆಕೋರನ ಬಂಧನ
Updated on

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕುಖ್ಯಾತ ಚಡ್ಡಿಗ್ಯಾಂಗ್ ನ ಅಂತರರಾಜ್ಯ ದರೋಡೆಕೋರನೋರ್ವನನ್ನು ಪೊಲೀಸರು ಕಾಲಿಗೆ ಗುಂಡುಹಾರಿಸಿ ಬಂಧಿಸಿದ್ದಾರೆ.

ಹೌದು.. ಈ ಹಿಂದೆ ಹುಬ್ಬಳ್ಳಿ-ಧಾರವಾಡದ ನವಲೂರಿನಲ್ಲಿ ವಿಕಾಸ ಕುಮಾರ್ ಎಂಬುವವರ ಮನೆಯ ಬಾಗಿಲಿಗೆ ಸೈಜ್ ಕಲ್ಲಿನಿಂದ ಹೊಡೆದು ಮನೆಯೊಳಗೆ ನುಗ್ಗಿದ ಡಕಾಯಿತರ ತಂಡ ಕುಟುಂಬದ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿ ಪರಾರಿಯಾಗಿತ್ತು. ಮನೆಯಲ್ಲಿದ್ದ ದಂಪತಿಗಳ ಕೈಕಾಲು ಕಟ್ಟಿ, ಬಡಿಗೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಇದೀಗ ಮಹತ್ವದ ಕಾರ್ಯಾಚರಣೆ ನಡೆಸಿ ಓರ್ವ ನಟೋರಿಯಸ್ ದರೋಡೆಕೋರನನ್ನು ಬಂಧಿಸಿದ್ದಾರೆ. 4 ರಾಜ್ಯಗಳಲ್ಲಿ 50 ಪ್ರಕರಣಗಳಲ್ಲಿ ಬೇಕಾಗಿದ್ದ ಪ್ರಮುಖ ಆರೋಪಿ ಕಾಲಿಗೆ ಗುಂಡು ಹಾರಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Notorious inter-State robber Arrested
ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆ; ಎಂಜಿ ರೋಡ್ ಮತ್ತಿತರ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ರಾಯಾಪುರದ ಬಳಿ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿ ಆರೋಪಿ ವೆಂಕಟೇಶ್ವರ ರಾವ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಪಾಲಾ ವೆಂಕಟೇಶ್ವರ ರಾವ್ ಅಲಿಯಾಸ್ ಕಲ್ಯಾಣ್‌ಕುಮಾರ್ ಆಂಧ್ರ ಪ್ರದೇಶದ ಮೂಲದವನಾಗಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಎರಡೂ ಕಾಲುಗಳಿಗೆ ಪಿಎಸ್ಐ ಪ್ರಮೋದ್ ಗುಂಡು ಹಾರಿಸಿದ್ದಾರೆ.

ಪೊಲೀಸರ ಮೇಲೆಯೂ ಹಲ್ಲೆಯಾಗಿದ್ದು, ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಇನ್ನೂಳಿದವರ ಬಂಧನಕ್ಕೆ ಬಲೆ ಬಿಸಿದ್ದಾರೆ.

ಸಿಸಿಟಿವಿಯಲ್ಲಿ ಚಡ್ಡಿ ಗ್ಯಾಂಗ್ ಕ್ರೌರ್ಯ

ನವಲೂರಿನ ಮನೆ ಮೇಲೆ ದಾಳಿ ಮಾಡಿದ್ದ ಈ ನಟೋರಿಯಸ್ ಗ್ಯಾಂಗ್ ಮೊದಲು ಮನೆ ಬಾಗಿಲಿಗೆ ದೊಡ್ಡ ಸೈಜ್ ಕಲ್ಲಿನ ಮೂಲಕ ಬಾಗಿಲು ಮುರಿದಿದ್ದರು. ಬಳಿಕ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ದಂಪತಿಗಳ ಕೈಕಾಲು ಕಟ್ಟಿ, ಬಡಿಗೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದೀಗ ಚಡ್ಡಿ ಗ್ಯಾಂಗ್’ನ ಕರಾಳತೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವಳಿ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.

Stuartpuram ಗ್ಯಾಂಗ್ ಜೊತೆ ನಂಟು: ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, 'ಆಂಧ್ರ ಪ್ರದೇಶದ ನಟೋರಿಯಸ್ ಸ್ಟುವರ್ಟ್ ಪುರಂ ಗ್ಯಾಂಗ್ ಜೊತೆಗೂ ಈ ಪಾಲಾ ವೆಂಕಟೇಶ್ವರ ರಾವ್ ಗೆ ಸಂಪರ್ಕವಿದೆ. ಈತ ಮೂಲತಃ ಕರ್ನೂಲ್ ಜಿಲ್ಲೆಯವನಾಗಿದ್ದು, ಈತನ ಇಡೀ ಕುಟುಂಬವೇ ಡಕಾಯಿತಿಯನ್ನು ಉದ್ಯೋಗವಾಗಿಸಿಕೊಂಡಿದೆ.

ಸ್ಥಳೀಯವಾಗಿ ತುಂಬಾ ಕ್ರೂರವಾಗಿ ಡಕಾಯಿತಿ ಮಾಡುವ ಗ್ಯಾಂಗ್ ಇದಾಗಿದೆ. ಪ್ರಸ್ತುತ ಆತನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ನಮ್ಮ ಸಿಬ್ಬಂದಿ ಪ್ರಮೋದ್ ಮತ್ತು ಆನಂದ್ ಬಡಿಗೇರ್ ಎಂಬುವವರಿಗೂ ಗಾಯಗಳಾಗಿವೆ. ಅವರಿಗೂ ಚಿಕಿತ್ಸೆ ನಡೆಯುತ್ತಿದೆ. ಪ್ರಕರಣದ ಇತರೆ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com